ಬೀದರ್

ಜನತೆಯ ಮುಂದಿಡುವುದು ಪತ್ರಿಕೆಗಳ ಕರ್ತವ್ಯವಾಗಿದೆ : ವೀರಭದ್ರಪ್ಪ ಉಪ್ಪಿನ್

 ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಂತರ ಪತ್ರಿಕ ಮಾಧ್ಯಮವು ನಾಲ್ಕನೇ ಅಂಗವಾಗಿದೆ. ಸರ್ಕಾರದ ವೈಫಲ್ಯಗಳನ್ನು ಹಾಗೂ ಜನರ ಸಮಸ್ಯೆ ಗಳನ್ನು ನಿಷ್ಪಕ್ಷಪಾತ ವಾಗಿ ವರದಿ ಮಾಡುವುದು ಪತ್ರಿಕೆಗಳ ಕರ್ತವ್ಯವಾಗಿದೆ ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ  ಕಾರ್ಯಕಾರಿ ಸಮಿತಿ ಸದಸ್ಯರಾದ  ವೀರಭದ್ರಪ್ಪ ಉಪ್ಪಿನ್ ರವರು ಅಭಿಪ್ರಾಯ ಪಟ್ಟರು.ಅವರು ಇಂದು ಬೀದರಿನ ಬಸವ ನಗರದಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳು ನೌಕ ರರ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾದ ವಿಶ್ವ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾ ದ  ಅರವಿಂದಕುಲಕರ್ಣಿಯವರು ಮಾತನಾಡಿ, ಪತ್ರಿಕೆಗಳು ವರದಿಗಳನ್ನು ಸರ್ಕಾರದ ಮಟ್ಟದಲ್ಲಿ ಹಾಗೂ ನ್ಯಾಯಾಂಗ ಲ್ಲಿ ದಾಖಲೆಗಳ ರೂಪದಲ್ಲಿ ಸ್ವೀಕರಿಸಲಾಗುತ್ತದೆ. ಆದ್ದರಿಂದ ದೃಶ್ಯ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮವು ಬಹಳಷ್ಟು ಮಹತ್ವವನ್ನು ಹೊಂದಿದೆ ಎಂದು ಅಭಿಪ್ರಾಯ ಪಟ್ಟರು. ನಿವೃತ್ತ ಹಿರಿಯ ಅಧಿಕಾರಿ ಶ್ರೀ ನಾರಾಯಣರಾವ್ ಕಾಂಬಳೆ ಅವರು ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು. ಮಹಾದೇವಿ,   ಶೋಭಾವತಿ ಇಂದುಮತಿ, ವೇದಾವತಿ, ಪ್ರಕಾಶ್, ರಮೇಶ್, ಪುಷ್ಪಾ ವತೀ  ಕೃಷ್ಣ ಮುಂತಾದ ವರು  ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!