ಆಸ್ಪತ್ರೆಗಳು ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸಲಿ
ಬೀದರ್: ಆಸ್ಪತ್ರೆಗಳು ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ರಾಮಚೌಕ್ ಸಮೀಪದ ಸ್ಪರ್ಶ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಏಳನೇ ವಾರ್ಷಿಕೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಹೀಗಾಗಿ ವೈದ್ಯರು ವೃತ್ತಿ ಧರ್ಮ ಪಾಲಿಸಿಕೊಂಡು ಹೋಗಬೇಕು. ಬಡ ರೋಗಿಗಳ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಅತ್ಯಾಧುನಿಕ ವೈದ್ಯಕೀಯ ಸೌಕರ್ಯಗಳನ್ನು ಹೊಂದಿರುವ ಸ್ಪರ್ಶ ಆಸ್ಪತ್ರೆ ರೋಗಿಗಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ. ಡಾ. ಲೋಕೇಶ ಹಿರೇಮಠ ನೇತೃತ್ವದ ತಂಡ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಆಸ್ಪತ್ರೆಯ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು. ಬೇಗ ಗುಣಮುಖರಾಗುವಂತೆ ಹಾರೈಸಿದರು.ಹಿರೇಮಠ ಪರಿವಾರ ವತಿಯಿಂದ ಜಗದ್ಗುರುಗಳ ಪಾದಪೂಜೆ ನೆರವೇರಿತು.ಹಲಬರ್ಗಾ-ಶಿವಣಿ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಲಾಡಗೇರಿಯ ಗಂಗಾಧರ ಶಿವಾಚಾರ್ಯ, ಸಾಯಗಾಂವ್‍ನ ಶಿವಾನಂದ ಸ್ವಾಮೀಜಿ, ಬೇಮಳಖೇಡದ ಚಂದ್ರಶೇಖರ ಶಿವಾಚಾರ್ಯ, ಖಟಕಚಿಂಚೋಳಿಯ ಬಸವಲಿಂಗ ದೇವರು, ಸೊಂತದ ಶಿವಕುಮಾರ ಶಿವಾಚಾರ್ಯ, ಸಿಂಧನಕೇರಾ ಹೊನ್ನಲಿಂಗ ಸ್ವಾಮೀಜಿ, ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಆಸ್ಪತ್ರೆಯ ಮುಖ್ಯಸ್ಥ ಲೋಕೇಶ ಹಿರೇಮಠ, ಬಸವರಾಜ ಸ್ವಾಮಿ, ನಾಗರಾಜ ಶಂಕೆ, ಲಿಂಗರಾಜ ಸ್ವಾಮಿ, ರಾಜಶೇಖರ, ಸಚ್ಚಿದಾನಂದ ಚಿದ್ರೆ, ಶಿವಕುಮಾರ ಸ್ವಾಮಿ, ಡಾ. ಶಶಿಕಾಂತ ಪಾಂಡ್ರೆ, ವಿಶ್ವರಾಧ್ಯ ಹಿರೇಮಠ, ಅನಿಲ್ ಅಟ್ಟಂಗೆ, ನಾಗಪ್ಪ ಕಟ್ಟೆ, ರಗಟೆ, ವೆಂಕಟರಾವ್, ಡಾ. ಸಂಗಮೇಶ ಮಂಡಿ, ಸುನೀಲ್ ಕುಂದೆ, ಮಲ್ಲಿಕಾರ್ಜುನ ಗಚ್ಚಿನಮಠ ಇದ್ದರು.