ರಾಜ್ಯ

ಎಂಥಾ ಹೆಮ್ಮೆಯ ಕ್ಷಣ ನೋಡಿ: ಐಎಎಸ್ ಮಗಳಿಗೆ ಸೆಲ್ಯೂಟ್ ಹೊಡೆದ ಪೊಲೀಸ್‌ ಅಪ್ಪ

ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಆಗಿ ಕೆಲಸ ಮಾಡುವ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ ಅವರ ಪುತ್ರಿ ಉಮಾಹರ್ತಿ ಐಎಎಸ್ ಅಧಿಕಾರಿಯಾಗಿದ್ದು, ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೆಲಂಗಾಣದ ಪೊಲೀಸ್ ಅಕಾಡೆಮಿಗೆ ಆಗಮಿಸಿದ್ದರು.

ತೆಲಂಗಾಣ: ಮಕ್ಕಳು ತಮಗಿಂತ ಹೆಚ್ಚು ಸಾಧನೆ ಮಾಡಬೇಕು ತಮ್ಮಿಂದ ಎತ್ತರಕ್ಕೆ ಬೆಳೆಯಬೇಕು ಎಂದು ಪ್ರತಿಯೊಬ್ಬರು ಪೋಷಕರು ಬಯಸುತ್ತಾರೆ.  ಆದರೆ ತಾವು ಪ್ರೀತಿಯಿಂದ ಸಾಕಿದ್ದ ಮಗಳೋ ಮಗನೋ ತಾನು ಕೆಲಸ ಮಾಡುವ ಇಲಾಖೆಗೆ ಆಗಮಿಸಿ, ಉನ್ನತಾಧಿಕಾರಿಯಾಗಿ ಕಾಣಿಸಿಕೊಂಡು ತಮ್ಮಿಂದಲೇ ಸೆಲ್ಯೂಟ್ ಹೊಡೆಸಿಕೊಂಡರೆ ಹೇಗಿರುತ್ತದೆ? ಇಂತಹ ಅಪರೂಪದ ಅನುಭೂತಿಗೆ ಬೆಲೆ ಕಟ್ಟಲಾಗದು. ಈ ರೀತಿಯ ಅಪರೂಪದ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ ತೆಲಂಗಾಣದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ.

ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಆಗಿ ಕೆಲಸ ಮಾಡುವ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ ಅವರ ಪುತ್ರಿ ಉಮಾಹರ್ತಿ ಐಎಎಸ್ ಅಧಿಕಾರಿಯಾಗಿದ್ದು, ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೆಲಂಗಾಣದ ಪೊಲೀಸ್ ಅಕಾಡೆಮಿಗೆ ಆಗಮಿಸಿದ್ದರು. ಈ ವೇಳೆ ಹುದ್ದೆಯಲ್ಲಿ ತನಗಿಂತ ಉನ್ನತ ಸ್ತರದಲ್ಲಿದ್ದ ಮಗಳಿಗೆ ಸೆಲ್ಯೂಟ್ ಹೊಡೆಯುವ ಹೆಮ್ಮೆಯ ಕ್ಷಣ ಈ ಅಪ್ಪನದ್ದಾಗಿತ್ತು.

ಐಎಎಸ್ ಅಧಿಕಾರಿಯಾಗಿರುವ ಉಮಾಹರ್ತಿ ಅವರು ತೆಲಂಗಾಣ ಪೊಲೀಸ್ ಅಕಾಡೆಮಿಗೆ ತರಬೇತಿಯ ಸಲುವಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅವರ ತಂದೆ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ ಅಲ್ಲಿ ಪೊಲೀಸ್ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಅವರು ಅಲ್ಲಿ ತಮ್ಮ ಮಗಳಿಗೆ ಸೆಲ್ಯೂಟ್ ಹೊಡೆದು ಹೂಗುಚ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು. ಅಂದಹಾಗೆ ಐಎಎಸ್ ಅಧಿಕಾರಿಯಾಗಿರುವ ಉಮಾಹರ್ತಿ ಅವರು ವಿಕರಾಬಾದ್‌ನಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

Ghantepatrike kannada daily news Paper

Leave a Reply

error: Content is protected !!