ಸಿ.ಸಿ.ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಮೊಬೈಲ್ ಕಳ್ಳರ ಬಂಧನ
ಪೊಲೀಸ್ ಆಯುಕ್ತರಾದ ಚೇತನ್ ಆರ್., ಐ.ಪಿ.ಎಸ್ನಿರ್ದೇಶನದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ವಿವಿಧಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲುಸಂತೋಷ ಬನ್ನಟ್ಟಿ ಎ.ಸಿ.ಪಿ ಸಿ.ಸಿ.ಬಿ ರವರ ಮಾರ್ಗದರ್ಶನದಲ್ಲಿ ಪಿ.ಐ ರವರಾದ ದಿಲೀಪ ಸಾಗರ ನೇತೃತ್ವದಲ್ಲಿ ಶಿವಪ್ಪ ಪಿ.ಎಸ್.ಐ, ರವಿಂದ್ರ ಕುಮಾರ ಸಿ.ಹೆಚ್.ಸಿ-24, ಸುನೀಲಕುಮಾರ ಸಿ.ಹೆಚ್.ಸಿ-167, ಅಶೋಕ ಸಿ.ಹೆಚ್.ಸಿ-05, ವಿಶ್ವನಾಥ ಸಿ.ಪಿ.ಸಿ-24,ಯಲ್ಲಪ್ಪ ಸಿ.ಪಿ.ಸಿ-496, ಅಶೋಕ ಕಟಕೆ ಸಿ.ಪಿ.ಸಿ-134, ಶ್ರೀಶೈಲ್ ಸಿ.ಪಿ.ಸಿ-27, ನಾಗರಾಜಸಿ.ಪಿ.ಸಿ-450, ಜಾಕೀರ ಹುಸೇನ್ ಎಪಿಸಿ ರವರನ್ನೊಳಗೊಂಡ ತಂಡವನ್ನು ರಚಿಸಿದ್ದುತಂಡವು ನಗರದ ಶಹಾಬಾದ ರಿಂಗರೊಡ ಹತ್ತಿರ ಮೋಟರ್ ಸೈಕಲ್ ಮೇಲೆ 04 ಜನವ್ಯಕ್ತಿಗಳು ಸಂಶಯಾಸ್ಪದ ರೀತಿಯಲ್ಲಿ ನಿಂತಿದ್ದಾಗ ಅವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿತಾವೆಲ್ಲರೂ ಕೂಡಿ ಕಳ್ಳತನ ಮಾಡಿರುವ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುವುದಕ್ಕೆ
ಬಂದು ನಿಂತಿರುತ್ತೇವೆ ಎಂದು ತಿಳಿಸಿರುತ್ತಾರೆ. ಆರೋಪಿತರಾದ ಮಹ್ಮದ ಅಬ್ಬಾಸ್ ತಂದೆಮಹಮೂದ ಮುಸ್ತಫಾ ಖುರೇಶಿ 22 ವರ್ಷ, ಪಿ.ಓ.ಪಿ ಕೆಲಸ, ಸಾ. ಮಿಲ್ಲತನಗರ ಕಲಬುರಗಿ ವಿವಿಧ ಕಂಪನಿಯ 04 ಮೊಬೈಲ್ ಫೋನ್‌ಗಳು, ಮಹ್ಮದಜುಬೇರ್ ತಂದೆ ಮಹ್ಮದ ಇಮಾಮುದ್ದೀನ್, 19 ವರ್ಷ, ಹೋಟೆಲ್ ಕೆಲಸ,ಸಾ. ಅಹ್ಮದ ನಗರ ಚುನ್ನಾಬಟ್ಟಿ ಹತ್ತಿರ ಮಹಿಬೂಬ ನಗರ ರಸ್ತೆ ಕಲಬುರಗಿ ವಿವಿಧಕಂಪನಿಯ 04 ಮೊಬೈಲ್ ಫೋನ್‌ಗಳು, ಖಾಜಾಮೈನುದ್ದೀನ್ ಇನಾಮದಾರತನ್ನೀರ್ ತಂದೆ ಅಬ್ದುಲ್ ಗಫಾರ್ ಇನಾಮದಾರ 23 ವರ್ಷ, ಚಾಲಕ,ಸಾ. ಹಜ್ಜ ಕಮೀಟಿ ಹತ್ತಿರ ನಯಾ ಮೊಹಲ್ಲಾ ಕಲಬುರಗಿ, ಹಾವ: ಇಸ್ಲಾಮಾಬಾದ ಕಾಲೋನಿಕಲಬುರಗಿ ವಿವಿಧ ಕಂಪನಿಯ 04 ಮೊಬೈಲ್ ಫೋನ್‌ಗಳು ಮಹಿಬೂಬಪಾಶಾ ತಂದೆ ಅಬ್ದುಲ್ ಗನಿ ಲಂಗಡೆ 39 ವರ್ಷ, ಚಾಲಕ, ಸಾ. ಮೊಮಿನಪುರಕಲಬುರಗಿ ವಿವಿಧ ಕಂಪನಿಯ 02 ಮೊಬೈಲ್ ಫೋನ್‌ಗಳು ಹೀಗೆ ಒಟ್ಟು 04 ಜನಆರೋಪಿತರಿಂದ ವಿವಿಧ ಕಂಪನಿಯ ಒಟ್ಟು 14 ಮೊಬೈಲ್ ಫೋನ್‌ಗಳು ಅಂ.ಕಿ. 42,000/-ರೂ ಹಾಗೂ ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ಅಂ.ಕಿ. 25,000/-ರೂ ಮೌಲ್ಯದ ಸ್ವತ್ತುಜಪ್ತಿಪಡಿಸಿಕೊಂಡು ಸದರಿ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು ಇರುತ್ತದೆ.