ಕಾವ್ಯ ಲೋಕದ ಸಂಕಟಕ್ಕೆ ಸ್ಪಂದಿಸಲಿ -ಬೇಲೂರು ರಘನಂದನ್
ಕಾವ್ಯ ರಚಿಸುವ ಕವಿಗಳು ಯಾವುದೇ ಒಂದು ಸಿದ್ಧಾಂತಕ್ಕೆ ಅಂಟಿಕೊಳ್ಳಬಾರದು, ಮಾನವೀಯ ಮೌಲ್ಯದೊಂದಿಗೆ ನೊಂದವರ ಬೆಂದವರ ಧ್ವನಿಯಾಗಿ ಕಾವ್ಯ ಲೋಕದ ಸಂಕಟಕ್ಕೆ ಸ್ಪಂದಿಸುವಂತಿರಲಿ ಎಂದು ಬೆಂಗಳೂರಿನ ಹೆಸರಾಂತ ಸಾಹಿತಿಗಳಾದ ಡಾ. ಬೇಲೂರು ರಘುನಂದನ್ ಹೇಳಿದರು.
ಅವರು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ದಿನಾಂಕ 23 .07 .2023 ರಂದು ಹೋಟೆಲ್ ಕೃಷ್ಣ ರಿಜೆನ್ಸಿ ಸಭಾಂಗಣದಲ್ಲಿ ಏರ್ಪಡಿಸಿದ ರಾಜ್ಯ ಮಟ್ಟದ ಒಂದು ದಿನದ “ಕಾವ್ಯ ಕಮ್ಮಟ”ವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಕಾವ್ಯ ಪರಂಪರೆಯ ಓದಿನೊಂದಿಗೆ ಚರ್ಚೆ, ಸಂವಾದ, ಅನುಸಂಧಾನದ ಮೂಲಕ ಕವಿಗಳು ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಕಾವ್ಯ ರಚಿಸಿದ್ದೆ ಆದಲ್ಲಿ ಬಹುಕಾಲ ಜೀವಂತ ಕಾವ್ಯವಾಗು ಉಳಿಯಬಹುದು. ಕಾವ್ಯವನ್ನು ಮುರಿದು ಕಟ್ಟಬೇಕು ಅಂತರಾಳದ ಒಳಧನೆಯಿಂದ ಮೂಡಿದ ಕಾವ್ಯ ಓದುಗರಿಗೆ ಸ್ಪಂದಿಸುವ ಮೂಲಕ ಲೋಕದೊಂದಿಗೆ ಸಮೀಕರಣ ಹೊಂದುತ್ತದೆ ಎಂದು ವಿವರಿಸಿದರು.
ಹಿರಿಯ ಸಾಹಿತಿ ಸುನಿತಾ ದಾಡಗೆ ಆಶಯ ನುಡಿ ಹೇಳುತ್ತಾ ಕತ್ತಲೆಯಿಂದ ಬೆಳಕಿನೆಡೆಗೆ ಸಮಾಜವನ್ನು ಮುನ್ನಡೆಸುವ ಶಕ್ತಿ ಕಾವ್ಯಕ್ಕಿದೆ, ಕವಿ ಜಗತ್ತಿನ ಕಣ್ಣಿದಂತೆ, ಹೆಸರಿಗಾಗಿ ಕವಿತೆ ರಚಿಸದೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾವ್ಯ ರಚಿಸಬೇಕು ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರ ಲಾಂಜವಾಡಕರ್ ಆಗಮಿಸಿ ಮಾತನಾಡುತ್ತಾ ಗಡಿ ಭಾಗವಾದ ಬೀದರ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ, ಅವಕಾಶ ಸಿಗದೇ ಇರುವುದರಿಂದ ಬೆಳಕಿಗೆ ಬರಲು ಆಗುತ್ತಿಲ್ಲ ಎಂದು ತಿಳಿಸಿದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಡಾ.ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ ಪ್ರತಿಭಾವಂತ ಬರಹಗಾರರಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಕಮ್ಮಟ, ವಿಚಾರ ಸಂಕಿರಣ, ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಗಡಿ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾರ್ಯ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ನಿರಂತರವಾಗಿ ಮಾಡಲಿದೆ ಎಂದು ಹೇಳಿದರು.
ಭೀಮಶಾ ಬಸಲಾಪೂರ ಸ್ವಾಗತಿಸಿದರು, ಲಕ್ಷ್ಮಣ ಮೇತ್ರೆ ನಿರೂಪಿಸಿದರು, ಅಜಿತ ಎನ್ ವಂದಿಸಿದರು.