ಬೀದರ್

ಇಂದು ಏರ್ ಶೋ: ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

ಬೀದರ, ಸೆಪ್ಟೆಂಬರ 07 – ಸೆಪ್ಟೆಂಬರ್ 8 ಮತ್ತು 9 ರಂದು ಬೀದರ ಕೋಟೆಯಲ್ಲಿ ಏರ್ ಶೋ ನಡೆಯಲಿದ್ದು, ಈ ಏರ್ ಶೋದಲ್ಲಿ 8 ರಿಂದ 10 ಸಾವಿರ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸೇರುವ ಸಂಭವ ಇರುತ್ತದೆ. ಸದರಿ ಏರ್ ಶೋ ಕಾಲಕ್ಕೆ ಸಂಚಾರ ಸುವ್ಯವಸ್ಥೆಯನ್ನು ಕಾಪಾಡಲು ಸೆಪ್ಟೆಂಬರ್ 8 ಮತ್ತು 9 ರಂದು ಮಧ್ಯಾಹ್ನ 3 ಗಂಟೆಯಿAದ 6 ಗಂಟೆಯವರೆಗೆ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ.
ಪ್ರಯುಕ್ತ ಏರ್ ಶೋ ವೀಕ್ಷಿಸಲು ಬರುವ ವಾಹನಗಳು ಮತ್ತು ಸಾರ್ವಜನಿಕರು ಸಿದ್ದಾರ್ಥ ಕಾಲೇಜು ಮೂಲಕವಾಗಿ ಬಂದು ಸಾರ್ವಜನಿಕರಿಗೆ ಬಿಟ್ಟು ಅಲ್ಲಿಂದ ಏಕಮುಖವಾಗಿ ಗವಾನ ಚೌಕ ಮತ್ತು ಹಮಿಲಾಪೂರ ರಿಂಗ್ ರೋಡ ಮೂಲಕ ಹೋಗಿ ಏರ್ ಶೋ ಮುಗಿದ ನಂತರ ಕರೆಯಲು ಬರುವ ವಾಹನಗಳು ಸಿದ್ದಾರ್ಥ ಕಾಲೇಜ್ ರಸ್ತೆ ಮೂಲಕ ಬೀದರ ಕೋಟೆಗೆ ಬಂದು ಸಾರ್ವಜನಿಕರಿಗೆ ಕರೆದುಕೊಂಡು ಹೋಗಬಹುದಾಗಿದೆ ಎಂದು ಬೀದರ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!