ಆ.17 ರಿಂದ ಲೋಕಾಯುಕ್ತ ದೂರು ಅಹವಾಲು ಸಭೆ
ಬೀದರ, ಆಗಸ್ಟ್ 11 – ಕ.ಲೋ. ಕಲಬುರಗಿ ವಿಭಾಗದ ಅಧೀಕ್ಷಕರಾದ ಎ.ಆರ್.ಕರ್ನೂಲ್ (ಮೊ.9364062519), ಕ.ಲೋ.ಬೀದರನ ಪೊಲೀಸ್ ಉಪಾಧೀಕ್ಷಕ ಎನ್.ಎಂ.ಓಲೇಕಾರ (ಮೊ. 9364062571), ಪೊಲೀಸ್ ಇನ್ಸಪೇಕ್ಟರ್ ಸಂತೋಷ ರಾಠೋಡ (ಮೊ.9972308388) ಹಾಗೂ ಪೊಲೀಸ್ ಇನ್ಸಪೇಕ್ಟರ್ ಪ್ರದೀಪ್ ಕೊಳ್ಳಾ (ಮೊ. 9364062673), ಪೊಲೀಸ್ ಇನ್ಸಪೇಕ್ಟರ್ ಬಾಬಾಸಾಹೇಬ ಪಾಟೀಲ್ (ಮೊ. 9364062674), ಪೊಲೀಸ್ ನಿರೀಕ್ಷಕರು-4 ವಾಹೀದ ಕೊತ್ವಾಲ (ಮೊ. 9364062675) ಒಳಗೊಂಡ ತಂಡದೊAದಿಗೆ ಲೋಕಾಯುಕ್ತ ದೂರು ಅಹವಾಲು ಸಭೆ ನಡೆಯಲಿದೆ.
ಲೋಕಾಯುಕ್ತ ದೂರು ಅಹವಾಲು ಸಭೆಗಳ ವಿವರ: ಆಗಸ್ಟ್ 17 ರಂದು ಬೆಳಿಗ್ಗೆ 11 ರಿಂದ 1.30 ರವರೆಗೆ ಚಿಟ್ಟಗುಪ್ಪ ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 3 ರಿಂದ 5.30 ರವರೆಗೆ ಹುಮನಾಬಾದ ಪ್ರವಾಸಿ ಮಂದಿರದಲ್ಲಿ, ಆಗಸ್ಟ್ 18 ರಂದು ಬೆಳಿಗ್ಗೆ 11 ರಿಂದ 1.30 ರವರೆಗೆ ಬಸವಕಲ್ಯಾಣ ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 3 ರಿಂದ 5.30 ರವರೆಗೆ ಹುಲಸೂರು ಪ್ರವಾಸಿ ಮಂದಿರದಲ್ಲಿ, ಆಗಸ್ಟ್ 19 ರಂದು ಬೆಳಿಗ್ಗೆ 11 ರಿಂದ 1.30 ರವರೆಗೆ ಔರಾದ ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 3 ರಿಂದ 5.30 ರವರೆಗೆ ಕಮಲನಗರ ಪ್ರವಾಸಿ ಮಂದಿರದಲ್ಲಿ, ಆಗಸ್ಟ್ 21 ರಂದು ಬೆಳಿಗ್ಗೆ 11 ರಿಂದ 1.30 ರವರೆಗೆ ಲೋಕಾಯುಕ್ತ ಪೊಲೀಸ್ ಠಾಣೆ ಬೀದರದಲ್ಲಿ ಹಾಗೂ ಮಧ್ಯಾಹ್ನ 3 ರಿಂದ 5.30 ರವರೆಗೆ ಭಾಲ್ಕಿ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ದೂರು ಅಹವಾಲು ಸಭೆಗಳು ನಡೆಯಲಿವೆ.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ನ್ಯಾಯಸಮ್ಮತ ಕೆಲಸಗಳಿಗೆ ಲಂಚದ ಬೇಡಿಕೆ ಇಟ್ಟ ಸರಕಾರಿ ಅಧಿಕಾರಿ, ಸಿಬ್ಬಂದಿಯವರುಗಳ ವಿರುದ್ಧ ಸಾರ್ವಜನಿಕರಿಂದ ದೂರು ಸ್ವೀಕರಿಸಲಾಗುತ್ತದೆ. ಸಾಧ್ಯವಾದಲ್ಲಿ ಅಲ್ಲಿಯೇ ದೂರುದಾರರ ಅಹವಾಲು ಬಗೆಹರಿಸುವುದು ಮತ್ತು ಸಾರ್ವಜನಿಕರಿಗೆ ತಮ್ಮ ಅರ್ಜಿಗಳ ವಿಚಾರಣೆ ಸಲುವಾಗಿ ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಲು ಫಾರಂ ನಂ. 1 ಮತ್ತು 2ನ್ನು ನೀಡಲಾಗುತ್ತದೆ. ಕುಂದು ಕೊರತೆಗಳಲ್ಲಿರುವ ಸಾರ್ವಜನಿಕರು ನಿಗದಿಪಡಿಸಿದ ಸಮಯಕ್ಕೆ ತಮ್ಮ ಅರ್ಜಿಗಳನ್ನು ನೀಡಬಹುದಾಗಿದೆ.
ಸಧ್ಯ ಲೋಕಾಯುಕ್ತ ಕಛೇರಿಯು ಹಳೆಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ದಯವಿಟ್ಟು ಸಾರ್ವಜನಿಕರು ಅಹವಾಲು ಸಲ್ಲಿಸಲು ಇನ್ನು ಮುಂದೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಕೆ.ಹೆಚ್.ಬಿ.ಕಾಲೋನಿ, ಎಮ್.ಐ.ಜಿ.29, ಬಾಲಭವನ ಎದುರುಗಡೆ ಬೀದರ ವಿಳಾಸಕ್ಕೆ ಸಂಪರ್ಕಿಸುವAತೆ ಬೀದರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.