ವಿಶ್ವದಲ್ಲೆ ಅತಿ ಹೆಚ್ಚಿನ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷ : ಕೇಂದ್ರ ಸಚಿವ ಭಗವಂತ ಖೂಬಾ
ಹೊಸ ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆ ಮೂಲಕ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುವ ಪ್ರಕ್ರಿಯೆ ಕುರಿತು, ಬೀದರ ಬಿಜೆಪಿ ಜಿಲ್ಲಾ ಕಚೆರಿಯಲ್ಲಿ ಆಯೋಜಿಸಲಾದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ವಿಶ್ವದಲ್ಲೆ ಅತಿ ಹೆಚ್ಚಿನ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷ ನಮ್ಮ ಭಾರತೀಯ ಜನತಾ ಪಕ್ಷವಾಗಿದೆ ಹಾಗೂ ಕಾರ್ಯಕರ್ತರಿಗಾಗಿ ಇರುವ ಪಕ್ಷವು ನಮ್ಮದಾಗಿದೆ ಪ್ರತಿ ಪಾದಿಸಿದರು.
ದೇಶ ಮೊದಲು, ಪಕ್ಷ ನಂತರ, ಆಮೇಲೆ ನಾನು ಎನ್ನುವ ಉದ್ದೇಶದಿಂದ ನಮ್ಮ ಪಕ್ಷ ಉದಯವಾಗಿದೆ ಹಾಗೂ ದೇಶವನ್ನು ಬಲಿಷ್ಠ ಮಾಡುವ ನಿಟ್ಟಿನಲ್ಲಿ ಪಕ್ಷ ನಿತ್ಯ ನಿರಂತರವಾಗಿ ಕೆಲಸ ಮಾಡುತ್ತದೆ, ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ಹಬ್ಬದ ರೂಪದಲ್ಲಿ ನಮ್ಮ ಪಕ್ಷ ಕಾರ್ಯನಿರ್ವಹಿಸುತ್ತದೆ. ಚುನಾವಣೆ ಪೂರ್ವದಲ್ಲಿ ಮತದಾರರ ನೊಂದಣಿ, ಅದರಲ್ಲಿ ವಿಶೇಷವಾಗಿ 18 ವಯಸ್ಸಿನ ಹೊಸ ಮತದಾರರ ನೊಂದಣಿ ಮಾಡುವುದು ಬಹಳ ಅವಶ್ಯಕವಾಗಿದೆ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಈ ಹೊಸಬರನ್ನು ಸೇರಿಸುವ ಸಲುವಾಗಿ ನೋಂದಣಿ ಪ್ರಕ್ರೀಯೆ ಪ್ರಾರಂಭಿಸಲಾಗಿದೆ.
2024ರ ಚುನಾವಣೆಗಾಗಿ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ, 2014 ರಿಂದ 2024ರವರೆಗೆ ಸುಮಾರು 25 ಕೊಟಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ, ಈ ಪ್ರಕ್ರಿಯೆ ವರ್ಷವು ಸಹ ಮುಂದುವರೆಯಲಿದೆ, ಆದ್ದರಿಂದ ಪಕ್ಷದ ಆದೇಶದಂತೆ ಬೀದರ ಲೋಕಸಭಾ ಕ್ಷೇತ್ರದ ಪ್ರತಿ ಬೂತಗಳಲ್ಲಿ ನಮ್ಮ ಕಾರ್ಯಕರ್ತರು, ಹೊಸ ಮತದಾರರನ್ನು ಫಾರಂ ನಂ. 6ರ ಮೂಲಕ ಸೆರ್ಪಡೆಗೋಳಿಸಬೇಕು, ಮತದಾರರ ಪಟ್ಟಿಯಲ್ಲಿ ಹೆಸರು ಡಬಲ್ ಆಗಿದ್ದರೆ ಫಾರಂ ನಂ. 7ರ ಮೂಲಕ ರದ್ದುಗೊಳಿಸಬೇಕು ಮತ್ತು ವಿಳಾಸ ಬದಲಾವಣೆಯಾಗಿದ್ದರೆ ಫಾರಂ ನಂ.8 ಮುಖಾಂತರ ತನ್ನ ವಿಳಾಸ ಬದಲಾಯಿಸಿಕೊಳ್ಳಬೇಕು.
