371 (ಜೆ) ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಹೋರಾಟ ಮಾಡುತ್ತಿರುವುದು ತೀವ್ರ ಖಂಡನೀಯ :ಸಿ.ಆನಂದ ಘಂಟೆ
ನಮ್ಮ ದೇಶ 1947 ರಲ್ಲಿ ಸ್ವಾತಂತ್ರ್ಯಗೊಂಡು ಸಂಭ್ರಮಿಸುವಾಗ ಕಲ್ಯಾಣ ಕರ್ನಾಟಕ ಭಾಗವು ನಿಜಾಂನ ಆಳ್ವಿಕೆಯಲ್ಲಿತ್ತು. ಒಂದು ವರ್ಷದ ನಂತರ ಈ ಭಾಗಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅತಿ ಹಿಂದುಳಿದ ಪ್ರದೇಶವಾಗಿದೆ. ಆದ್ದರಿಂದಲೇ ಈ ಭಾಗದ ಅನೇಕ ಜನರ ದಶಕಗಳ ತ್ಯಾಗ ಮತ್ತು ಹೋರಾಟದ ಫಲವಾಗಿ ಸಂವಿಧಾನದ 371 (ಜೆ) ಕಲಂನಡಿ ವಿಶೇಷ ಸ್ಥಾನ ಸಿಕ್ಕಿದ್ದರಿಂದ ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವ ನಿರೀಕ್ಷೆಯಲ್ಲಿದ್ದ ಈ ಭಾಗದ ಜನರ ಹಕ್ಕುಗಳನ್ನು ಸಹಿಸದ ಕರ್ನಾಟಕ ರಾಜ್ಯ ಹಸಿರು ಪ್ರತಿಷ್ಠಾನ ಸಂಸ್ಥೆಯವರು ಕಲ್ಯಾಣ ಕರ್ನಾಟಕಕ್ಕೆ ನೀಡಿದ 371 (ಜೆ) ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಹೋರಾಟ ಮಾಡುತ್ತಿರುವುದು ತೀವ್ರ ಖಂಡನೀಯವಾಗಿದೆ.
ಅಖಂಡ ಕರ್ನಾಟಕ ಪರಿಕಲ್ಪನೆ ಹೊಂದಿದ ರಾಜ್ಯದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿ, ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವುದರಿಂದ ಸಹಜವಾಗಿಯೇ ನಮ್ಮ ನಮ್ಮಲ್ಲೇ ದ್ವೇಷ, ಅಸೂಯೆ ಹುಟ್ಟು ಹಾಕುವಂತಹ ಕೆಲಸ ಮಾಡುತ್ತಿರುವ ಸದರಿ ಪರಿಷ್ಠಾನಕ್ಕೆ ಛೀಮಾರಿ ಹಾಕುವುದಲ್ಲದೆ ಇಂತಹ ಘಟನೆಗಳನ್ನು ಮರುಕಳಿಸದಂತೆ ಎಚ್ಚರ ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಜಯ ಕರ್ನಾಟಕ ಸಂಘಟನೆ ಒಂದೇ ನಾಡು, ಒಂದೇ ಕುಲ, ಒಂದೇ ದೈವ ಎನ್ನುವ ತತ್ವಧಾರಿತ ವಿಷಯಗಳ ಮೇಲೆ ಸೇವೆ ಸಲ್ಲಿಸುತ್ತ ಬರುತ್ತಿದ್ದು, ಕರ್ನಾಟಕ ರಾಜ್ಯದ ನೆಲ, ಜಲ, ಭಾಷೆ, ಗಡಿ ವಿಷಯಗಳು ಬಂದಾಗ ಹೋರಾಟ ಮಾಡುತ್ತ ಬಂದಿದ್ದೇವೆ.
ಕರ್ನಾಟಕ ರಾಜ್ಯವನ್ನು ಎಂದೂ ಕೂಡ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಪ್ರದೇಶ ಎಂದು ತಾರತಮ್ಯ ಮಾಡಿರುವುದಿಲ್ಲ. ಅಖಂಡ ಕರ್ನಾಟಕದ ಪರಿಕಲ್ಪನೆಯನ್ನು ಹೊಂದಿರುವ ನಾವೆಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳಿ ಬದುಕುತ್ತಿದ್ದು, ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಕರ್ನಾಟಕವನ್ನು ಈ ರೀತಿಯಾಗಿ ವಿಭಜಿಸುವ ಮನಸ್ಥಿತಿಯುಳ್ಳವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುವುದು ತುಂಬ ಅವಶ್ಯಕವಾಗಿದೆ.
ಪ್ರಯುಕ್ತ ತಾವುಗಳು ದಯಮಾಡಿ ಕಲ್ಯಾಣ ಕರ್ನಾಟಕದ 371 (ಜೆ) ಕಲಂ ವಿರೋಧಿಸಿದ ಹಸಿರು ಪ್ರತಿಷ್ಠಾನ ಸಂಸ್ಥೆಯನ್ನು ರದ್ದುಗೊಳಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿ
ಸಿ.ಆನಂದ ಘಂಟೆ
ಜಿಲ್ಲಾಧ್ಯಕ್ಷರು, ಬೀದರ
ಅರವಿಂದ ಕಾರಬಾರಿ
ಪ್ರಧಾನ ಕಾರ್ಯದರ್ಶಿ ಪುನಿತ ಪಾಟೀಲ್
ಉಪಾಧ್ಯಕ್ಷರು
ರವಿ ಚಿನ್ನಪನ್ನೋರ
ಉಪಾಧ್ಯಕ್ಷರು
ಪ್ರಮೋದ ಚಿದ್ರಿ
ಮುಖಂಡರು
ಪ್ರಭು ಪಾಟೀಲ್
ಮುಖಂಡರು
ರಿಚರ್ಡ್ ಸೊರಳ್ಳಿಕರ್
ಕಾರ್ಯದರ್ಶಿ
ರಾಹುಲ್ ನಂದಿ
ನಗರ ಅಧ್ಯಕ್ಷರು
ಗೋರಖ ಶ್ರೀಮಾಳೆ
ತಾಲೂಕು ಅಧ್ಯಕ್ಷರು, ಭಾಲ್ಕಿ