ಔರಾದ್‌ನಲ್ಲಿ ಅದ್ದೂರಿ ದಹಿ ಹಂಡಿ ಉತ್ಸವ ಶಾಸಕ ಪ್ರಭು ಚವ್ಹಾಣರಿಂದ ಚಾಲನೆ
ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ, ಪ್ರಭು ಚವ್ಹಾಣ ಎಂಟರ್‌ಪ್ರೆöÊಸೆಸ್ ಸಹಯೋಗದಲ್ಲಿ ಔರಾದ(ಬಿ)ನಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ದಹಿ ಹಂಡಿ ಉತ್ಸವ ವೈಭವದಿಂದ ಜರುಗಿತು. ಹತ್ತಾರು ತಂಡಗಳು ಉಲ್ಲಾಸದಿಂದ ಒಬ್ಬರ ಮೇಲೊಬ್ಬರು ಹತ್ತಿ ಪಿರಮಿಡ್ ರಚಿಸಿ 20 ಅಡಿಯ ಮೊಸರು ಗಡಿಗೆಯನ್ನು ಒಡೆದು ಸಂಭ್ರಮಿಸಿದರು. ಸಾವಿರಾರು ಜನ ಮೊದಲ ಬಾರಿಗೆ ನಡೆದ ದಹಿ ಹಂಡಿ ಉತ್ಸವವನ್ನು ಕಣ್ತುಂಬಿಕೊAಡರು.
ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೋಪೂಜೆ ನೆರವೇರಿಸಿದ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಪ್ರಭು ಚವ್ಹಾಣ ಅವರು ಮಾತನಾಡಿ, ಕನೈಯ್ಯಾ, ಶಧಾಮ್, ಗೋಪಾಲ, ಕೇಶವ, ದ್ವಾರಕಾಧೀಶ, ವಾಸುದೇವ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಶ್ರೀಕೃಷ್ಣ ಪರಮಾತ್ಮರ ಲೀಲೆಗಳು ಅಪಾರ, ಜಗತ್ತಿನಲ್ಲಿ ಅನ್ಯಾಯ, ಅತ್ಯಾಚಾರ ಅಧರ್ಮ, ಅಸತ್ಯ ಹೆಚ್ಚಾದಾಗ ಶ್ರೀಕೃಷ್ಣ ಅವತರಿಸುತ್ತಾರೆ ಎಂದು ಹೇಳಿದರು.
ಸನಾತನ ಧರ್ಮ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನಮಾನವಿದೆ. ರಾಮಾಯಣ, ಮಹಾಭಾರತ ಎಂದರೇನು, ಭಗವದ್ಗೀತೆ ಎಂದರೇನು ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದರೆ ಇಂಥಹ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಆಂಯೋಜಿಸಬೇಕಾಗುತ್ತದೆ. ಸನಾತನ ಧರ್ಮ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ. ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಶ್ರೀಕೃಷ್ಣ ಪರಮಾತ್ಮರ ಲೀಲೆಗಳನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದ ಶ್ರೀಕೃಷ್ಣ ಜನ್ಮಾಷ್ಠಮಿಯಂದು ದಹಿ ಹಂಡಿ ಉತ್ಸವವನ್ನು ಆಯೋಜಿಸಲಾಗುತ್ತದೆ. ಉತ್ತರ ಭಾರತದಲ್ಲಿ ಅತ್ಯಂತ ವಿಜೃಂಬಣೆಯಿAದ ನಡೆಯುತ್ತದೆ. ನಮ್ಮಲ್ಲಿಯೂ ದಹಿ ಹಂಡಿ ಉತ್ಸವ ಜರುಗಬೇಕೆಂಬುದು ಬಹಳಷ್ಟು ದಿನಗಳ ಬಯಕೆಯಾಗಿತ್ತು. ಅದರಂತೆ ಈ ವರ್ಷ ಔರಾದ್‌ನಲ್ಲಿ ದಹಿ ಹಂಡಿ ಉತ್ಸವ ಆಯೋಜಿಸಲಾಗಿದೆ. ಮುಂದಿನ ವರ್ಷ ಇನ್ನಷ್ಟು ಅದ್ದೂರಿಯಾಗಿ ನೆರವೇರಿಸಲಾಗುವುದು. ಒಂದು ವರ್ಷ ಔರಾದ್‌ನಲ್ಲಿ ಮಾಡಿದರೆ ಮತ್ತೊಂದು ವರ್ಷ ಕಮಲನಗರ ತಾಲ್ಲೂಕಿನಲ್ಲಿ ದಹಿ ಹಂಡಿ ಉತ್ಸವ ಆಯೋಜಿಸಲಾಗುವುದು. ಪ್ರತಿ ಗ್ರಾಮ ಗ್ರಾಮಗಳಲ್ಲಿ ದಹಿ ಹಂಡಿ ಉತ್ಸವ ಜರುಗಬೇಕೆಂಬ ಅಭಿಲಾಶೆಯಿದೆ ಎಂದರು.
ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದಾಗಿ ನಾಲ್ಕು ಬಾರಿ ಶಾಸಕನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಅದರಂತೆ ಔರಾದ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದೇನೆ. ಔರಾದ್‌ನಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಸುಸಜ್ಜಿತ ಹೈಟೆಕ್ ಪಶು ಆಸ್ಪತ್ರೆ ಉದ್ಘಾಟಿಸಲಾಗಿದೆ. ಟ್ರೀ ಪಾರ್ಕ್, 560 ಕೋಟಿಯ ಕೆರೆ ತುಂಬುವ ಯೋಜನೆ, ಸಿಪೆಟ್ ಕಾಲೇಜು, ಪ್ರತಿ ಹಳ್ಳಿಯಲ್ಲಿ ಜೆಜೆಎಂ ಕೆಲಸ, ಕಾರಂಜಾ ಜಲಾಶಯದಿಂದ ಔರಾದ್ ಪಟ್ಟಣಕ್ಕೆ ನೀರು ಸರಬರಾಜು ಯೋಜನೆ, ಬಲ್ಲೂರ್‌ನಲ್ಲಿ ವಸತಿ ಶಾಲೆ, ಹೆಡಗಾಪೂರನಲ್ಲಿ ಗೋಶಾಲೆ, ಚಿಂತಾಕಿಯಲ್ಲಿ ವಸತಿ ಶಾಲೆ ಹೀಗೆ ಹತ್ತು ಹಲವು ಯೋಜನೆಗಳನ್ನು ತರಲಾಗಿದೆ ಎಂದು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ಅಧ್ಯಕ್ಷ ಶಿವರಾಜ ಅಲ್ಮಾಜೆ, ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ಮಾರುತಿ ಚವ್ಹಾಣ, ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಕಾಳೆ, ಪ್ರತೀಕ ಚವ್ಹಾಣ, ಸಂತೋಷ ಪೋಕಲವಾರ, ಸಂಜು ವಡೆಯರ್, ದಯಾನಂದ ಘೋಳೆ, ಬಾಬು ಪವಾರ್, ಯಾದು ಮೇತ್ರೆ, ಮುಖಂಡರಾದ ಅರಹಂದ ಸಾವಳೆ, ಶಿವಾಜಿರಾವ ಪಾಟೀಲ ಮುಂಗನಾಳ, , ಸತೀಷ ಪಾಟೀಲ, ಎಂ.ಡಿ ಸಲಾವೋದ್ದನ್, ಅಶೋಕ ಅಲ್ಮಾಜೆ, ವಿನಾಯಕ ಜಗದಾಳ, ರವೀಂದ್ರ ರೆಡ್ಡಿ, ಪ್ರಕಾಶ ಅಲ್ಮಾಜೆ, ಗೋವಿಂದರೆಡ್ಡಿ ಕಸಬೆ, ಬಸವರಾಜ ಹಳ್ಳೆ, ರಾಮ ನರೋಟೆ, ಬಂಟಿ ರಾಂಪೂರೆ, ಉದಯ ಸೋಲಾಪೂರೆ, ಸಂದೀಪ ಪಾಟೀಲ, ರಾಜಪ್ಪ ಶೆಂಬೆಳ್ಳಿ, ಪ್ರಕಾಶ ಜೀರ್ಗೆ, ಪ್ರದೀಪ ಪವಾರ್, ಧನಾಜಿ ರಾಠೋಡ್, ಸುಜಿತ ರಾಠೋಡ್, ಸಂಜು ಮುರ್ಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.