ಇತರೆ ಮಹಾನಗರಗಳಲ್ಲಿ ಸಿಗುವ ಆರೋಗ್ಯ ಸೌಲಭ್ಯವನ್ನು ಶೀಘ್ರದಲ್ಲಿ ಬ್ರೀಮ್ಸ್ನಲ್ಲಿ ಕಲ್ಪಿಸಲಾಗುವುದು:-ಸಚಿವ ಈಶ್ವರ ಬಿ. ಖಂಡ್ರೆ
ಬೀದರ, ಜುಲೈ 25 -ಹೃದಯ ರೋಗ ಸಂಬಧಿಸಿದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೀಘ್ರವಾಗಿ ಖ್ಯಾಥ್ಲ್ಯಾಬ್, ಒ.ಟಿ ಯುನಿಟ್, ಹಾಗೂ ಡಯಾಲಿಸಿಸ್ ಘಟಕ ನಿರ್ಮಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತç ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಸೋಮವಾರ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಬೆಂಗಳೂರು, ಮೈಸೂರು ಹೈದ್ರಾಬಾದ ಸೇರಿದಂತೆ ಇತರೆ ಮಹಾನಗರಗಳಲ್ಲಿ ಸಿಗುವ ಆರೋಗ್ಯ ಸೇವೆಗಳನ್ನು ಒಂದು ವರ್ಷದೊಳಗೆ ಬ್ರೀಮ್ಸ್ನಲ್ಲಿ ಕಲ್ಪಿಸಲಾಗುವುದು, ಹಾಗೆ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಈ ಭಾಗದಲ್ಲಿ ವಿಟಮಿನ್ ಕೊರತೆಗೆ ಸಂಬAಧಿಸಿದAತೆ ತಿಳಿಯಲು ಸಾವಿರ ಜನರ ಪರೀಕ್ಷೆ ನಡೆಸಬೇಕು. ಬಳಿಕ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅದೇ ರೀತಿ ಹೃದಯ ರೋಗ ಸಂಬAಧಿಸಿದ ಕಾಯಿಲೆ ಪರೀಕ್ಷೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು ಎಂದರು.
ರಾಷ್ಟಿçÃಯ ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ತುರ್ತು ಚಿಕಿತ್ಸೆ ಸಿಗದೆ ಜನ ಜೀವ ಕಳೆದುಕೋಳ್ಳುತ್ತಿದ್ದಾರೆ ಅದಕ್ಕಾಗಿ ಟ್ರಾಮ ಕೇರ್ ಸೆಂಟರ್ ನಿರ್ಮಿಸಲು ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಲು ಜಿಲ್ಲಾ ಬ್ರೀಮ್ಸ್ ನಿರ್ದೇಶಕರಾದ ಶಿವಕುಮಾರ ಶೇಟಕಾರ ಅವರಿಗೆ ಸೂಚಿಸುತ್ತಾ ಹಿರಿಯ ನಾಗರಿಕರಿಗೆ ಹತ್ತು ವಿಶೇಷ ವಾರ್ಡ್ ನಿರ್ಮಿಸಿ ಅವರು ಬಂದರೆ ತಕ್ಷಣೆವೇ ಚಿಕಿತ್ಸೆ ಸಿಗುವಂತಾಗಬೇಕು ಈ ವಾರ್ಡಗಳನ್ನು ಹತ್ತು ದಿನಗಳಲ್ಲಿ ಸ್ಥಾಪಿಸಬೇಕೆಂದು ತಿಳಿಸಿದರು.
ಈಗಾಗಲೇ ಬ್ರೀಮ್ಸ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕಗಳಿದ್ದು, ಆದರು ನಲವತ್ತು ಜನ ಸರತಿ ಸಾಲಿನಲ್ಲಿದ್ದು ಕೂಡಲೆ ಸಾರ್ವಜನಿಕರಿಗೆ ಡಯಾಲೀಸಿಸ್ ಮಾಡಿಸಿಕೊಳ್ಳಲು ತೊಂದರೆಯಾಗದAತೆ ಕಾರ್ಯನಿರ್ವಹಿಸಬೇಕು. 100 ಬೇಡ್ ಆಸ್ಪತ್ರೆಯಲ್ಲಿ ಐ.ಓ.ಸಿ ಅವರ ಸಹಭಾಗಿತ್ವದಲ್ಲಿ ಹತ್ತು ಡಯಾಲಿಸಿಸ್ ಕೇಂದ್ರಗಳನ್ನು ಅಳವಡಿಸಲಾಗಿದ್ದು ಶೀಘ್ರದಲ್ಲಿ ಪ್ರಾರಂಭವಾಗುವAತೆ ಕ್ರಮ ಕೈಗೊಳ್ಳಬೇಕು.
ಹೃದಯ ರೋಗ ಸಂಬAಧಿಸಿದAತೆ ಶಸ್ತç ಚಿಕಿತ್ಸೆಗೆ ಖ್ಯಾಥ್ಲ್ಯಾಬ್ ನಿರ್ಮಿಸಲು ಕೆ.ಕೆ.ಆರ್.ಡಿ.ಬಿ ಯಿಂದ 20 ಕೋಟಿ ರೂ. ಅನುದಾನ ಮಂಜೂರು ಮಾಡಲಾಗುವುದು ಬ್ರೀಮ್ಸ್ ಕಟ್ಟಡ ಸೋರುತ್ತಿರುವ ಹಾಗೂ ಶೌಚಾಲಯಗಳ ಸ್ವಚ್ಛತೆ ಸಮಸ್ಯೆ ಕುರಿತು ದೂರುಗಳು ಬಂದಿದ್ದು ಶೀಘ್ರವಾಗಿ ಸರಿಪಡಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
442 ದಿನಗಳಿಂದ ಸ್ವಚ್ಛತಾ ಕಾರ್ಮಿಕರು (ಡಿ-ಗ್ರೂಪ್ ನೌಕರರು) ಧರಣಿ ನಡೆಸುತ್ತಿದ್ದು ಅವರನ್ನು ಶೀಘ್ರವೇ ಸರ್ಕಾರದಿಂದ ಮಂಜೂರಾತಿ ಪಡೆದು ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ ಖಾನ್, ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಪ್ರಧಾನ ಕಾರ್ಯದರ್ಶಿ ಜಾವೇದ ಅಕ್ತರ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ. ಎಂ, ಬ್ರೀಮ್ಸ್ನ ವೈದ್ಯ ಅಧಿಕಾರಿಗಳು ಜಿಲ್ಲಾ ಶಸ್ತç ಚಿಕಿತ್ಸಕ ಮಹೇಶ ಬಿರಾದಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರತಿಕಾಂತ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.