ಕರ್ನಾಟಕ ಕಾಲೇಜು ಜಿಲ್ಲೆಗೆ ಪ್ರಥಮ, ದ್ವಿತೀಯ. ಹೆಮ್ಮೆಯ ಸಂಗತಿ : ಡಾ. ಗಿರೀಶ ದಿಲೀಪ್ ಬದೋಲೆ
ಕರ್ನಾಟಕ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಐಶ್ವರ್ಯ ರಮೇಶ 600ಕ್ಕೆ 589 ಅಂಕ ಪಡೆದು ಶೇ. 98.16% ಫಲಿತಾಂಶ ಪಡೆವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಭಾಗ್ಯಲಕ್ಷ್ಮಿ 600ಕ್ಕೆ 587 ಅಂಕ ಪಡೆದು ಶೇ. 97.16% ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದದ್ದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ಗಿರೀಶ ದಿಲೀಪ್ ಬದೋಲೆ ನುಡಿದರು.
ಅವರು ನಗರದ ಕರ್ನಾಟಕ ಪದವಿ ಪೂರ್ವ ಕಾಲೇಜು ಬೀದರ್ ಆಯೋಜಿಸಿದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಬಡತನ ಸಾಧನೆಗೆ ಅಡ್ಡಿಯಾಗದು ಸತತ ಪರಿಶ್ರಮವಿದ್ದರೆ ಬೇಕಾದುದನ್ನು ಸಾಧಿಸಬಹುದು ಎಂಬುವುದಕ್ಕೆ ನಾನೆ ನಿದರ್ಶನ. ಮಕ್ಕಳು ಯಾವತ್ತು ಸಣ್ಣ ಗುರಿ ಹೊಂದದೆ ಉದಾತ್ತ ಗುರಿಯ ಮೂಲಕ ಎತ್ತರದ ಸಾಧನೆ ಮಾಡಬಹುದೆಂದು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೆಶಕರಾದ ಚಂದ್ರಕಾಂತ ಶಹಬಾದಕರ್ ಅವರು ಮಾತನಾಡುತ್ತ ಆಧುನಿಕ ಜಗತ್ತು ಸ್ಪರ್ಧಾಯುಗವಾಗಿದೆ ಇಲ್ಲಿ ಗುರಿ ಸಾಧಿಸುವ ಛಲವಿದ್ದವರು ಯಶಸ್ಸು ಪಡೆದು ಅಪೇಕ್ಷೆ ಪಟ್ಟಂತೆ ಫಲಿತಾಂಶವನ್ನು ಪಡೆಯಲು ಸಾಧ್ಯ. ಪ್ರತಿಭೆ ಎಲ್ಲರಲ್ಲೂ ಇದೆ, ಆದರೆ ಅವಕಾಶಗಳಿಲ್ಲವೆಂದು ಕೈ ಕಟ್ಟಿ ಕೂಡದೆ ಇರುವ ವ್ಯವಸ್ಥೆಯಲ್ಲಿ ಅವಕಾಶಗಳನ್ನು ಸೃಷ್ಠಿಸಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಒಳ್ಳೆಯ ಆದರ್ಶ ಇಟ್ಟುಕೊಂಡು ಬದುಕಬೇಕು ನಾವು ಎಷ್ಟು ದಿನ ಬದುಕಿದೆವು ಎನ್ನುವುದಕ್ಕಿಂತ ಹೇಗೆ ಬದುಕಿದೆವು ಎನ್ನುವುದೂ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪರಿಶ್ರಮವಿರಬೇಕೆಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆವಹಿಸಿದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿಯವರು