ಬೀದರ್

4ನೇ ಮಾಸಿಕ ಶರಣ ಚಿಂತನ ಕಾರ್ಯಕ್ರಮ

ಬೀದರ: ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ದಿನಾಂಕ 17/06/2024 ರಂದು ಬೆಳಿಗ್ಗೆ 11:30 ಗಂಟೆಗೆ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ 4ನೇ ಮಾಸಿಕ ಶರಣ ಚಿಂತನ ಕಾರ್ಯಕ್ರಮ ಜರುಗಿತು.
ಬಸವ ಸೇವಾ ಪ್ರತಿಷ್ಠಾನ, ಬಸವ ಗಿರಿಯ ಪೂಜ್ಯ ಡಾ. ಗಂಗಾAಬಿಕಾ ಅಕ್ಕನವರು ಉದ್ಛಾಟಕರಾಗಿ ಆಗಮಿಸಿ, ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಛಾಟಿಸಿ ಮಾತನಾಡುತ್ತಾ, ಬಸವಾದಿ ಶರಣರು ಜಗತ್ತಿಗೆ ಸರ್ವಶ್ರೇಷ್ಠ ವಚನ ಸಾಹಿತ್ಯವನ್ನು ಬದುಕಿನ ಸಾಹಿತ್ಯವೆಂದು ಕೊಟ್ಟಿದ್ದು ಇತಿಹಾಸದ ಪುಟದಲ್ಲಿ ಅವಿಸ್ಮರಣೀಯವಾದುದು. ನಡೆ-ನುಡಿ ಸಿದ್ಧಾಂತದ ಸಾಹಿತ್ಯವು ವಚನಗಳಾಗಿವೆ. ಷಟಸ್ಥಲ ಸಿದ್ಧಾಂತವು ಶರಣ ತತ್ವ ಕೊಟ್ಟಿದ್ದು, ವ್ಯಕ್ತಿಯು ಶರಣನಾಗಲಿಕ್ಕೆ ಸಾಧ್ಯವಿದೆ. ಜಾತಿ, ಮತ, ಧರ್ಮ, ವರ್ಗ ಬೇಧ-ಭಾವ ಮಾಡಲಾರದೇ ಸರ್ವರ ಏಳಿಗೆಗಾಗಿ ದುಡಿಯುವುದೇ ಶರಣ ತತ್ವವಾಗಿದೆ. ಕಾಯಕ-ದಾಸೋಹ ತತ್ವವು ಬದುಕಿನಲ್ಲಿ ಪ್ರತಿಯೊಬ್ಬರು ಆಚರಣೆಯಲ್ಲಿ ತರುವುದು ಅನಿವಾರ್ಯತೆ ಇದೆ. ಅರಿವಿನಲ್ಲಿ ಚೇತನ ಶಕ್ತಿ ಇದೆ. ಅದನ್ನು ಅರಿತು ಮಾನವ ಜೀವಿ ಶರಣ ಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳಬೇಕೆಂದು ನುಡಿದರು.
ಶರಣ ಸಾಹಿತ್ಯದ ಸರ್ವಶ್ರೇಷ್ಠ ಚಿಂತಕರಾದ ಪ್ರೊ. ಸಿದ್ದಣ್ಣಾ ಲಂಗೋಟಿ ಇವರು ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಅನುಭಾವ ಮಂಡಿಸುತ್ತಾ, ಬಸವಾದಿ ಶರಣರ ಸಂಕುಲದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಧೀರ, ದಿಟ್ಟ, ನ್ಯಾಯ ನಿಷ್ಠ ತತ್ವ ಉಳ್ಳವರಾಗಿದ್ದು, ಸಮಾಜೋ ಧಾರ್ಮಿಕದಲ್ಲಿಯ ಓರೆಕೋರೆಗಳನ್ನು ತಿದ್ದಿದ್ದಾರೆ. ಚೌಡಯ್ಯನವರು ಮೂಲತಃ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯವರಾಗಿದ್ದಾರೆ. ಅವರು