ಬೀದರ್

5 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ:

ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಇಮಾಮಪೂರ-ಬೀದರ, ಇದರ 39ನೇ ವಾರ್ಷಿಕ ಮಹಾಸಭೆಯು ಕಾರ್ಖಾನೆಯ ಅಧ್ಯಕ್ಷ ಶ್ರೀ ಡಿ.ಕೆ. ಸಿದ್ರಾಮ ರವರ ಅಧ್ಯಕ್ಷತೆಯಲ್ಲಿ ದಿನಾಂಕ 25-09-2024 ರಂದು ಯಶಸ್ವಿಯಾಗಿ ಜರುಗಿತು.
ಮಹಾಸಭೆಯಲ್ಲಿ ಸೇರಿದ ಸದಸ್ಯ ರೈತಬಾಂಧವರನ್ನುದ್ದೇಶಿಸಿ ಮಾತನಾಡಿದ ಕಾರ್ಖಾನೆಯ ಅಧ್ಯಕ್ಷ ಶ್ರೀ ಡಿ.ಕೆ. ಸಿದ್ರಾಮ ರವರು ಕಾರ್ಖಾನೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಕಾರ್ಖಾನೆಯಲ್ಲಿ ಖಾಲಿ ಇರುವ 100 ಎಕರೆ ಜಮೀನಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಖಾಸಗಿ ಕಂಪನಿಯವರಿಗೆ ಲೀಜ್ ಮೇಲೆ ನೀಡಲು ಉದ್ಧೇಶಿಸಲಾಗಿದೆ. ಎಥೆನಾಲ್ ಘಟಕ ಶೀಘ್ರವಾಗಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಪ್ರಸಕ್ತ 2024-25ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಸರ್ಕಾರದ ಆದೇಶದಂತೆ ನವೆಂಬರ್‍ನಲ್ಲಿ ಪ್ರಾರಂಭಿಸಲಾಗುವುದು ಮತ್ತು ಈ ವರ್ಷ 5 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿರುವುದಾಗಿ ತಿಳಿಸಿದರಲ್ಲದೇ ರೈತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿಕೊಂಡರು.
ಡಿಸಿಸಿ ಬ್ಯಾಂಕಿನ ಸಾಲ ನಾವು ಪ್ರತಿ ವರ್ಷ ರೂ.20 ಕೋಟಿಯಂತೆ ತೀರಿಸಲು ಸಿದ್ದರಿದ್ದು ಅವರು ನೀಡಿರುವ SಂಖಈಂಇSI ಂಅಖಿ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂದು ಡಿ.ಕೆ. ಸಿದ್ರಾಮ ರವರು ಮನವಿ ಮಾಡಿದರು. ಅಲ್ಲದೇ ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ರವರು ರೈತರ ಹಿತದೃಷ್ಟಿಯಿಂದ ಮಧ್ಯಸ್ಥಿಕೆ ವಹಿಸಿ ಕಾರ್ಖಾನೆ ಹಾಗೂ ಬ್ಯಾಂಕ್‍ನವರ ಸಭೆ ಕರೆದು ಕಬ್ಬು ನುರಿಸುವ ಹಂಗಾಮಿಗೆ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಈ ಕಾರ್ಖಾನೆಯ ಅಭಿವೃದ್ಧಿಗೆ ಎಲ್ಲಾ ರೀತಿಯಿಂದ ಸಹಾಯ ಸಹಕಾರ ನೀಡುತ್ತಿರುವ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರಿಗೆ, ರಾಜ್ಯದ ಸಕ್ಕರೆ ಸಚಿವರಾದ ಮಾನ್ಯಶ್ರೀ ಶಿವಾನಂದ ಪಾಟೀಲ ರವರಿಗೆ, ರಾಜ್ಯದ ಸಹಕಾರ ಸಚಿವರಾದ ಮಾನ್ಯಶ್ರೀ ಕೆ.