3 ಹೊಸ ಎಫ್.ಎಮ್. ಚಾನೇಲ್‍ಗಳು ಮಂಜೂರಿ: ಭಗವಂತ ಖೂಬಾ
ಕೇಂದ್ರ ಸಚಿವ ಸಂಪುಟದಲ್ಲಿ ಬೀದರ ಜಿಲ್ಲೆಯ ಎಫ್.ಎಮ್. ಕೇಂದ್ರದಲ್ಲಿ 3 ಹೊಸ ಚಾನೇಲ್‍ಗಳು ಪ್ರಾರಂಭಿಸಲು ಸಚಿವ ಸಂಪುಟ ಅನುಮತಿ ನೀಡಿರುತ್ತದೆ, ಇದರಿಂದ ನಮ್ಮ ಭಾಗದ ಕಲೆ ಸಂಸ್ಕøತಿ ಮತ್ತು ಕಲಾವಿದರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಸುಮಾರು ವರ್ಷಗಳ ಬೇಡಿಕೆಯಾಗಿದ್ದ, ಎಫ್.ಎಮ್. ಕೇಂದ್ರವು ಬೀದರನಲ್ಲಿ ಪ್ರಾರಂಭಿಸುವ ಉದ್ದೇಶದಿಂದ ಸಾಕಷ್ಟು ಪರಿಶ್ರಮ ಹಾಕಿದ್ದೆ, ಅದರ ಫಲವಾಗಿ ಕಳೆದ ಜನೇವರಿ 19 ರಂದು ಬೀದರ ನಗರದಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರಿಂದ ವರ್ಚುವಲ್ ಮೂಲಕ ಉದ್ಘಾಟಿಸಿದ್ದೆ, ಮುಂದಿನ ದಿನಗಳಲ್ಲಿ ಖಾಸಗಿ ಎಫ್.ಎಮ್. ಕೇಂದ್ರಗಳು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದೆ, ಉದ್ಘಾಟನೆಗೂ ಮುನ್ನವೆ ಬೀದರನಿಂದಲೇ ಎಫ್.ಎಮ್. ಕೇಂದ್ರಗಳು ನಾನು ದೂರಸಂಪರ್ಕ ಸಚಿವರಿಗೆ ಮನವಿ ಮಾಡಿಕೊಂಡಿದ್ದೆ, ಆದರೆ ಸ್ವಲ್ಪ ಸಮಯ ಕೊಡಿ, ಎಫ್.ಎಮ್. ಕೇಂದ್ರ ಪ್ರಾರಂಭವಾದ ಮೇಲೆ ಚಾನೇಲ್‍ಗಳು ನೀಡುತ್ತೇವೆ ಎಂದಿದ್ದರು.
ಕಳೆದ ಎರಡ್ಮೂರು ವರ್ಷಗಳಿಂದ ಹಲವಾರು ಬೇಡಿಕೆಗಳು ಜಿಲ್ಲೆಯ ಅಭಿವೃದ್ದಿಗಾಗಿ ನಮ್ಮ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ಸಚಿವರುಗಳಿಗೆ ಮನವಿ ಸಲ್ಲಿಸಿದ್ದೆ, ಆ ಎಲ್ಲಾ ಮನವಿಗಳೆ ಇಂದಿಗೂ ಮುಂದಿನ ದಿನಗಳಲ್ಲಿಯೂ ಮಂಜೂರಾತಿಗೊಳ್ಳುತ್ತವೆ, ಕಾರಣ ನಮ್ಮ ಸರ್ಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಮಾರ್ಗದಲ್ಲಿ ನಡೆಯುವ ಸರ್ಕಾರವಾಗಿದೆ, ಅಭಿವೃದ್ದಿ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ.
ಅದರಂತೆ ಇವಾಗ ಬೀದರ ನಿಂದ 3 ಹೊಸ ಚಾನೇಲ್‍ಗಳ ಪ್ರಾರಂಭ, ರಾಜ್ಯದಲ್ಲಿ ಒಟ್ಟು 42 ಮತ್ತು ದೇಶದಲ್ಲಿ 730 ಚಾನೇಲ್‍ಗಳ ಪ್ರಾರಂಭಕ್ಕೆ ಇ-ಆಕ್ಷನ್ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ, ಇದರಲ್ಲಿ ನಮ್ಮ ಬೀದರ ಕೂಡ ಸೇರಿರುವುದು ಅತ್ಯಂತ ಸಂತೋಷದಾಯಕವಾದ ವಿಷಯವಾಗಿದೆ, ಆದ್ದರಿಂದ ಎಲ್ಲಾ ಜನರ ಪರವಾಗಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರಿಗೆ ಹಾಗೂ ಮಾಹಿತಿ, ತಂತ್ರಜ್ಞಾನ ಮತ್ತು ಪ್ರಸರಣ ಸಚಿವರಾದ ಶ್ರೀ ಅಶ್ವಿನಿ ವೈಷ್ಣವರವರಿಗೆ ಧನ್ಯವಾದಗಳು ತಿಳಿಸಿದ್ದಾರೆ.