ಕಾರಾಗೃಹದಲ್ಲಿನ ರಕ್ಷಾಬಂಧನ ಕಾರ್ಯಕ್ರಮದಿಂದಾಗಿ ಕೈದಿಗಳ ಮನಪರಿವರ್ತನೆ ಸಾಧ್ಯ- ಡಾ.ಸುರೇಂದ್ರ
ಸಂತ ಆಶಾರಾಮ ಬಾಪುರವರು ಆಧುನಿಕ ಭಾರತದಲ್ಲಿ ಸನಾತನ ಸಂಸ್ಕೃತಿ ಪುನರುಜ್ಜೀವನಗೊಳಿಸುತ್ತಿರುವವರಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಭಾರತದ ಸನಾತನ ಸಂಸ್ಕೃತಿಯಲ್ಲಿನ ಆಚರಣೆಯ ಮಹತ್ವವನ್ನು ವಿಶ್ವದಾದ್ಯಂತ ಮನದಟ್ಟಾಗಿಸಿ ಗೌರವಾರ್ಹರಾಗಿಸಿದ್ದಾರೆ. ಹಾಗಾಗಿ ಅವರ ಇಚ್ಛೆಯಂತೆ ಈ ಹಬ್ಬಗಳನ್ನು ಮನೆಯಲ್ಲಿ ಆಚರಿಸದೆ ಮಿಲಿಟರಿ ಡೇರಗಳಲ್ಲಿ, ಪೋಲಿಸ ಠಾಣೆಗಳಲ್ಲಿ, ಕಾರಾಗೃಹಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಸದಾ ಒತ್ತಡದಲ್ಲಿ, ಆತಂಕದಲ್ಲಿ ಇರುವ ಕೈದಿಗಳಿಗೆ, ಸೇವಾ ಸಮಿತಿಯ ಸಹೋದರಿಯರಿಂದ ರಕ್ಷಾಬಂಧನಗೈದು ಅವರಲ್ಲಿ ಸಹೋದರತ್ವದ ಭಾವ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲರಿಗೂ ನಾವು ಸಹೋದರ-ಸಹೋದರಿ ಭಾವದಿಂದ ನೋಡಿದರೆ ಅಪರಾಧಗಳು, ಅತ್ಯಾಚಾರಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ರಕ್ಷಾಬಂಧನ ಹಬ್ಬ ಸಹೋದರ ಹಾಗೂ ಸಹೋದರಿಯರ ಕರ್ತವ್ಯಗಳನ್ನು, ಜವಾಬ್ದಾರಿಗಳನ್ನು ತಿಳಿಸುತ್ತದೆ. ಭಾರತದ ಸನಾತನ ಸಂಸ್ಕೃತಿಯ ಆಚರಣೆಯಲ್ಲಿ ನೈತಿಕತೆಗೆ ಮೌಲ್ಯಗಳಿಗೆ ಪ್ರಾಧ್ಯಾನ್ಯತೆ ನೀಡಲಾಗಿದೆ. ನೇಮದ ರೂಪದಲ್ಲಿ ಮನೋನಿಗ್ರಹಕ್ಕೂ ಪ್ರಾಶಸ್ತö್ಯ ನೀಡಲಾಗಿದೆ. ಸ್ತಿçÃಯರನ್ನು ಗೌರವಿಸಬೇಕು. ಆಕೆಯ ರಕ್ಷಣೆಗೆ ಬದ್ಧರಾಗಿರಬೇಕೆಂಬ ಸಂದೇಶ ಇದರಲ್ಲಡಗಿದೆ. ಮಾನವೀಯ ಮೌಲ್ಯಗಳು ಕೂಡ ಇದರಲ್ಲಿ ಅಡಗಿದೆ. ಹಾಗಾಗಿ ಸ್ವಸ್ಥ ಸಮಾಜ, ಸಮೃದ್ಧ ರಾಷ್ಟç, ಸಶಕ್ತ ವಿಶ್ವ ನಿರ್ಮಾಣಕ್ಕಾಗಿ ರಕ್ಷಾ ಬಂಧನ ಹಬ್ಬ ಜನಾಂಗಗಳ ಹಾಗೂ ಗಡಿಗಳ ರೇಖೆ ಮೀರಿ ದೇಶಾದ್ಯಂತ ಈ ಸಮಿತಿಯ ಮೂಲಕ ಆಚರಿಸಲಾಗುತ್ತಿದೆ ಎಂದು ಬೀದರ ಯೋಗ ವೇದಾಂತ ಸಮಿತಿಯ ಕಾರ್ಯದರ್ಶಿಗಳಾದ ಡಾ.ಸುರೇಂದ್ರ ರೋಡೆಯವರು ಹೇಳಿದರು. ಅವರು ಬೀದರ ಯೋಗವೇದಾಂತ ಸೇವಾ ಸಮಿತಿಯಿಂದ ಬೀದರ ಜಿಲ್ಲಾ ಕಾರಾಗ್ರಹದಲ್ಲಿ ಆಯೋಜಿಸಿದ ಯೋಗವೈದಿಕ ರಕ್ಷಾಬಂಧನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವಿತ್ತು ಹೇಳಿದರು.
