ಬೀದರ್

  ಬೀದರ, ಜುಲೈ.9 : 2023-24ನೇ ಸಾಲಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಜುಲೈ.11 ರಮದು ಬೆಳಿಗ್ಗೆ 10:30 ಗಂಟೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಲು, ಜಿಲ್ಲಾ ಪಂಚಾಯತ ಬೀದರ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಕಲಚೇತನರ (ಅಂಗವಿಕಲರ) ಕಲ್ಯಾಣಾಧಿಕಾರಿಗಳ ಕಛೇರಿ ಮೈಲೂರ ಬೀದರ ಇಲ್ಲಿ ಸಂದರ್ಶನ ನಡೆಯಲಿದೆ.
ಅನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಒಂದು ಪ್ರತಿಯನ್ನು ಈ ಕಛೇರಿಗೆ ಸಲ್ಲಿಸಿದ ಹಾಗೂ ಸಲ್ಲಿಸದೆ ಇರುವ ಅರ್ಜಿದಾರರುಕೂಡ ತಮ್ಮ ಅಗತ್ಯ ಮೂಲ ದಾಖಲಾತಿಗಳಾದ ಅಂಗವಿಕಲರ ಯುಡಿಐಡಿ ಕಾರ್ಡ್, ಜಾತಿ ಆದಾಯಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಕಲಿಕಾ ವಾಹನ ಚಾಲಿತ ಪರವಾನಿಗಿ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಆಧಾರ ಕಾರ್ಡ, ಅನ್‌ಲೈನ್ ಸಲ್ಲಿಸಿರುವ ಅರ್ಜಿ ಕಡ್ಡಾಯವಾಗಿ ತೆಗೆದುಕೊಂಡು ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08482-234647, 9513081723ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!