ಮಾತನಾಡುತ್ತ ಕರಾಶಿ ಸಂಸ್ಥೆ ಶಿಕ್ಷಣದ ಹೆಸರಲ್ಲಿ ವ್ಯಾಪಾರ ಮಾಡದೆ ಮಾನವೀಯ ದೃಷ್ಠಿಯಿಂದ ಜನಸೇವೆ ಮಾಡುತ್ತಿದೆ. ಜ್ಞಾನದ ಹಸಿವು ತೀರಿಸುವುದರೊಂದಿಗೆ ಅನ್ನಪೂರ್ಣ ಯೋಜನೆಯಡಿಯಲ್ಲಿ ಅನ್ನದ ಹಸಿವು ತೀರಿಸುವುದರೊಂದಿಗೆ ಬಡ ಮಕ್ಕಳಿಗೆ ಆರ್ಥಿಕ ನೆರವು ಹೀಗೆ ಎಲ್ಲ ರೀತಿಯಲ್ಲಿ ವಿದ್ಯಾರ್ಥಿಪರ, ಕಾರ್ಯಪ್ರವೃತ್ತರಾಗಿ, ಜನಪರ, ಜೀವಪರಕಾಳಜಿ ಮೆರೆಯುತ್ತಿದೆ. ಪಾಲಕರಾದವರು ಕೂಡ ಮಕ್ಕಳಿಗಾಗಿ ಆಸ್ತಿ ಮಾಡದೆ ವಿದ್ಯೆಯನ್ನು ಕಲಿಸಿ ಮಕ್ಕಳೆ ಆಸ್ತಿಯಾಗಬೇಕೆಂದು ನುಡಿಯುತ್ತ ಫಲಿತಾಂಶದ ಏಳಿಗೆಯಲ್ಲಿ ಉಪನ್ಯಾಸಕರ ಪಾತ್ರ ಮಹತ್ವದ್ದಾಗಿದ್ದು ಎಲ್ಲ ಶಿಕ್ಷಕರು ಅಭಿನಂದನಾರ್ಹರೆಂದು ನುಡಿಯುತ್ತ ಅತ್ಯುನ್ನತ ಅಗ್ರಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಬಿ ಜಿ ಶೆಟಕಾರ ಅವರು ಮಾತನಾಡುತ್ತ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗಬೇಕು. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಈ ಕಾಲದಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದವರು ಅನಕ್ಷರಸ್ಥರಿದ್ದಂತೆ. ನಿರಂತರ ಓದು ಯಶಸ್ಸ್ಸಿನ ಗುಟ್ಟು ಎಂದು ಹೇಳುತ್ತಲೆ ನೌಕರಿಗಾಗಿ ಓದಬೇಡಿ ನೌಕರಿಗಳನ್ನು ಸೃಷ್ಠಿಸಲು ಓದಬೇಕು. ವಿದ್ಯಾರ್ಥಿಗಳು ಉದಾತ್ತ ಗುರಿ ಹೊಂದಿರಬೇಕು ತಾಯಿ ತಂದೆಯವರ ಕಷ್ಟಗಳನ್ನು ನೆನಪಿಟ್ಟು ಅವರ ಹೆಸರಿಗೆ ಚ್ಯುತಿ ಬರದಂತೆ ಒಳ್ಳೆಯ ಮಾನವರಾಗಿ, ಸಮಾಜದ, ರಾಷ್ಟ್ರದ ಅಭಿವೃದ್ಧಿ ಪೂರಕವಾಗಿ ಮುನ್ನಡೆಯಬೇಕು.
ಕರ್ನಾಟಕ ಪದವಿ ಕಾಲೇಜಿನ ಉಪಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗಿ ಅವರು ಮಾತನಾಡುತ್ತ ಕರಾಶಿ ಸಂಸ್ಥೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು ಪದವಿ ಹಂತದಲ್ಲಿಯೂ ಅನೇಕ ಹೊಸ ವೃತ್ತಿ ಕೇಂದ್ರಿತ ಕೋರ್ಸುಗಳನ್ನು ತರಲಾಗಿದೆ. ಎಂದು ಹೇಳುತ್ತ ಪಿಯುಸಿ ನಂತರ ಇರುವ ಹೊಸ ಸಾಧ್ಯತೆಗಳ ಬಗ್ಗೆ ವಿವರಿಸಿದರು.
