ಬೀದರ್

76ನೇ ಸ್ವಾತಂತ್ರ್ಯ ಉತ್ಸವದ ಶುಭಾ ಕೋರಿದರು :ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ

ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ 76ನೇ ಸ್ವಾತಂತ್ರ್ಯೂತ್ಸವ ಅಂಗವಾಗಿ ಬ್ಯಾಂಕಿನ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿರವರು ಧ್ವಜಾರೋಹಣ ಮಾಡಿ ಮಾತನಾಡುತ್ತಾ, ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರುಗಳಿಗೆ, ಅಧಿಕಾರಿಗಳ ವೃಂದದವರಿಗೆ ಮತ್ತು ಎಲ್ಲಾ ಸಿಬ್ಬಂದಿಗಳಿಗೆ 76ನೇ ಸ್ವಾತಂತ್ರ್ಯ ಉತ್ಸವದ ಶುಭಾಶಯಗಳು ಕೋರಿದರು, ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ನಿರ್ದೇಶಕರಾದ ವಿಜಯಕುಮಾರ ಪಾಟೀಲ ಗಾದಗಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಯಲ್ಲಿ ಇಡೀ ರಾಷ್ಟ್ರದಲ್ಲಿ ಅಧಿಕ ಮನೆಗಳ ಮೇಲೆ ತಿರಂಗಾ ಧ್ವಜಾ ಹಾರಿಸಲಾಗುತಿದೆ, ಎಲ್ಲಾ ಮನೆಗಳ ಧ್ವಜಾ ಹಾರಿಸುವುದರಿಂದ ಎಲ್ಲರಲ್ಲಿಯೂ ದೇಶದ ಬಗ್ಗೆ ಅಭಿಮಾನ ಮೂಡುತ್ತದೆಂದು ತಿಳಿಸಿದರು. ದತನಂತರ ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಎಂ.ಡಿ. ಸಲಿಮೋದ್ದೀನ್ ಮಾತಾನಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಬಲಿಧಾನನೀಡ ನಮಗೆ ಸ್ವಾತಂತ್ರ್ಯ ಕೋಡಿಸಿದ್ದಾರೆ, ನಾವೆಲ್ಲೂರು ಹಿಂದು ಮುಸ್ಲಿಂ ಸಿಕ್ಕ್ ಇಸಾಯಿ ಎನ್ನದೆ ನೆಮ್ಮದಿಯೊಂದಿಗೆ ಬಾಳೋಣ ಎಂದು ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಭಾಶಯಗಳು ಕೋರಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಪರಮೇಶ್ವರ ಮುಗಟೆ, ಸಂಗಮೇಶ ಪಾಟೀಲ್ ಅಲಿಯಂಬರ, ನಾರಂಜಾ ಸಹಕಾರ ಸಕ್ಕರೆ ಕಾರಖಾನೆಯ ಉಪಾಧ್ಯಕ್ಷರಾದ ಬಾಲಾಜಿ ಚವ್ಹಾಣ, ನಿರ್ದೇಶಕರುಗಳಾದ ಝರೆಪ್ಪ ಮಮದಾಪೂರ್, ವಿಜಯಕುಮಾರ ಪಾಟೀಲ್, ಸಿತಾಳಗೇರಾ, ಶಿವಬಸಪ್ಪ ಚನ್ನಮಲ್ಲೆ, ಬ್ಯಾಂಕಿನ ಮುಖ್ಯಾಕಾರ್ಯನಿರ್ವಾಹಣ ಅಧಿಕಾರಿಗಳಾದ ಮಲ್ಲಿಕಾರ್ಜುನ ಮಹಾಜನ್, ಪ್ರಧಾನ ವ್ಯವಸ್ಥಾಪಕರಾದ ವಿಠಲರೆಡ್ಡಿ ಏಡಮಲೆ, ಚನ್ನಬಸಯ್ಯಾ ಸ್ವಾಮಿ, ಬ್ಯಾಂಕಿನ ಎಲ್ಲಾ ಉಪ ಪ್ರಧಾನ ವ್ಯವಸ್ಥಾಪಕರುಗಳಾದ ಪಂಡರಿ ರೆಡ್ಡಿ, ಸದಾಶಿವ ಪಾಟೀಳ್, ಅನೀಲ ಪಾಟೀಲ್, ಬಸವರಾಜ ಕಲ್ಯಾಣ, ದಿನದಯಾಳ ಮನ್ನಳ್ಳಿ ರಾಜಶೇಖರಯ್ಯಾ, ಸೈಯದ್ ಜುಬೇರ ದೈಮಿ ವಿಜಯಕುಮಾರ ಹೂಗಾರ, ಶ್ರೀಧರ ಕುಲಕರ್ಣಿ ಹಾಗೂ ಬ್ಯಾಂಕಿನ ಎಲ್ಲಾ ಸಿಬಂದಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಾಜರಿದ್ದರು,

Ghantepatrike kannada daily news Paper

Leave a Reply

error: Content is protected !!