ಗುರು ನಾನಕ ಪಬ್ಲಿಕ್ ಶಾಲೆಯ ಮಕ್ಕಳ ಉತ್ತಮ ಪ್ರದರ್ಶನ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಬೆಂಗಳೂರು 2023-24 ನೇ ಸಾಲಿನ ಚಿತ್ರಕಲೆ ಗ್ರೇಡ್ ಪರೀಕ್ಷೆಯಲ್ಲಿ ನೇಹರು ಸ್ಟೇಡಿಯಂ ಹತ್ತಿರ ವಿರುವ ಗುರು ನಾನಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹೈಯರ್ ಮತ್ತು ಲೋವರ್ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಮತ್ತು ಪ್ರಥಮ ದರ್ಜೇಯಲ್ಲಿಯೇ ಪಾಸಾಗಿ ಗಮನ ಸೆಳೆದಿದ್ದಾರೆ.
ಹೈಯರ ಪರೀಕ್ಷೆ ಅಗ್ರಶ್ರೇಣಿ ಮತ್ತು ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳು :
ಪದ್ಮಾವತಿ ಅಶೋಕ, ವಿನಿತಾ ಬಾಬುರಾವ, ಶ್ರಾವಣಿ ಮಹೇಶ್, ಅರ್ಪಿತಾ ಮಾರುತಿ, ಭಾಗ್ಯವತಿ ಭೀಮರಾವ, ಸೈಯದ ಜಕವಾನ್ ಸೈಯದ ಮುಜಾಹೀದ್, ಆರ್ಯನ್ ಸಿಂಗ್ ರಾಮಸಿಂಗ್ ಮತ್ತು ಸಂಗಮೇಶ್ವರ ಸಂಜೀವ.
ಲೋವರ್À ಪರೀಕ್ಷೆ ಅಗ್ರಶ್ರೇಣಿ ಮತ್ತು ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳು :
ಸಾಕ್ಷಿ, ಶೇಖ್ ಉಜಮಾ ಸಾರಾ, ಸಿಮ್ರನ್‌ದೀಪ್ ಕೌರ್, ರೋಹಿಣಿ, ಆಶ್ವೀನಿ, ತೇಜಸ್ವಿನಿ, ಶೃಷ್ಟಿ, ನಿರೀಕ್ಷಾ, ಕಾಂಚನಾ, ಇಶಾ ದಾಸ, ನಂದಿನಿ, ಅಮೂಲ್ಯ, ಅನುಷ್ಕಾ ಮತ್ತು ರೀತು.
ಇವರ ಈ ಸಾಧನೆಗೆ ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಾಂಶುಪಾಲರುಗಳಾದ ನಾಳಿನಿ ಡಿ.ಜಿ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಮುಂಬರುವ ದಿನಗಳಲ್ಲಿ ಕಷ್ಟಪಟ್ಟು ಓದಿ ಶಾಲೆ ಹಾಗೂ ಪಾಲಕರ ಕೀರ್ತಿಗೆ ಪಾತ್ರರಾಗಿ ಎಂದು ಕಿವಿ ಮಾತು ಹೇಳಿದರು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಮ್ಮ ಪ್ರತಿಭೆವೃದ್ಧಿಯಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ವಿವಿಧ ಸ್ಪರ್ಧೇಗಳಲ್ಲಿ ಭಾಗವಹಿಸಬೇಕು ಎಂದು ಕರೆಕೊಟ್ಟರು.
ಚಿತ್ರಕಲಾ ಶಿಕ್ಷಕರುಗಳಾದ ಶ್ರೀ ರಾಜುಪ್ರಕಾಶ ಮತ್ತು ಉದಯಪ್ರಕಾಶ ಇವರÀ ಮಾರ್ಗದರ್ಶನ ಮತ್ತು ಸತತ ಪ್ರಯತ್ನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.