77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಉಜಿನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯಿಂದ ಮಾಡಲಾಯಿತು
ಇಂದು, ನಮ್ಮ ದೇಶದ ಅತ್ಯಂತ ವಿಶೇಷವಾದ ದಿನವನ್ನು ಆಚರಿಸಲು ನಾವು ಇಲ್ಲಿ ಸೇರಿದ್ದೇವೆ – ಸ್ವಾತಂತ್ರ್ಯ ದಿನ. ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಮತ್ತು ಸಂತೋಷವನ್ನು ಅನುಭವಿಸುವ ದಿನ. ಈ ದಿನದಂದು ನಾವು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಪುರುಷರು ಮತ್ತು ಮಹಿಳೆಯರನ್ನು ಸ್ಮರಿಸುತ್ತೇವೆ ಮತ್ತು ಗೌರವ ಸಲ್ಲಿಸುತ್ತೇವೆ. ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಹೊಂದಿದ ದಿನವೆಂದು ಆಚರಿಸುವ ದಿನವೇ ಸ್ವಾತಂತ್ರ್ಯ ದಿನಾಚರಣೆ. 77 ವರ್ಷಗಳ ಹಿಂದೆ ಇದೇ ದಿನ 15 ಆಗಸ್ಟ್ 1947 ರಂದು ಭಾರತ ಸ್ವತಂತ್ರವಾಯಿತು. ಇದು ನಮ್ಮ ದೇಶ ಮತ್ತು ನಾಗರಿಕರಿಗೆ ಹೆಮ್ಮೆಯ ದಿನ. ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ನಮಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ದೇಶವನ್ನು ಉತ್ತಮ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡಬೇಕು
ಎದ್ದು ತಿಳಿಸಿ ವಿದ್ಯಾರ್ಥಿಗಳು ಭಾಷಣ ಮುಖಾಂತರ ಜನರಿಗೆ ಹೇಳಿದರು ಹಾಗೂ ಶಾಲೆ ಆವರಣದಲ್ಲಿ ವಿವಿಧ ಸಂಸ್ಕೃತಿ ಕಾರ್ಯಕ್ರಮಗಳುಮಾಡಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹೀಗೆ ಒಳ್ಳೆಯ ರೀತಿಯಿಂದ ಕಾರ್ಯಕ್ರಮ ಮಾಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಸ್ಥರಾದ ಕಲ್ಲಪ್ಪಾ ಬಾವಗೆ, SDMC ಅಧ್ಯಕ್ಷರಾದ ಶ್ರೀ ಶಾಲಿವನ್ ಹಾಗೂ ಮಾಜಿ SDMC ಅಧ್ಯಕ್ಷರಾದ ಸುಮಂತ್ ಸರ್,
ಸಿಬ್ಬಂದಿ ವರ್ಗದ ಗುರುಗಳಾದ ಇಮಾನ್ ವೆಲ್ ಸರ್ , ರಾಬರ್ಟ್ ಸರ್ , ಕಲ್ಲಪ್ಪ ಸರ್ , ಸುನಿತಾ ಟೀಚರ್, ನೀಲಮ್ಮ ಟೀಚರ್, ಹಾಗೂ ಊರಿನ ಶಿವಪ್ಪ ಬಸವರಾಜ್, ಧನರಾಜ್ ಬಸವರಾಜ್ ಹಾಗೂ ಊರಿನ ಜನರು ಉಪಸ್ಥಿತಿಯಲ್ಲಿದ್ದರು