77 ನೇ ಸ್ವತಂತ್ರ ದಿನಾಚರಣೆ ಭಾರತ ದೇಶ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರ–ನಾಗರಾಜು
ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಕಾರ್ಯಾಲಯ ದ ವತಿಯಿಂದ 77 ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮವನ್ನು ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆ ಶಾಖೆ ಯಲ್ಲಿ ಅತ್ಯಂತ ವಿಜ್ರಂಭಣೆಯಿAದ ಆಚರಿಸಲಾಯಿತು.
ಪ್ರಾದೇಶಿಕ ವ್ಯವಸ್ಥಾಪಕರಾದ ನಾಗರಾಜು ಕುಂಚ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ “ಭಾರತ ದೇಶ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರ, ನಾವು ಭಾರತ ದೇಶದ ಪ್ರಜೆಗಳಾಗಿ ಪ್ರತಿಯೊಬ್ಬರು ಸಂವಿಧಾನದ ಮೂಲಭೂತ ಕರ್ತವ್ಯ ಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ ಬಿ ಐ ನ ಅಧಿಕಾರಿಗಳಾದ ರಮೇಶ್ ಶಿಂಧೆ, ರಾಮ್ ಪ್ರಸಾದ್, ಮಂಜುನಾಥ, ಪ್ರಭಾತ್ ಕುಮಾರ್, ಬಿಷ್ಣುಪ್ರಿಯ, ಡಯಾನ, ಶಶಿಕಾಂತ ಕಾಳೆ, ಪವನ ಪೂಜಾರಿ, ಶಿವು ಜಗದಾಳೆ, ಉಮೇಶ್ ಜಾಧವ, ವಂಶಿ ಕೃಷ್ಣ, ಅಶೋಕ್ ಮಾಲಿ ಬಿರಾದಾರ, ವಿಷ್ಣು ಕಾಂತ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.