ಕಾರಾಗೃಹದ ಜೇಲರರಾದ ಟಿ.ಬಿ.ಭಜಂತ್ರಿ ಅವರು ಮಾತನಾಡಿ, ರಕ್ಷಾಬಂಧನ ಆಡಂಬರ ರಹಿತವಾಗಿ ಬರೀ ನೂಲಿನ ದಾರ ಹಾಗೂ ಬೆಲ್ಲ ಸಹೋದರರಿಗೆ ಸಹೋದರಿಯರು ನೀಡಿ ಕೂಡ ಆಚರಿಸಬಹುದಾಗಿದೆ. ಅದಕ್ಕೆ ಪ್ರತಿಯಾಗಿ ಸಹೋದರರು ಕೂಡ ಸಂತೋಷ ಹಾಗೂ ಅಭಯವನ್ನೇ ಉಡುಗೊರೆ ರೂಪದಲ್ಲಿ ನೀಡಬಹುದಾಗಿದೆ. ಭಾರತದ ಹಬ್ಬಗಳ ಆಚರಣೆಗಳಿಂದ ಪರಸ್ಪರರಲ್ಲಿ ಪ್ರೀತಿ ವಾತ್ಸಲ್ಯ, ವಿಶಾಲಭಾವ, ನಿಸ್ವಾರ್ಥತೆ, ತ್ಯಾಗ, ಸೇವೆ ಮೌಲ್ಯಗಳು ಹೆಚ್ಚಿಸಬಹುದಾಗಿದೆ. ಭಾರತದ ಸನಾತನ ಹಬ್ಬಗಳಿಂದ ಎಲ್ಲಾ ಹಬ್ಬಗಳನ್ನು ಆಡಂಬರ ರಹಿತವಾಗಿ ಸರಳವಾಗಿ ಆಚರಿಸಿದರೆ ಇದರ ವ್ಯಾಪಕ ಆಚರಣೆ ಮಾಡಬಹುದಾಗಿದೆ ಎಂದರು.
ಕಾರಾಗೃಹದ ಅಧೀಕ್ಷಕರಾದ ದತ್ತಾತ್ರಿ ಮೇಧಾ ಮಾತನಾಡುತ್ತ, ರಕ್ಷಾಬಂಧನ ಹಬ್ಬ ಕಾರಾಗೃಹದಲ್ಲಿ ಆಚರಿಸುತ್ತಿರುವುದು ಸ್ತುತ್ಯಾರ್ಹವಾಗಿದೆ. ಅಪರಾಧಗೈದ ಕೈದಿಗಳಿಗೆ, ಕ್ರಮೇಣ ಸಂಬAಧಿಗಳು ದೂರವಾಗುತ್ತಾರೆ. ಅವರಿಗೆ ರಕ್ಷಾಬಂಧನಗೈಯ್ಯಲು ಹತ್ತಿರದವರು ಬರದೇ ಇದ್ದುದರ ನೋವು ಅವರಿಗೆ ವಿಪರೀತವಾಗಿ ಕಾಡುತ್ತದೆ. ಅವರಲ್ಲಿ ಬರಿದಾದ ಭಾವ ಹಾಗೂ ಮನೋಬಲ ಮನೋಸ್ಥೆöÊರ್ಯ ತುಂಬಲು ಈ ಕಾರ್ಯಕ್ರಮ ನೆರವಾಗುತ್ತದೆ ಹಾಗೂ ಅವರು ಅಪರಾಧ ಜಗತ್ತಿನಿಂದ ಅಧ್ಯಾತ್ಮಿಕ ಜಗತ್ತಿಗೆ ಮರಳಲು ಪ್ರೇರಣೆಯಾಗುತ್ತದೆ. ಎಲ್ಲಾ ಕಾರಾಗೃಹಗಳಲ್ಲೂ ಇದನ್ನು ಆಚರಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೈದಿಗಳಿಗೆ ರಕ್ಷಾಬಂಧನ ಮಾಡಿ ಅವರಲ್ಲಿ ಸಹೋದರತ್ವದ ಭಾವನೆ ಪ್ರೇರೇಪಿಸಿ ಪ್ರಸಾದ ವಿತರಿಸಲಾಯಿತು. ಸತ್ಸಂಗದ ಮೂಲಕ ಮತ್ತು ಮಂತ್ರೋಚ್ಛಾರಣೆ ಮೂಲಕ ವಿಧಿವತ್ತಾಗಿ ಅವರ ಮನಪರಿವರ್ತನಾ ಕಾರ್ಯ ಮಾಡಲಾಯಿತು. ಹಾಗೂ ಉಚಿತವಾಗಿ ಸನಾತನ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಜೀವರಾವ ಪಾಟೀಲ, ಮಹಾದಯ್ಯಸ್ವಾಮಿ, ಸಿದ್ಧು ಮಲಖೇಡ ಮುಂತಾದವರು ಇದ್ದರು.