ಆದಿಕವಿ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ :ಸುನೀಲ ಭಾವಿಕಟ್ಟಿ
ಬೀದರ್ ನವೆಂಬರ್ 01: ಮನುಷ್ಯನ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿ ಕವಿ ಮಹರ್ಷಿ ವಾಲ್ಮೀಕಿ ಅವರಿಂದ ರಚಿಸಲ್ಪಟ್ಟ ರಾಮಾಯಣ ಮಹಾ ಕಾವ್ಯ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾ ಸಂಚಾಲಕ ಸುನೀಲ ಭಾವಿಕಟ್ಟಿ ಅಭಿಪ್ರಾಯಪಟ್ಟರು.
ಅವರು ಇಂದು ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಟೋಕರೆ ಕೋಳಿ ಸಮಾಜ ಸಂಘದಿಂದ ಏರ್ಪಡಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರ ತತ್ವ ಆದರ್ಶಗಳು ಶ್ರೇಷ್ಠವಾಗಿದ್ದು ನಮ್ಮೆಲ್ಲರಿಗೂ ಮಾದರಿಯಾಗಿವೆ. ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳನ್ನು ಇಂದಿನ ಯುವ ಜನಾಂಗದವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೈಕ್ಷಣಿಕವಾಗಿ ಬೆಳೆದು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ಮಾಜಿ ನೀರ್ದೆಶಕರಾದ ವಿಜಯಕುಮಾರ ಪಾಟೀಲ್ ಗಾದಗಿ ಅವರು ಮಾತನಾಡಿ, ವಾಲ್ಮೀಕಿ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದಲೇ ನಿಮ್ಮ ಆರ್ಥಿಕ ಪ್ರಗತಿಯ ಜೊತೆಗೆ ಸಾಮಾಜಿಕ ಜೀವನ ಸುಧಾರಣೆ ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಲ್ಸನ್ ಮೇತ್ರೆ, ಟೋಕರೆ ಕೋಳಿ ಸಮಾಜದ ಬೀದರ್ (ದ) ಅಧ್ಯಕ್ಷ ಶನ್ಮೂಖಪ್ಪಾ ಶೇಕಾಪೂರ್, ಮುಖಂಡರಾದ ರಾಜಕುಮಾರ ಶಿವಪೂಜೆ, ರಮೇಶ ಪಾಟೀಲ್, ನಾರಾಯಣ ಹರಿಪೂಜೆ, ಸಂಜು ಪಾಟೀಲ್, ಅರವಿಂದ ಪಾಟೀಲ್, ಸಂಜು ಕೋಳಾರೆ, ಬಸವರಾಜ ನಾರಾ, ಜೈರಾಜ ಚಿಲ್ಲರ್ಗಿ, ಮೋಹ್ಮದ್ ಚಿಲ್ಲರ್ಗಿ, ಅನೀಲ ಜಾಂಪಾಡೆ, ನರಸಪ್ಪಾ ಘಾಳೆಪ್ಪಾ, ಪಂಡಿತ್ ಮರಾಠಾ, ಸಂಜುಕುಮಾರ ಚಿಲ್ಲರ್ಗಿ, ಮಹಾನಂದಾ ಚಿಮಕೋಡ್, ರಮೇಶ ಜಮಾದಾರ್, ಬಸವರಾಜ ಭೂತಪೂರೆ, ನಾಮದೇವ್ ಕಟ್ಟಾ, ಮಲ್ಲು ಅರ್ಕೀ, ಮಾರುತಿ ನಾಟೀಕಾರ್, ಸಿದ್ದು ಜಿಜಪೂರೆ, ನಾಮದೇವ್ ಬೊರಾಳೆ, ನೀಜೇಶ್ ಬೋರಾಳೆ, ಗಣಪತಿ ಜಿರಾಲಪಳ್ಳಿ, ವಿಠಲ್ ಹೆಂಡಗಾರ್, ಕಪೀಲ್ ಹರಿಪೂಜೆ, ನಾರಾಯಣ ನಾಟೀಕಾರ್, ರಾಜಕುಮಾರ ಮೊಡ್ಡೆ ಸೇರಿದಂತೆ ಗ್ರಾಮದ ಮಹಿಳೆಯರು, ಮಕ್ಕಳು, ಹಾಗೂ ಹಿರಿಯರು ಇದ್ದರು.