ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು
ಬೀದರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಸೇವೆಯಲ್ಲಿರುವ ವಾಹನ ಚಾಲಕ ಶಿವಪುತ್ರ ಮಲ್ಲಿಕಾರ್ಜುನ ಚೌಳೆ ಅವರು, ಬೀದರ್ ಮೋಟಾರ್ ವಾಹನ ತರಬೇತಿ ಶಾಲೆಯ ಅಧ್ಯಕ್ಷರು, ಸದಸ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಸಂಗ ನಡೆಡಿದೆ.
ಮೇ. ೧೫ ರಂದು ಸಂಜೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಎಂ.ಎಸ್. ಬಿರಾದಾರ ಅವರಿಗೆ ಸಂಘದ ಅಧ್ಯಕ್ಷರಾದ ಪ್ರಕಾಶ್ ಗುಮ್ಮೆ ಹಾಗೂ ಸದಸ್ಯರು ಸೇರಿ, ಕಚೇರಿಗೆ ಬರುವ ಸಾರ್ವಜನಿಕರಿಗೆ ಹಾಗೂ ಕಾಯಂ ಚಾಲನಾ ಪತ್ರಕಾಗಿ ಬರುವ ಅಭ್ಯರ್ಥಿಗಳಿಗೆ, ರಸ್ತೆ ಸುರಕ್ಷತಾ ಅರಿವು ಮೂಡಿಸಿ ನಂತರ ಕಾಯಂ ಚಾಲನಾ (ಡಿ.ಎಲ್.ಟೆಸ್ಟ್) ನೋಡಬೇಕೆಂದು ಕೇಳಿದಾಗ, ಸ್ಥಳದಲ್ಲಿದ್ದ ಲಿಬ್ರಾ ಕಂಪೆನಿಯ ಹೊರಗುತ್ತಿಗೆ ಸಿಬ್ಬಂದಿ ಏಕವಚನದಲ್ಲಿ ನಿಂದಿಸಿದ್ದಾನೆ.
ಮುಂದೊರೆದು ನಮ್ಮ ಬಳಿ ಬಹಳ ಬೇರೆ ಕೆಲಸವಿದೆ. ನೀವೆಲ್ಲ ಹೇಳಿದಂತೆ ನಾವು ಕೇಳುವುದಿಲ್ಲ ಎಂದೂ ಹೆದರಿಸಿದ್ದಾನೆ ಮತ್ತು ನಿಮ್ಮನು ನೋಡಿಕೊಳ್ಳುತ್ತೇನೆಂದು ಬೆದರಿಕೆ ಒಡ್ಡಿ, ಗೂಂಡಾ ವರ್ತನೆ ತೋರಿದ್ದಾನೆ.
ಹೀಗಾಗಿ, ಈ ಗೂಂಡಾ ವಾಹನ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮೇ.೧೫ ರಂದು ಮತ್ತು ಮೇ. ೧೬ ರಂದು ಜಿಲ್ಲಾಧಿಕಾರಿಗಳಿಗೆ ದೂರು ಪತ್ರ ಸಲ್ಲಿಸಲಾಗಿದೆ.