ಕರ್ನಾಟಕ ಸಾಹಿತ್ಯ ಸಂಘದಲ್ಲಿ ಜರುಗಿದ ಸಂಗೀತ ನೃತ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ
ಬೀದರ: ನಾಟಕ, ನೃತ್ಯ ಮತ್ತು ಇತರೆ ಜನಪದ ಕಲೆಗಳು ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡುತ್ತವೆ. ಇದರಿಂದ ಆರೋಗ್ಯಕರ ದೇಹ ಮತ್ತು ಮನಸು ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ ತಿಳಿಸಿದರು.
ಸಂಗೀತ ನಾಟಕ ಅಕಾಡೆಮಿ ನವದೆಹಲಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ ಇವರ ಸಹಯೋಗದಲ್ಲಿ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಸಂಗೀತ ನೃತ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರ ನೀಡುವುದರಿಂದ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಹೆಬ್ಬಾಳೆದ್ವಯರ ಶ್ರಮದಿಂದ ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎನಿಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಜಾಗತಿಕರಣದ ಇಂದಿನ ಸಂದರ್ಭದಲ್ಲಿ ಜನಪದ ಕಲೆಗಳು ಗೌಣವಾಗುತ್ತಿವೆ. ಮೊಬೈಲ್‌ಗಳೇ ಸರ್ವಶ್ರೇಷ್ಠ ಎಂಬ ಭಾವ ಜನರನ್ನು ಕಲೆಗಳನ್ನು ಮರೆಸುವತ್ತ ಕೊಂಡೊಯ್ಯುತ್ತಿದೆ. ಆದ್ದರಿಂದ ಯುವಕ-ಯುವತಿಯರು ಜನಪದ ಕಲೆಗಳನ್ನು ಅಳವಡಿಸಿಕೊಂಡು ಆಚರಿಸಬೇಕೆಂದರು.
ನವದೆಹಲಿಯ ವೆಂಕಟೇಶ್ವರ ವಿ.ವಿ.ದ ಪ್ರಾಧ್ಯಾಪಕ ಡಾ.ಯು.ಸಿ.ಪಾಟೀಲ ಹಾಗೂ ವಾರ್ತಾ ನಿರೂಪಕಿ ಪ್ರಿಯಂಕಾ ಶ್ರೀಗುರು ಮಾತನಾಡಿದರು.
ವೇದಿಕೆ ಮೇಲೆ ಕರ್ನಾಟಕ ಸಾಹಿತ್ಯ ಸಂಘದ ಉಪಾಧ್ಯಕ್ಷ ಪ್ರೊ.ಎಸ್.ಬಿ.ಬಿರಾದಾರ, ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಬಿರಾದಾರ, ಯುವ ಉದ್ಯಮಿ ಅಶೋಕ ಹೆಬ್ಬಾಳೆ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ ಉಪಸ್ಥಿತರಿದ್ದರು.
ಪುಟ್ಟರಾಜ ಕವಿಗವಾಯಿ ರಾಷ್ಟಿçÃಯ ಪ್ರಶಸ್ತಿ: ಕಲಾವಿದರಾದ ರಾಜೇಂದ್ರಸಿAಗ್ ಪವಾರ್, ಕಲ್ಯಾಣರಾವ ಪಾಟೀಲ, ರಾಣಿ ಸತ್ಯಮೂರ್ತಿ, ಉಷಾ ಪ್ರಭಾಕರ್, ಅಶ್ವಿನಿ ಬಂಪಳ್ಳಿ, ಸುಭಾಷ ಮಂಠಾಳೆ, ಶಿವಾಜಿ ಸಗರ್, ಸಂಜೀವಕುಮಾರ ಸ್ವಾಮಿ ಉಜನಿ, ರಾಜಪ್ಪ ಹಲಿಂಗೆ, ಶಿವಕುಮಾರ ಪಾಂಚಾಳ, ಮಲ್ಲಿಕಾರ್ಜುನ ನಾಗಮಾರಪಳ್ಳಿ, ಶಿವಾನಿ ಸ್ವಾಮಿ, ಗುಂಡಪ್ಪ ಎಚ್, ಜಗದೇವಿ ಮೊರಾಡೆ, ಮಹೇಶ ಕುಂಬಾರ್, ಶಿವಕುಮಾರ ಆಣದೂರ, ರೋಶನ್ ಕೊಳಾರ್ ಅವರನ್ನು ಪುಟ್ಟರಾಜ ಕವಿಗವಾಯಿ ರಾಷ್ಟಿçÃಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಬಿರಾದಾರ ಹಾಗೂ ಸಂಶೋಧನೆ ಮೂಲಕ ಡಾಕ್ಟರೇಟ್ ಪದವಿ ಪಡೆದುಕೊಂಡ ಡಾ. ಗೀತಾ ಪೋಸ್ತೆ, ಡಾ. ಪದ್ಮಿನಿ ಕಾಜಿ, ಡಾ.ವಿನೋದಕುಮಾರ ಕಾಳೇಕರ್, ಡಾ. ರಾಣಿಬಾಯಿ ಪಾಟೀಲ, ಡಾ.ಸುನಿತಾ ಕೂಡ್ಲಿಕರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಎಸ್.ಬಿ.ಕುಚಬಾಳ ನಿರೂಪಿಸಿದರು. ಅಶ್ವಿನಿ ಸ್ವಾಮಿ ಬಂಪಳ್ಳಿ ವಚನ ಗಾಯನ ನಡೆಸಿಕೊಟ್ಟರು. ಕ.ಬ.ಕ. ಸಂಘದ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.
ಜನಮನ ಸೂರೆಗೊಂಡ ಜನಪದ ಕಲಾಪ್ರದರ್ಶನ: ರಾಜೇಂದ್ರಸಿAಗ್ ಪವಾರ್ ಹಾರ್ಮೋನಿಯಂ ಸೋಲೊ, ರೋಶನ್ ಕೊಳಾರ ತಬಲಾಸೋಲೊ, ನೂಪುರ ನೃತ್ಯ ಅಕಾಡೆಮಿ ಹಾಗೂ ನಾಟ್ಯಶ್ರೀ ನೃತ್ಯಾಲಯದ ಮಕ್ಕಳ ನೃತ್ಯ, ಶಿವಾನಿ ಸ್ವಾಮಿ ಗಾಯನ, ಶಿವಕುಮಾರ ಆಣದೂರ ಕಲಾತಂಡದ ಆಕರ್ಷಕ ನೃತ್ಯ ಸಭೀಕರ ಗಮನ ಸೆಳೆಯಿತು.