ಕಲಬುರಗಿ

ನಾಗರಾಳಜಲಾಶಯ ಭರ್ತಿ ಅಂಚಿಗೆ ತಲುಪಿದ್ದು ನದಿಗೆ ಇಳಿಯುವ ಮೊದಲು ಎಚ್ಚರಿಕೆ: ವಿನಾಯಕ ಚವ್ಹಾಣ

ಚಿಂಚೋಳಿ:ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳಜಲಾಶಯ ಭರ್ತಿ ಅಂಚಿಗೆ ತಲುಪಿದ್ದು,ಜಲಾಶಯಕ್ಕೆ 1,500 ಕ್ಯುಸೆಕ್‌ ಒಳಹರಿವಿದೆ.ಜಲಾಶಯದ ಗರಿಷ್ಠ ಮಟ್ಟ ಸಮುದ್ರಸದ್ಯ ಜಲಾಶಯದ ನೀರಿನ ಮಟ್ಟ 490 ಮೀಟರ್ ತಲುಪಿದೆ. ಮುಂಗಾರುಹಂಗಾಮಿನಲ್ಲಿ ಉತ್ತಮಮಳೆಯಾಗಿದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಈಗಿರುವ ಒಳಹರಿವು ಮುಂದುವರಿದರೆ ಶನಿವಾರಸಂಜೆಗೆ ಜಲಾಶಯ ಸಂಪೂರ್ಣಭರ್ತಿಯಾಗುವ ಸಾಧ್ಯತೆಯಿದೆ.ಮಳೆಗಾಲ ಪೂರ್ವದಲ್ಲಿ ಜಲಾಶಯದನೀರಿನಮಟ್ಟ 488 ಮೀಟರ್ ತಲುಪಿತ್ತು.ವಿನಾಯಕ ಚವ್ಹಾಣ ತಿಳಿಸಿದ್ದಾರೆ.ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನೀರು ನದಿಗೆಬಿಡಬಹುದಾಗಿದೆ. ಹೀಗಾಗಿ ಮಹಿಳೆಯರು ಬಟ್ಟೆ ತೊಳೆಯಲು,ಕೃಷಿಕರು ನದಿ ದಾಟುವಾಗ ಮತ್ತುಮೀನುಗಾರರು ಮೀನು ಹಿಡಿಯಲು ನದಿಗೆ ಇಳಿಯುವ ಮೊದಲು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.ಗುರುವಾರ ರಾತ್ರಿ ಚಿಂಚೋಳಿ 105 ಕುಂಚಾವರಂ 70, ಚಿಮ್ಮನಚೋಡ 64,ಐನಾಪುರ 56, ಸುಲೇಪೇಟದಲ್ಲಿ 38
ಮಿ.ಮೀ. ಮಳೆಯಾಗಿದೆ. ಮಳೆಯಿಂದ ನದಿ ನಾಲೆ, ತೊರೆಗಳು ಜೀವ ಪಡೆದಿವೆ.ಮಳೆಯಿಂದ ಚಿಂಚೋಳಿಯಚಂದಾಪುರದ ವಾಣಿಜ್ಯ ಮಳಿಗೆಗಳಲ್ಲಿ ಮತ್ತು ಆಶ್ರಯ ಬಡಾವಣೆಯಕೆಲ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿವೆ.ನದಿ ಪಾತ್ರದ ಜನರಿಗೆ ಎಚ್ಚರಿಕೆ:ನಾಗರಾಳ ಜಲಾಶಯ ನದಿ ಪಾತ್ರದ ಜನರಿಗೆ ಎಚ್ಚರಿಕೆ:ನಾಗರಾಳ ಜಲಾಶಯ ಭರ್ತಿಯಾಗುತ್ತಿರುವುದರಿಂದ ನದಿಪಾತ್ರದ ಹಳ್ಳಿಗಳು ಮತ್ತು ಚಿಂಚೋಳಿಚಂದಾಪುರ ಅವಳಿ ಪಟ್ಟಣಗಳ ಜನರುಎಚ್ಚರದಿಂದಿರಬೇಕೆಂದು ಯೋಜನಾಧಿಕಾರಿ ತ್ರಿಲೋಚನ ಜಾಧವಮತ್ತು ಸಹಾಯಕ ಎಂಜಿನಿಯ‌ವಿನಾಯಕ ಚವ್ಹಾಣ ತಿಳಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!