ಬೀದರ್

ಅಂತರ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ, ಸಾಧಕರಿಗೆ ಸನ್ಮಾನ ಶಿಕ್ಷಕರು ಸಮಾಜದ ಶಿಲ್ಪಿಗಳು–.ವೀರಭದ್ರಪ್ಪ ಉಪ್ಪಿನ್

ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಬಹಳಸ್ಟಿದೆ. ರೈತರು, ಸೈನಿಕರು, ವೈದ್ಯರಗಳ  ಶಿಕ್ಷಕರನ್ನು ಸಮಾಜವು ಗೌರವದಿಂದ ಕಾಣುತ್ತದೆ. ಜನತೆಯ ಅಶೋತ್ತರಗಳಿಗೆ ಶಿಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸ ಬೇಕೆಂದು, ಪಶುವೈದ್ಯ ಕೀಯ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ರವರು ಕರೆ ನೀಡಿದರು.  ಅವರು ಇಂದು ಗುಜರಾತಿನ ಸರ್ದಾರ್ ಸರೋವರದ ಆವರಣದಲ್ಲಿ ಆಯೋಜಿಸಿ ರುವ ಅಂತರ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು. ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟ ಹಾಗೂ ಜೈಹಿಂದ್ ಹಿರಿಯ ನಾಗರಿ ಕರ ಸಂಘದಿAದ ಆಯೋಜಿ ಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನಿವೃತ್ತ ನ್ಯಾಯವಾದಿ ಗಂಗ ಪ್ಪ ಸಾವಳೆಯವರು ಶಿಕ್ಷಕರ ಬಗ್ಗೆ ಮಾತನಾಡಿದರು.  ನಿವೃತ್ತ ಶಿಕ್ಷಕರಿಗೆ ಸನ್ಮಾನ. ನಿ. ಮುಖ್ಯಯೊಪಾಧ್ಯಾಯ ರಾದ ಭೀಮರಾವ್  ರಾಜಾ ಪುರ,  ಮಂದಾಕಿನಿ ಉಪ್ಪಿನ್ ಹಾಗೂ ಜೈಶ್ರೀ ಯವರಿಗೆ ಗೌರವ ಸನ್ಮಾನ ವನ್ನು ನೀಡಲಾಯಿತು. ವಿಜಯಲಕ್ಷ್ಮೀ, ಅರುಣಾ, ವಿಜು, ರೇಖಾ, ಸಂತೋಷ ಕುಮಾರಿ, ಆಶಾ ಬೀಕಲೇ, ಪಲ್ಲವಿ, ಶಾರದಾ, ಜ್ಯೋತಿ ಮುಂತಾದವರು ಭಾಗವಹಿಸಿದ್ದರು.ಸಾಮೂಹಿಕ ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Ghantepatrike kannada daily news Paper

Leave a Reply

error: Content is protected !!