ಬೀದರ್

ಅರ್ಪಿತ್ ಎನ್ ಅವರ ಆಲ್ ರೌಂಡ್ ಆಟದ ಪ್ರದರ್ಶನದಿಂದ ರೋಜರ್ ಭಿನ್ನಿ ತಂಡಕ್ಕೆ ಸುಲಭದ ಗೆಲುವು .

ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ 16 ವರ್ಷದ ಒಳಗಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರ್ಪಿತ್ ಎನ್ ಅವರ ಆಲ್ ರೌಂಡ್ ಆಟ ಪ್ರದರ್ಶನ ಟಾಸ್ ಗೆದ್ದು ಬ್ಯಾಟಿಂಗ್ ಕಾಯ್ದುಕೊಂಡ ಎರಪಲ್ಲಿ ಪ್ರಸನ್ನ ತಂಡ 35 ಓವರ್ ಗಳಲ್ಲಿ ತಾನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 118 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು.ಇದರಲ್ಲಿ ಪ್ರದೀಪ್ ಹೆಚ್ಚು ರನ್ ಗಳಿಸಿದ ಬಿಟ್ಟರೆ ಬೇರೆ ಯಾವ ಬ್ಯಾಟ್ಸ್ಮನ್ ಗಳು ಆಯ್ಕೆದಾರರ ಗಮನ ಸೆಳೆಯುವಲ್ಲಿ ವಿಫಲರಾದರು. ಎದುರಾಳಿ ತಂಡದ ಬೌಲರ್ ಗಳಲ್ಲಿ ಅರ್ಪಿತ್ ಎನ್ ರವರು ಕೇವಲ ಎರಡು ಓವರುಗಳಲ್ಲಿ 4 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ರನ್ ಗಳು ಹೆಚ್ಚಾಗದಂತೆ ಕಡಿವಾಣ ಹಾಕಿದರು ನಂತರ ಆರಂಭಿಕ ಆಟಗಾರನಾಗಿ ಬ್ಯಾಟಿಂಗ ಗೆ ಇಳಿದ ರೋಜರ್ ಬನ್ನಿ ತಂಡದ ಅರ್ಪಿತ್ ಎನ್ ಅವರು ಔಟ್ ಆಗದೆ 61 ರನ್ ಗಳಿಸಿ ತನ್ನ ತಂಡಕ್ಕೆ ಗೆಲುವಿನ ದಡ ಸೇರಿಸಿದರು ಕೇವಲ 23.3 ಓವರ್ ಗಳಲ್ಲಿ 119 ರನ್ನು ಗಳಿಸಿ ಗೆಲುವಿನ ಕೇಕೆ ಹಾಕಿದರು ಎದುರಾಳಿ ತಂಡದ ಬಾಲಿಂಗ್ ವಿಭಾಗದಲ್ಲಿ ಕಾರ್ತಿಕ್ ದುಬಾರಿಯಾದರೂ ಕೂಡ ಎರಡು ವಿಕೆಟ್ ಗಳಿಸುವಲ್ಲಿ ಸಫಲರಾದರು.

