ಕಲಬುರಗಿ

ಅನುಗ್ರಹ ಆಯುರ್ವೇದಾಲಯ ಶುಭಾರಂಭ

ಕಲ್ಬುರ್ಗಿ: ನಗರದ ಸೂಪರ್ ಮಾರ್ಕೆಟ್ನ ಚೆಂಬರ್ ಕಾಮರ್ಸ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಅನುಗ್ರಹ ಆಯುರ್ವೇದ ಆಸ್ಪತ್ರೆ ವಿಶ್ವ ಯೋಗ ದಿನವಾದ ಜೂನ್ 21ರಂದು ಶುಭಾರಂಭಗೊಂಡಿತು.
ಪತಂಜಲಿ ಚಿಕಿತ್ಸಾಲಯದ ಆಯುರ್ವೇದ ವೈದ್ಯರಾದ ಡಾ. ರಾಜಶ್ರೀ ಪ್ರಸನ್ನ ಕಟ್ಟಿ ಅವರು ಆರಂಭಿಸಿದ ಪಂಚಕರ್ಮ ಸೌಲಭ್ಯ ಸೇರಿದಂತೆ ವಿವಿಧ ರೋಗಗಳಿಗೂ ಉಪಶಮನ ನೀಡುವ ಆಯುರ್ವೇದ ಆಲಯವನ್ನು ಹಿರಿಯ ವೈದ್ಯರಾದ ಡಾ. ಸುರೇಂದ್ರ ಸಿದ್ದಾಪುರಕರ್, ಹಾಗೂ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಡಾ. ಸದಾನಂದ ಪೆರ್ಲ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಹಿರಿಯರಾದ ಲಕ್ಷ್ಮಿ ನಿವಾಸ್ ತಪಾಡಿಯ, ಸಂಪತ್ ತಪಾಡಿಯ,ನ್ಯಾಯವಾದಿ ಹನುಮಂತ ರಾವ್ ಕುಲಕರ್ಣಿ, ಡಾ. ಪ್ರಸನ್ನ ಕಟ್ಟಿ ಯೋಗ ಶಿಕ್ಷಕರಾದ ಶಿವಾನಂದ ಸಾಲಿಮಠ , ಪತಂಜಲಿ ಕೇಂದ್ರದ ಅಶೋಕ್ ಸಾಲಿಮಠ ಹಾಗು ಗೀತಾ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು

ನಿರೋಗಿಯಾಗಲು ಆಯುರ್ವೇದ
ಜೀವನ ಶೈಲಿ ಉತ್ತಮ : ಪೆರ್ಲ
ವಿಶ್ವ ಯೋಗ ದಿನದಂದು ಆಯುರ್ವೇದ ಆಲಯ ಆರಂಭಿಸಿ ನೂತನ ಕೊಡುಗೆ ನೀಡಲಾಗಿದ್ದು ನಿರೋಗಿಯಾಗಿ ಬದುಕಲು ಮತ್ತು ಒತ್ತಡದ ಈ ಯುಗದಲ್ಲಿ ಮಾನಸಿಕ ವ್ಯಾಧಿಗಳಿಂದ ಮುಕ್ತಿ ಹೊಂದಲು ಯೋಗ ಮತ್ತು ಆಯುರ್ವೇದ ಪದ್ಧತಿಯ ಜೀವನ ಶೈಲಿ ಅತ್ಯಂತ ಉಪಯುಕ್ತವಾಗಿದ್ದು ಸಾರ್ವಜನಿಕರು ಇದರ ಲಾಭವನ್ನು ಪಡೆಯಲು ಉತ್ತಮ ಅವಕಾಶ ನೀದಿರುವುದಕ್ಕೆ ಡಾ. ರಾಜಶ್ರೀ ಪ್ರಸನ್ನ ಕಟ್ಟಿ ಅವರಿಗೆ ಡಾ. ಸದಾನಂದ ಪೆರ್ಲ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಆಯುರ್ವೇದಾಲಯದಲ್ಲಿ ಪಂಚಕರ್ಮ ಚಿಕಿತ್ಸೆ ಮಹಿಳೆಯರ ವಿವಿಧ ಆರೋಗ್ಯ ಸಮಸ್ಯೆಗಳು ಹಾಗೂ ಕೀಲು ನೋವು ಮೊಣಕಾಲು ನೋವು, ಸಂಧಿ ವಾತ ,ಬೆನ್ನು ನೋವು, ಸಿಯಾಟಿಕಾ, ವೆರಿಕೋಸ್ ವೇನ್ಸ್, ಚರ್ಮರೋಗ ಮುಂತಾದ ತೊಂದರೆಗಳಿಗೆ ಉಪಚಾರ ನೀಡುವ ಸೌಲಭ್ಯವನ್ನು ಆಯುರ್ವೇದಾಲಯದಲ್ಲಿ ಹೊಂದಲಾಗಿದೆ ಎಂದು ಡಾ. ರಾಜೇಶ್ರೀ ಪ್ರಸನ್ನ ಕಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು.

Ghantepatrike kannada daily news Paper

Leave a Reply

error: Content is protected !!