371 (ಜೆ) ಹೋರಾಟ : ಕಲಾಪ ಬಹಿಷ್ಕರಿಸಿ ಪ್ರತಿಭಟನೆ
ಬೀದ್ : 371 (ಜೆ) ಸಂಪೂರ್ಣ ಅನುμÁ್ಠನ ಹಾಗೂ ಅದನ್ನು ವಿರೋಧಿಸುತ್ತಿರುವ ಹಸಿರು ಪ್ರತಿμÁ್ಠನ ವಿರುದ್ಧ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಗೆ ಜಿಲ್ಲಾ ವಕೀಲರ ಸಂಘ ಕಲಾಪಗಳು ಮಧ್ಯಾಹ್ನದವರೆಗೆ ಬಹಿಷ್ಕರಿಸಿ ಬೆಂಬಲ ಸೂಚಿಸಿದೆ.
ನಗರದ ನ್ಯಾಯಾಲಯ ಆವರಣದಿಂದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪಾ ಪಾಟೀಲ್ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತದಲ್ಲಿ ಸಮಾರೋಪಗೊಂಡಿತು.
ಈ ಹೋರಾಟ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ 371(ಜೆ) ವಿರುದ್ಧದ ಷಡ್ಯಂತ್ರವನ್ನು ಸಹಿಸುವುದಿಲ್ಲ. ಇದು ಇಷ್ಟಕ್ಕೆ ನಿಂತರೆ ಉತ್ತಮ. ಇಲ್ಲದಿದ್ದರೆ ಉಗ್ರಸ್ವರೂಪದ ಹೋರಾಟ ನಡೆಸಲಾಗುವುದು ಎಂದು ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪಾ ಪಾಟೀಲ್ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಗುಂಡರೆಡ್ಡಿ ಗುಡಾಡಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿ.ಬಿರಾದಾರ್, ಶಿಲ್ಪಾ ಪಾಟೀಲ್. ಪ್ಯಾರುಸಾಬ್ ಎಂ.ಷೇಕ್ ಮುಂತಾದವರು ಭಾಗವಹಿಸಿದರು.