ಜಿಲ್ಲಾಸ್ಥರದಲ್ಲಿ 3 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ, ಇದರಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಎಮ್.ಎಲ್.ಸಿ.ಗಳಾಗಿರುವ ಶ್ರೀ ರಘುನಾಥರಾವ ಮಲ್ಕಾಪೂರೆ, ಹಾಗೂ ಮುಖಂಡರಾದ ಶ್ರೀ ಬಾಬುರಾವ ಕಾರಬಾರಿಯವರನ್ನು ನೇಮಕ ಮಾಡಲಾಗಿದೆ, ವಿಧಾನಸಭಾವಾರು ಸಹ ಸಮಿತಿ ಮಾಡಲಾಗಿದ್ದು, ಬಸವಕಲ್ಯಾಣದಲ್ಲಿ ಶಾಸಕರಾದ ಶರಣು ಸಲಗಾರ, ಮಂಡಲ ಅಧ್ಯಕ್ಷರುಗಳಾದ ಅಶೋಕ ವಕಾರೆ, ಅರವಿಂದ ಮುತ್ಯಾ, ಹುಮನಾಬಾದನಲ್ಲಿ ಶಾಸಕರಾದ ಡಾ. ಸಿದ್ದು ಪಾಟೀಲ್, ನಗರ ಮಂಡಲ ಅಧ್ಯಕ್ಷರಾದ ಪ್ರಭಾಕರ ನಾಗರಾಳೆ, ಜಿಲ್ಲಾ ಎಸ್.ಸಿ. ಮೊರ್ಚಾ ಅಧ್ಯಕ್ಷರಾದ ಗಜೇಂದ್ರ ಕನಕಟಕರ್, ಬೀದರ ದಕ್ಷಿಣದಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಮಂಡಲ ಅಧ್ಯಕ್ಷರಾದ ರಾಜರೆಡ್ಡಿ ಶಾಬಾದ, ಜಿಲ್ಲಾ ಕಾರ್ಯದರ್ಶಿಗಳಾದ ಜಗನ್ನಾಥ ಪಾಟಿಲ್, ಬೀದರ ನಗರದಲ್ಲಿ ಕಲಬುರಗಿ ವಿಭಾಗದ ಸಹ ಸಂಘಟನಾ ಕಾರ್ಯದರ್ಶಿ ಈಶ್ವರ ಸಿಂಗ್ ಠಾಕೂರ್, ನಗರ ಅಧ್ಯಕ್ಷ ಶಸಿ ಹೊಸಳ್ಳಿ, ಗ್ರಾಮಾಂತರ ಅಧ್ಯಕ್ಷ ರಾಜೇಂದ್ರ ಪೂಜಾರಿ, ಭಾಲ್ಕಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕರಾದ ಶ್ರೀ ಪ್ರಕಾಶ ಖಂಡ್ರೆ, ಮಂಡಲ ಅಧ್ಯಕ್ಷರಾದ ಶ್ರೀ ಪಂಡಿತ ಶೀರೋಳೆ, ಜಿಲ್ಲಾ ಕಾರ್ಯದರ್ಶಿ ಸುರೇಶ ಬಿರಾದರ, ಔರಾದ ತಾಲೂಕಿಗೆ ಶಾಸಕರಾದ ಶ್ರೀ ಪ್ರಭು ಚೌಹಾಣ, ಮಂಡಲ ಅಧ್ಯಕ್ಷರಾದ ರಾಮಶೇಟ್ಟಿ ಪನ್ನಾಳೆ, ಜಿಲ್ಲಾ ಕಾರ್ಯದರ್ಶಿಗಳಾದ ಕಿರಣ ಪಾಟೀಲ್ ಅವರನ್ನು ನೇಮಿಸಲಾಗಿದೆ.
ಈ ರೀತಿಯಾಗಿ ಮಂಡಲದ ಪ್ರಭಾರಿಗಳನ್ನಾಗಿ, ಪ್ರಮುಖರನ್ನಾಗಿ ನೇಮಕ ಜಿಲ್ಲಾಧ್ಯಕ್ಷರಾದ ಶ್ರೀ ಶಿವಾನಂದ ಮಂಠಾಳಕರ್ ಅವರು ನೇಮಿಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದರು.
ನಮ್ಮ ಎಲ್ಲಾ ಪ್ರಭಾರಿಗಳು, ಪ್ರಮುಖರು ಹೊಸ ಸೆರ್ಪಡೆ, ಹೆಸರು ತೆಗೆಸುವುದು, ವಿಳಾಸ ಬದಲಾಯಿಸುವುದು ಅವರ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳಲ್ಲಿ ತಂಡವನ್ನು ರಚಿಸಿಕೊಂಡು ಮಾಹಿತಿಗಳನ್ನು ಪಡೆದುಕೊಂಡು, ಸರ್ಕಾರದ ಬಿ.ಎಲ್.ಒಗಳ ಜೊತೆ ಸಂಪರ್ಕದಲ್ಲಿದ್ದು, ಈ ಕಾರ್ಯವನ್ನು ಮುಂದುವರೆಸಿಕೊಂಡು ಹೊಗುತ್ತಾರೆ, ನಮ್ಮ ಕಾರ್ಯಕರ್ತರು, ಪಕ್ಷವು ವಹಿಸಿರುವ ಈ ಜವಬ್ದಾರಿಯನ್ನು ಹುಮ್ಮಸ್ಸಿನಿಂದ, ಉತ್ಸಾಹದಿಂದ ಮಾಡುತ್ತಾರೆ ಎಂದು ಸಚಿವ ಭಗವಂತ ಖೂಬಾ ಹಾಗೂ ಎಲ್ಲಾ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಶಿವಾನಂದ ಮಂಠಾಳಕರ್, ಶಾಸಕರಾದ ಡಾ. ಸಿದ್ದು ಪಾಟೀಲ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕುಂಬಾರ, ಅರಿಹಂತ ಸಾವಳೆ, ಮಂಡಲ ಅಧ್ಯಕ್ಷರಾದ ಶಶಿ ಹೊಸಳ್ಳಿ, ರಾಜೇಂದ್ರ ಪೂಜಾರಿ, ಮುಖಂಡರಾದ ಬಾಬುರಾವ ಕಾರಬಾರಿ, ಶ್ರೀನಿವಾಸ ಚೌಧರಿ, ರಾಜು ಪಾಟೀಲ್ ನೇಮತಾಬಾದ ಇತರರು ಉಪಸ್ಥಿತರಿದ್ದರು.