ಸುಮಾರು 273 ವಚನಗಳು ರಚಿಸಿದ್ದಾರೆ. ಅವರ ಮೂಲ ಕಾಯಕ ದೋಣಿ ನಡೆಸುವುದು. ಭವ-ಬಂಧನ ಮತ್ತು ಆಧ್ಯಾತ್ಮಿಕ ಜೀವನದಿಂದ ಬಿಡುಗಡೆ ಹೊಂದುವುದು, ಶರಣರ ಸ್ಥೂಲ, ಸೂಕ್ಷö್ಮ ಮತ್ತು ಕಾರಣಿಕ ಶರೀರದ ಬಗ್ಗೆ ತಿಳಿಸಿದ್ದರೆ, ಚೌಡಯ್ಯನವರು ಮುಂದುವರೆದು, 8 ಶರೀರಗಳ ಪರಿಕಲ್ಪನೆ ನೀಡಿದ್ದಾರೆ. ಗಣಾಚಾರ ತತ್ವದ ಮುಖಾಂತರ ಜನರನ್ನು ಜಾಗೃತಗೊಳಿಸಿದ್ದಾರೆ. ‘ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯಾ’ ಎಂಬ ಶಿವಶರಣರ ವಾಣಿಯ ಗಾಳಿ ನಿಮ್ಮ ಆಧೀನದಲ್ಲಿ ಇಲ್ಲ ಎನ್ನುವ ವಿಚಾರ, ಏಕದೇವ ಉಪಾಸನೆ ತತ್ವವನ್ನು ಶರಣರು ಅನುಸರಿಸಿಕೊಳ್ಳಬೇಕೆದಿದ್ದಾರೆ. ಶರಣ ತತ್ವದಲ್ಲಿ ಶರಣಸತಿ-ಲಿಂಗಪತಿ ಎಂಬ ತತ್ವ ಚೌಡಯ್ಯನವರು ತಮ್ಮ ಜ್ಞಾನದ ಮುಖಾಂತರ ಇವೆರಡು ಸಮರಸತೆಯಿಂದ ಎಂಬ ಆಧ್ಯಾತ್ಮಿಕ ಚಿಂತನೆ ನೀಡಿದ್ದಾರೆ. ಶರಣರ ಜಯಂತಿ ಉತ್ಸವ ಮತ್ತು ಸ್ಮರಣೋತ್ಸವ ಮಾಡುವ ಬದಲಾಗಿ ಶರಣ ಉತ್ಸವ ಪರಿ ಕಲ್ಪನೆಯನ್ನು ಶರಣ ಚಿಂತಕರು ನೀಡಿದ್ದಾರೆ,ಮುಂದುವರೆದು ಮಾತನಾಡುತ್ತಾ, ಬಸವಾದಿ ಶರಣರು ಸುಜ್ಞಾನಿಗಳು ಆಗಿದ್ದಾರೆ ಎಂದು ವಿಷಯ ಪ್ರತಿಪಾದಿಸಿದ್ದಾರೆ.
ಅತಿಥಿಗಳಾದ ಎಂ.ಜಿ. ದೇಶಪಾಂಡೆ ರವರು ವಚನ ಸಾಹಿತ್ಯದ ಕುರಿತು ಮಾತನಾಡಿದರು. ಪರಿಷತ್ತಿನ ಅಧ್ಯಕ್ಷರಾದ ಸುನೀತಾ ದಾಡಗೆ ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ವಚನ ಸಾಹಿತ್ಯ ಪರಿಷತ್ತು ಸಮಾಜದಲ್ಲಿ ಮನೆ ಮನೆಗಳಲ್ಲಿ ವಚನ ಚಿಂತನೆ ನಡೆಯುವ ಬಸವ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಬಿತ್ತರಿಸುವ ಕಾರ್ಯವಾಗಬೇಕಾಗಿದೆ. ಅದರಂತೆ ಪರಿಷತ್ತಿನ ಪದಾಧಿಕಾರಿಗಳು ಬಸವ ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಪರಿಷತ್ತಿನ ಸಹ ಕಾರ್ಯದರ್ಶಿಗಳಾದ ಶೈಲಜಾ ಚಳಕಾಪೂರ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬಸವ ತತ್ವವು ಮೌಢ್ಯತೆ, ಕಂದಾಚಾರ ತತ್ವದಿಂದ ಬಲು ದೂರವಿದ್ದು, ಕಾಯಕ ದಾಸೋಹ ಸಿದ್ಧಾಂತವು ಸಕಲ ಜೀವಿಗಳ ಕಲ್ಯಾಣ ಬಯಸುವ ತತ್ವವಾಗಿ ಈ ನಿಟ್ಟಿನಲ್ಲಿ ಮನೆ ಮನೆಗಳಿಗೂ ಚಿಂತನ ಕಾರ್ಯಕ್ರಮ ನಡೆಯಬೇಕಾಗಿದೆ ಎಂದರು.
ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ನೇಹಾ, ಅಂಬಿಗರ ಚೌಡಯ್ಯನವರ ಕುರಿತು ಮಾತನಾಡಿದರು. ದಾಸೋಹಿಗಳಾದ ಡಾ. ಎಸ್.ಎಸ್.ಸಿದ್ಧಾರೆಡ್ಡಿ ಫೌಂಡೇಶನ್ ಬೀದರದ ಗೌರವಾಧ್ಯಕ್ಷರಾದ ಡಾ. ಗುರಮ್ಮಾ ಸಿದ್ಧಾರೆಡ್ಡಿ ರವರು ಬಸವ ಪೂಜೆ ನೆರವೆರಿಸಿದರು. ಅಕ್ಕ ಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಶರಣಿಯರಾದ ಶಕುಂತಲಾ ಮತ್ತು ಕಸ್ತೂರಬಾಯಿ ಬಿರಾದಾರ ವಚನ ಗಾಯನ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲೆಯ ನೂತನ ತಾಲೂಕಾ ಅಧ್ಯಕ್ಷರಾದ, ಚಿಟ್ಟಗುಪ್ಪಾದ ಸವಿತಾ ಪಾಟೀಲ್, ಬಸವಕಲ್ಯಾಣದ ಕಲ್ಯಾಣರಾವ ರಾಮಣ್ಣ ಮದರಗಾಂವಕರ್, ಹುಲಸೂರಿನ ರಾಜಕುಮಾರ ನಾಗನಾಥ ತೊಂಡಾರೆ, ಭಾಲ್ಕಿಯ ಗುಂಡಪ್ಪಾ ಸಂಗಮಕರ್, ಕಮಲನಗರದ ಮಹಾದೇವ.ಎಸ್.ಮಡಿವಾಳ, ಹುಮನಾಬಾದದ ಅನಿಲಕುಮಾರ ಶರಣಯ್ಯ ಸ್ವಾಮಿ, ಔರಾದದ ಪರಮೇಶ್ವರ ವಿಲಾಸಪೂರೆ, ಬೀದರದ ಚೇತನಾ ಪಾಟೀಲ್ ರವರು ಅಧಿಕಾರ ಸ್ವೀಕರಿಸಿದರು.
ಪುಣ್ಯವತಿ ವಿಸಾಜಿ ಸ್ವಾಗತ ಕೋರಿದರೆ, ಬಸವರಾಜ ಮೂಲಗೆ ನಿರೂಪಿಸಿದರು. ಶ್ರೀದೇವಿ ಪಾಟೀಲ್ ವಂದಿಸಿದರು. ಪ್ರಮುಖರಾದ ಕಲ್ಯಾಣರಾವ ಚಳಕಾಪೂರೆ, ಹೇಮಲತಾ ವೀರಶೆಟ್ಟೆ, ರಘುಶಂಕ ಭಾತಂಬ್ರಾ, ಭಾರತಿ ವಸ್ತçದ್, ಸುನಿತಾ ಕೂಡ್ಲಿಕರ್, ಪಾರ್ವತಿ ಸೋನಾರೆ, ಮಹೇಶ್ವರಿ ಹೆಡೆ, ಪ್ರೊ. ಉಮಾಕಾಂತ ಮೀಸೆ, ಶ್ರೀಧರ ಗೌಡರ್, ಮೀನಾಕ್ಷಿ ಪಾಟೀಲ್, ಸವಿತಾ, ಲಕ್ಷಿö್ಮÃ, ಅನಿತಾ, ಸಿದ್ದಮ್ಮಾ ಹಳಕಾಯ, ಕೀರ್ತಮ್ಮ, ಮತ್ತು ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು, ಶರಣ-ಶರಣಿಯರು ಭಾಗವಹಿಸಿದ್ದರು.

Ghantepatrike kannada daily news Paper

Leave a Reply

error: Content is protected !!