ಎಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ, ಜಿಲ್ಲಾ ಜೆಡಿಎಸ್ ಪಕ್ಷ ವತಿಯಿಂದ ಸಂಭ್ರಮ ಆಚರಣೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬೀದರ್ ನಗರದ ಡಾಕ್ಟರ್ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು, ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಕೊಡಗೆ ಅವರು ಮಾತಾಡಿ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಇನ್ನಿಷ್ಟು ಆನೆ ಬಲಬಂತಾಗಿದೆ, ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಒಳ್ಳೆ ಅಭಿವೃದ್ಧಿ ಕೆಲಸಗಳು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ತಮ್ಮ ಅಭಿಪ್ರಾಯಗಳು ವ್ಯಕ್ತಪಡಿಸಿದರು, ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅಭಿಕಾಳೆ , ನಗರಸಭೆ ಸದಸ್ಯರಾದ ರಾಜು ಚಿಂತಾಮಣಿ, ಪರಿಶಿಷ್ಟ ಘಟಕದ ಅಧ್ಯಕ್ಷರಾದ ಬೊಮ್ಮ ಗೊಂಡ ಚಟ್ಟವಾಡಿ, ಚಿಕನ್ ಸಲೀಂ ಸಲೀಂ, ಬಸವರಾಜ್ ಶಪುರ್, ರೇವಣಸಿದ್ದಪ್ಪ ಶ್ರೀ ಕಟ್ಟನಹಳ್ಳಿ, ಶಂಕರ್ ಗಾದಗಿ, ಶಿವರಾಜ್ ಬರೂರು, ಶಿವರಾಜ್ ವಗೆ, ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು