371(ಜೆ) ಅನುಚ್ಛೇದಕ್ಕೆ ಯಾರಾದರೂ ಕೈ ಹಚ್ಚಿದರೆ
ಬೀದರ :-ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೀಡಿದ ಕರೆಯ ಮೇರೆಗೆ ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಸ್ಥೆಗಳ ಪ್ರಮುಖರು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿ 371(ಜೆ) ಗೆ ಧಕ್ಕೆ ಬಂದರೆ ಸುಮ್ನನಿರಲ್ಲ ಎಂಬ ಸಂದೇಶ ರವಾನಿಸಲಾಯಿತು.
ಸಮಿತಿಯ ಜಿಲ್ಲಾಧ್ಯಕ್ಷ ಡಾ. ರಜನೀಶ ವಾಲಿ ಮಾತನಾಡಿ, ಹಸಿರು ಪ್ರತಿμÁ್ಠನ ಸಂಘಟನೆಗೆ ಹೊಟ್ಟೆ ಕಿಚ್ಚಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರದ 5 ಸಾವಿರ ಕೋಟಿ ರು. ಅನುದಾನದಲ್ಲಿ ಶೇ. 25ರಷ್ಟು ಅನುದಾನ ಶಿಕ್ಷಣಕ್ಕೆ ನೀಡಲಾಗುತ್ತಿದೆ ಇದು ಈಭಾಗದ ಶೈಕ್ಷಣಿಕ ಪ್ರಗತಿಗೆ ಅತ್ಯುತ್ತಮ ಹೆಜ್ಜೆ ಇದರಿಂದ ಹೊರಗಿನ ಕೆಲವರಿಗೆ ಸಂಕಟವಾಗುತ್ತಿದೆ, 371(ಜೆ) ಅನುಚ್ಛೇದಕ್ಕೆ ಯಾರಾದರೂ ಕೈ ಹಚ್ಚಿದರೆ ಈ ಭಾಗದ ಬೀದರ್ ಸೇರಿದಂತೆ ಎಲ್ಲ ಜಿಲ್ಲೆಗಳನ್ನು ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಮಿತಿಯ ಮುಖ್ಯ ಸಂಯೋಜಕ ಸುರೇಶ ಚನ್ನಶೆಟ್ಟಿ ಮಾತನಾಡಿ, ಇಂದಿನ ಹೋರಾಟ ಕೇವಲ ಟ್ರೈಲರ್ ಇದ್ದಂತೆ ಕಲ್ಯಾಣ ಕರ್ನಾಟಕದ ತಂಟೆಗೆ ಬಂದರೆ ರಕ್ತಕ್ರಾಂತಿ ಆಗುತ್ತದೆ ಎಂದು ಎಚ್ಚರಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ ಅವರು ಮಾತನಾಡಿ, ನಮ್ಮಲ್ಲಿನ ಸಂಸ್ಕøತಿಗೆ ಕೆಲವರು ಧಕ್ಕೆ ತರುವ ಕೆಲಸಕ್ಕೆ ಕೈ ಹಾಕಿದ್ದಾರೆ ನಮಗೆ ಈ ಹಕ್ಕು ಸಂವಿಧಾನದಡಿಯಲ್ಲಿ ಸಿಕ್ಕಿದೆ ಹೀಗಾಗಿ ಇದನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಹೋರಾಟಕ್ಕೆ ಸಿದ್ದರಿದ್ದೇವೆ ಎಂದರು.
ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, 371(ಜೆ) ಎಂಬುವದು ಕಲಬುರಗಿ, ಬೆಂಗಳೂರಿನಲ್ಲಿ ಕುಳಿತು ಜಾರಿಗೆ ತಂದಿದ್ದಲ್ಲ ಇದು ದೇಶದ ಲೋಕಸಭೆಯಲ್ಲಿ ಜಾರಿಗೆ ಬಂದಿದೆ. ಅನೇಕ ವರ್ಷಗಳ ಹೋರಾಟದ ಫಲವಾಗಿ 10 ವರ್ಷಗಳ ಹಿಂದೆ ಅನುಚ್ಛೇದ ನಮಗೆ ಸಿಕ್ಕಿದೆ. ಕೆಲವರು ವಿಷ ಬೀಜ ಬಿತ್ತುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮುಖ್ಯಮಂತ್ರಿಗಳು ಈ ಕಡೆ ಗಮನಹರಿಸಿ ಹಸಿರು ಪ್ರತಿμÁ್ಠನ ಎಂಬುವದನ್ನು ನಿμÉೀಧಿಸಬೇಕೆಂದು ಆಗ್ರಹಿಸಿದರು.
ಜ್ಞಾನಸುಧಾ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್, ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿದರು. ನಂತರ ಮುಖ್ಯಮಂತ್ರಿಗೆ ಹಾಗೂ ರಾಜ್ಯಪಾಲರಿಗೆ ಬರೆದ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೌರಾಡಳಿತ ಸಚಿವರು ಸಮಿತಿಯ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು, ಎಂಎಲ್ಸಿ ಶಶೀಲ್ ನಮೋಶಿ, ಚನ್ನಬಸವಾನಂದ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಸಿದ್ದರಾಮ ಶರಣ ಬೆಲ್ದಾಳ, ಭಾತಂಬ್ರಾದ ಶಿವಯೋಗೇಶ್ವರ ಸ್ವಾಮಿ, ಡಾ. ಗಂಗಾಂಬಿಕೆ ಅಕ್ಕ, ಆರ್ಕೆ ಹುಡಗಿ, ಬಸವರಾಜ ದೇಶಮುಖ, ಬಸವರಾಜ ಧನ್ನೂರ್, ಸರದಾರ ಬಲಬೀರಸಿಂಗ್, ಕರ್ನಲ್ ಶರಣಪ್ಪ ಸಿಕೇನ್ಪೂರ್ ಅಸಿಫೆÇೀದ್ದಿನ್, ನಿಜಾಮೋದ್ದಿನ್, ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪ ಪಾಟೀಲ್, ಮಾರುತಿ ಬೌದ್ಧೆ, ಶಿವಶರಣಪ್ಪ ವಾಲಿ, ಶಿವಶಂಕರ ಟೋಕರೆ, ಶಶಿಧರ ಹೊಸಳ್ಳಿ, ರಾಜು ಮಣಗೇರಿ, ಅನೀಲಕುಮಾರ ಬೆಲ್ದಾರ್, ರೇವಣಸಿದ್ದಪ್ಪ ಜಲಾದೆ, ಬಾಬು ವಾಲಿ, ವಿನಯ ಮಾಳಗೆ, ಬಾಬುರಾವ್ ದಾನಿ, ಶ್ರೀಕಾಂತ ಸ್ವಾಮಿ, ಭಾರತಿ ವಸ್ತ್ರದ, ಪಂಡಿತ ಚಿದ್ರಿ, ಬಿ.ಜಿ ಶೆಟಕಾರ, ಮುನೇಶ್ವರ ಲಾಖಾ, ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.