ಸಮರ್ಥ ಕುಲಕರ್ಣಿಯವರ ಮಾರಕ ಬೌಲಿಂಗ್ ನಿಂದ ಜಿ ಆರ್ ವಿಶ್ವನಾಥ್ ತಂಡಕ್ಕೆ ಗೆಲುವು.
ಮಾಣಿಕನಗರ ದಲ್ಲೀ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿ ಆರ್ ವಿಶ್ವನಾಥ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ.ಆರಂಭಿಕ ಆಟಗಾರರಾಗಿ ಬ್ಯಾಟಿಂಗೆ ಇಳಿದ ದತ್ತಾತ್ರೇಯ ಜಾಧವ್ 50  ಮತ್ತು ತರುಣ್ ರಾಜಪುತ್ 28 ರವರ ಉತ್ತಮ ಜೊತೆಯಾಟದಿಂದ ಜಿ ಆರ್ ವಿಶ್ವನಾಥ್ ತಂಡಉತ್ತಮ ಮೊತ್ತ ಕಲೆಹಾಕಿತು ನಿಗದಿತ 50 ಒವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು  ಇದರಲ್ಲಿ  ದತ್ತಾತ್ರೇಯ ಜಾಧವ್ 73 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಆರಂಭಿಕ ಆಟಗಾರನ ಸ್ಥಾನಕ್ಕೆ ಭರವಸೆ ಮೂಡಿಸಿದರು ಇವರಿಗೆ ಜೊತೆಗೆ ಆರಂಭಿಕ ಆಟಗಾರನಾಗಿ  ಕಣಕ್ಕೆ ಇಳಿದ ತರುಣ್ ರಾಜಪೂತ್ ರವರು ಕೂಡಾ 68 ಎಸೆತಗಳಲ್ಲಿ 28 ರನ್ ಗಳಿಸಿದ ನಂತರ ಮಾಧ್ಯಮ ಕ್ರಮಾಂಕದಲ್ಲಿ ಸಮರ್ಥ ಬೋರ್ಜಿ 64 ಎಸೆತಗಳಲ್ಲಿ 25 ರನ್ ಬಾರಿಸಿದರು. ಎದುರಾಳಿ ತಂಡದ ಬಾಲಿಂಗ್ ವಿಭಾಗದಲ್ಲಿ ಸುಲೇಮಾನ್ ರಿಜ್ವಾನ್ ಅವರು ಹತ್ತು ಓವರ್ ಗಳಲ್ಲಿ 31ರ ನೀಡಿ ಮೂರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು ಇವರಿಗೆ ಜೊತೆಯಾಗಿ ಮೋಹಿಬ ರವರು 9 ಓವರುಗಳಲ್ಲಿ 9 ರನ್  ನೀಡಿ 2 ವಿಕೆಟ್ ಕಬಳಿಸಿದರು. ಅತ್ತ 167 ರನ್ ಗಳ ಗುರಿ ಪಡೆದು ಬ್ಯಾಟಿಂಗ್ ಗೆ ಇಳಿದ ಬಿಎಸ್ ಚಂದ್ರಶೇಖರ್ ತಂಡ ಸಮರ್ಥ ಕುಲಕರ್ಣಿ ಅವರ ಬೋಲಿಂಗ್ ದಾಳಿಗೆ ತತ್ತರಿಸಿ ಹೋಗಿ ಕೇವಲ ಒಂದು 127 ರನ್ಗಳಿಗೆ 10 ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಇದರಲ್ಲಿ ಮಾಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಪುಟ್ಟರಾಜ ಮತ್ತು ಮೋಹಿಬ್ ರವರು ವೈಯಕ್ತಿಕವಾಗಿ 34 ರ ಹಾಗೂ 32 ರನ್ ಗಳಿಸಿ  ಕೊಂಚ ಭರವಸೆ ಮೂಡಿಸಿದರಾದರು ತಂಡಕ್ಕೆ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು ಬೌಲಿಂಗ್ ವಿಭಾಗದಲ್ಲಿ ಸಮರ್ಥ ಕುಲಕರ್ಣಿ ಅವರು ಹತ್ತುವ ಓವರುಗಳಲ್ಲಿ 34 ರನ್ನು ನೀಡಿ ಸತತ ಮೊದಲಿನ 7 ಪ್ರಮುಖ ವಿಕೆಟ್ಗಳನ್ನು ಕಬಳಿಸಿ ಬಿ ಎಸ್ ಚಂದ್ರಶೇಖರ್ ತಂಡ ಎಚ್ಚೆತ್ತುಕೊಳ್ಳದಂತೆ ಬೌಲಿಂಗ್ ಮಾಡಿದರು. ಇದಕ್ಕೂ ಮುಂಚೆ ಬೀದರ್ ನಲ್ಲಿ ನಡೆದ ಪಂದ್ಯಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶಿವಶಂಕರ್ ಟೋಕರೆ ನಿವೃತ್ತ ಪ್ರಾಂಶಪಾಲರು ಸರ್ಕಾರಿ ಐಟಿಐ ಕಾಲೇಜು ಬೀದರ್ ಇವರು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.

Ghantepatrike kannada daily news Paper

Leave a Reply

error: Content is protected !!