ಕರ್ನಾಟಕ ಪದವಿಪೂರ್ವ ಕಾಲೇಜಿನ ಮೂರನೆಯ ಮಹಡಿ ಪೂಜೆ ಕಾರ್ಯಕ್ರಮ ಕ.ರಾ.ಶಿ. ನ್ಯಾಸದ ಅಧ್ಯಕ್ಷರಾದ ಡಾ. ಬವರಾಜ ಜಿ. ಪಾಟೀಲ ಅಷ್ಟೂರವರ ಅಧ್ಯಕ್ಷತೆಯಲ್ಲಿ ನೇರವೇರಿತು. ಕ.ರಾ.ಶಿ. ನ್ಯಾಸದ ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ ಹಾಗೂ ಕರಾಶಿ ಸಂಸ್ಥೆಯ ಎಲ್ಲ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕ.ರಾ.ಶಿ. ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಮಹೇಶಕುಮಾರ ಭದಭದೆ, ರಾಜಶೇಖರ ತಾಂಡೂರ, ಚಂದಾ ಶಾಂತಕುಮಾರ, ಶೆಟಕಾರ ಚಂದ್ರಕಾಂತ, ಮಲ್ಲಿಕಾರ್ಜುನ ಹತ್ತಿ, ವೀರಭದ್ರಪ್ಪ ಬುಯ್ಯಾ, ವಿಜಯಕುಮಾರ ಬಿ. ಗೂನಳ್ಳಿ, ರವಿ ಹಾಲಹಳ್ಳಿ, ಶ್ರೀನಾಥ ನಾಗುರೆ ಆಡಳಿತಾಧಿಕಾರಿ ಪೆÇ್ರ. ಎಚ್. ಎಸ್. ಪಾಟೀಲ ವಿಶೇಷಾಧಿಕಾರಿ ಪೆÇ್ರ. ಎಸ್. ಕೆ. ಸಾತನೂರ ಉಪಸ್ಥಿತರಿದ್ದರು. ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲೆಗೆ ಪ್ರಥಮ, ರ್ಯಾಂಕ್ ಬಂದ ಕಲಾ ವಿಭಾಗದ ವಿದ್ಯಾರ್ಥಿ ಐಶ್ವರ್ಯ, ವಾಣಿಜ್ಯ ವಿಭಾಗದಲ್ಲಿ ಸುಮಾ ಪಾಟೀಲ ವಿಜ್ಞಾನ ವಿಭಾಗದ ತ್ರಿವೇಣಿ ಅವರಿಗೆ ತಲಾ ರೂ. ಐದು ಸಾವಿರ ನಗದು ಬಹುಮಾನ ನೀಡಲಾಯಿತು. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಅಗ್ರಶ್ರೇಣಿ ಪಡೆದ 54 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವಿಶೇಷವಾಗಿ ಉಪನ್ಯಾಸಕರಾದ ಗಣೇಶ ಥೋರೆ, ಮಹೇಶ ಬಿರಾದಾರ, ಹಾಗೂ ನೂರಕ್ಕೆ ನೂರು ಅಂಕ ಪಡೆಯಲು ನೆರವಾದ ಉಪನ್ಯಾಸಕರಾದ ರಾಜೇಶ್ವರಿ ಪಾಟಿಲ, ಜ್ಯೋತಿ ಪಾಟೀಲ, ಡಾ. ಸುನಿಲ ಮೂಲಗೆ, ನೀಲೇಶ ರತ್ನಾಕರ್ ಅವರನ್ನೂ ಸನ್ಮಾನಿಸಲಾಯಿತು.
ಅಗ್ರಶ್ರೇಣಿ ಪಡೆದ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡರು, ಕಾಲೇಜಿನ ಉಪನ್ಯಾಸಕರು, ಪಾಲಕರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಬಸವರಾಜ ಬಲ್ಲೂರ ಸ್ವಾಗತಿಸಿದರೆ ಸಚಿನ್ ವಿಶ್ವಕರ್ಮ ನಿರೂಪಿಸಿದರು. ಗಣೇಶ ಥೋರೆ ವಂದಿಸಿದರು.