ಎನ್. ರಾಜಣ್ಣ ರವರಿಗೆ, ಮಾನ್ಯ ಮಾಜಿ ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಗಳ ರಾಜ್ಯ ಸಚಿವರು ಹಾಗೂ ಸಂಸದರಾದ ಮಾನ್ಯಶ್ರೀ ಭಗವಂತ ಖೂಬಾ ರವರಿಗೆ, ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ಈಶ್ವರ ಖಂಡ್ರೆ ರವರಿಗೆ, ಪೌರಾಡಳಿತ ಸಚಿವರಾದ ಮಾನ್ಯಶ್ರೀ ರಹೀಂ ಖಾನ್ ರವರಿಗೆ, ಮಾನ್ಯ ಸಂಸದರಾದ ಮಾನ್ಯಶ್ರೀ ಸಾಗರ ಖಂಡ್ರೆ ರವರಿಗೆ, ಮಾನ್ಯ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ರವರಿಗೆ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‍ನ ನಿರ್ದೇಶಕರಾದ ಮಾನ್ಯಶ್ರೀ ಉಮಾಕಾಂತ ನಾಗಮಾರಪಳ್ಳಿಯವರಿಗೆ, ಜಿಲ್ಲೆಯ ಮಾನ್ಯ ಶಾಸಕರಿಗೆ, ಮಾನ್ಯ ವಿಧಾನ ಪರಿಷತ್ ಸದಸ್ಯರಿಗೆ, ಜಿಲ್ಲಾಡಳಿತಕ್ಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆÀ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬೀದರ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು, ಇತ್ಯಾದಿ ಬ್ಯಾಂಕ್‍ಗಳ ಅಧಿಕಾರಿಗಳಿಗೆ, ಮಾನ್ಯ ಜಿಲ್ಲಾಡಳಿತಕ್ಕೆ, ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ, ಪತ್ರಿಕಾ ಮಿತ್ರರಿಗೆ ಹಾಗೂ ಕಾರ್ಖಾನೆಯ ಸಿಬ್ಬಂದಿ ವರ್ಗಕ್ಕೆ ಕಾರ್ಖಾನೆಯ ಅಧ್ಯಕ್ಷರು ಕೃತಜ್ಞತೆಗಳನ್ನು ಸಲ್ಲಿಸಿದರು.
ಸದರಿ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸರ್ವಸದಸ್ಯ ರೈತಬಾಂಧವರನ್ನು ಹಾಗೂ ಗಣ್ಯಮಾನ್ಯರನ್ನು ಸ್ವಾಗತಿಸಿದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೋಮಶೇಖರ ಪಾಟೀಲ ರವರು ಮಹಾಸಭೆಯ ನೋಟೀಸ್‍ನ್ನು ಮಂಡಿಸಿದರು.
ಸದರಿ ಸಭೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ಶ್ರೀ ಬಾಲಾಜಿ ಚವ್ಹಾಣ, ಕಾನೂನು ಸಲಹೆಗಾರರಾದ ಶ್ರೀ ಬಿ.ಎಸ್. ಅಪರಂಜಿ, ನಿರ್ದೇಶಕರುಗಳಾದ ಶ್ರೀ ಉಮಾಕಾಂತ ನಾಗಮಾರಪಳ್ಳಿ, ಶ್ರೀ ಝರೇಪ್ಪಾ ಮಮದಾಪೂರೆ, ಶ್ರೀ ರಾಜಕುಮಾರ ಕರಂಜಿ, ಶ್ರೀ ಶಿವಬಸಪ್ಪಾ ಚೆನ್ನಮಲ್ಲೆ, ಶ್ರೀ ಸಿದ್ರಾಮ ವಾಘಮಾರೆ, ಶ್ರೀ ವಿಜಯಕುಮಾರ ಪಿ. ಪಾಟೀಲ, ಶ್ರೀ ಸಿತಾರಾಮ ಖೇಮಾ, ಶ್ರೀ ಸಂಗಮೇಶ ಪಾಟೀಲ, ಶ್ರೀಮತಿ ಶೋಭಾವತಿ ಪಾಟೀಲ, ಶ್ರೀಮತಿ ಮಲ್ಲಮ್ಮಾ ಪಾಟೀಲ, ಶ್ರೀ ಶಶಿಕುಮಾರ ಪಾಟೀಲ, ಶ್ರೀ ವೀರಶೆಟ್ಟಿ ಪಟ್ನೆ, ಶ್ರೀ ನಾಗರೆಡ್ಡಿ ಯಾಚೆ ಹಾಗೂ ಗಣ್ಯಮಾನ್ಯರು, ಕಾರ್ಖಾನೆಯ ಇಲಾಖಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ಶ್ರೀ ಬಾಲಾಜಿ ಚವ್ಹಾಣ ರವರು ವಂದನಾರ್ಪಣೆ ಸಲ್ಲಿಸಿದ್ದರು.

ಮಾನ್ಯ ವರದಿಗಾರರು: ಈ ಮೇಲಿನ ಪತ್ರಿಕಾ ಪ್ರಕಟಣೆಯನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದೆ.

Ghantepatrike kannada daily news Paper

Leave a Reply

error: Content is protected !!