ಜೈ ಭಾರತ ಮಾತಾ ಸೇವಾ ಸಮಿತಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ
ಬೀದರ್‌ನಲ್ಲಿ ಶುಕ್ರವಾರ ಜೈ ಭಾರತ ಮಾತಾ ಸೇವಾ ಸಮಿತಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಹವಾ ಮಲ್ಲಿನಾಥ ಮಹಾರಾಜ, ವೈಜಿನಾಥ ಝಳಕಿ, ಸದಾನಂದ ಜೋಶಿ, ಗುರುಸಿದ್ದಪ್ಪ ಬೆನಕನಳ್ಳಿ, ಪಪ್ಪು ಪಾಟೀಲ್ ಖಾನಾಪುರ, ಸಂತೋಷರೆಡ್ಡಿ ಆಣದೂರ, ಜಾಫೆಟ್ ರಾಜ್ ಕಡ್ಯಾಳ್, ವೀರೇಶ ಸ್ವಾಮಿ ಇತರರಿದ್ದರು.
ಬೀದರ್:ಜಾತಿ, ಧರ್ಮ, ಪಕ್ಷ, ಪರಿವಾರಕ್ಕೆ ತೋರಿಸುವಂಥ ಪ್ರೀತಿ, ಕಾಳಜಿ, ಉತ್ಸಾಹವನ್ನು ಇಂದು ಪ್ರತಿಯೊಬ್ಬರು ದೇಶದ ಏಕತೆ ಮತ್ತು ಅಖಂಡತೆಗೆ ತೋರಿಸಬೇಕಿದೆ. ದೇಶದ ಹಿತ ಮತ್ತು ರಕ್ಷಣೆಗೆ ಸಂಕಲ್ಪ ಮಾಡಬೇಕು. ದೇಶಕ್ಕಾಗಿ ಪ್ರತಿಯೊಬ್ಬ ದೇಶ ವಾಸಿಯೂ ಸೈನಿಕರಂತೆ ದುಡಿಯಲು, ಮಡಿಯಲು ಸನ್ನದ್ಧರಾಗುವ ಅಗತ್ಯವಿದೆ ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟಿçÃಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ(ನಿರಗುಡಿ ಮುತ್ತ್ಯಾ) ಹೇಳಿದರು.
ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಶುಕ್ರವಾರ ಬೀದರ್-ಭಾಲ್ಕಿ ರಸ್ತೆಯ ರಿಂಗ್ ರೋಡ್ ಕ್ರಾಸ್ ಬಳಿ ಹಮ್ಮಿಕೊಂಡ ಕಾರ್ಗಿಲ್ ವಿಜಯ್ ದಿವಸ್ ಹಾಗೂ ನಿವೃತ್ತ ಸೈನಿಕರ ಗೌರವ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ದಿವ್ಯ ಸಂದೇಶ ನೀಡಿದ ಅವರು, ದೇಶವೇ ನಮ್ಮ ಮನೆಯಾಗಬೇಕು. ದೇಶಕ್ಕೇ ಎಲ್ಲರೂ ಮೊದಲು ಪೂಜಿಸಬೇಕು. ದೇಶ ಉಳಿದರೆ ಮಾತ್ರ ನಮ್ಮ ಸಂವಿಧಾನ, ಜಾತಿ, ಧರ್ಮ, ಪಕ್ಷ, ಪರಿವಾರ ಎಲ್ಲವೂ ಉಳಿಯುತ್ತದೆ. ದೇಶ ಉಳಿಯದಿದ್ದರೆ ಯಾವುದೂ ಉಳಿಯಲ್ಲ ಎಂದು ಎಚ್ಚರಿಸಿದರು.
ದೇಶವನ್ನು ಸುಂದರ, ಸಮೃದ್ಧ ಹಾಗೂ ಸಶಕ್ತಗೊಳಿಸುವ ಜೊತೆಗೆ ಎಲ್ಲ ಸಂಕಟಗಳಿAದ ಪಾರು ಮಾಡಬೇಕಾದರೆ ಎಲ್ಲರೂ ಜಾತಿ, ಮತ, ಪಂಥ, ಪಕ್ಷಕ್ಕಿಂತ ರಾಷ್ಟç ಶ್ರೇಷ್ಠ. ಸೈನಿಕರು ಹಾಗೂ ರೈತರು ದೇಶದ ಎರಡು ಕಣ್ಣುಗಳಾಗಿದ್ದಾರೆ. ಸೈನಿಕರು ದಿನದ ೨೪ ಗಂಟೆ ಅನೇಕ ದುರ್ಗಮ ಸ್ಥಿತಿಯಲ್ಲೂ ದೇಶ ಕಾಯುವ ಕೆಲಸ ಮಾಡುತ್ತಿದ್ದರಿಂದ ನಾವೆಲ್ಲರೂ ಇಲ್ಲಿ ನೆಮ್ಮದಿ ಬದುಕು ನಡೆಸುತ್ತಿದ್ದೇವೆ. ಸೈನಿಕರ ಬಗ್ಗೆ ಎಲ್ಲರಿಗೂ ಹೆಮ್ಮೆ ಇರಬೇಕು. ದೇಶದ ಸಮಸ್ಯೆಗಳ ಪರಿಹಾರಕ್ಕೆ ದೇಶದ ಎಲ್ಲರೂ ಸೈನಿಕರಂತೆ ಸೇವೆಗೆ ಸಜ್ಜಾಗಬೇಕು. ಸಂವಿಧಾನದ ರಕ್ಷಣೆಗೆ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು. ಯಾವ ಕಾರಣಕ್ಕೂ ಸಂವಿಧಾನದ ದುರುಪಯೋಗ ಆಗಬಾರದು ಎಂದರು.
ಎಲ್ಲರಲ್ಲೂ ದೇಶದ ಬಗ್ಗೆ ಹೆಮ್ಮೆ, ಗೌರವ, ಅಭಿಮಾನ, ಸ್ವಾಭಿಮಾನ ಹೆಚ್ಚಾಗಬೇಕು. ದೇಶಕ್ಕಿಂತ ದೊಡ್ಡದು ಏನೂ ಇಲ್ಲ.
ಬಲಿಷ್ಠ ಪ್ರಜಾಪ್ರಭುತ್ವ, ಸದೃಢ ದೇಶಕ್ಕಾಗಿ ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆಯಬೇಕು. ದೇಶದ ಹಿತದ ವಿಷಯ ಬಂದಾಗ ಪಕ್ಷ, ಜಾತಿ, ಧರ್ಮ ಬದಿಗೊತ್ತಿ ಎಲ್ಲರೂ ಒಂದಾಗಿ ಹೋರಾಡಬೇಕು. ದೇಶದಲ್ಲಿ ಅಶಾಂತಿ, ಸ್ವಾರ್ಥ,