24ರಂದು ರೋಟ್ರಿ ಕಲ್ಯಾಣ ಜೋನ್ನಿಂದ ವೃಕ್ಷೋಥಾನ ಕಾರ್ಯಕ್ರಮ: ಧನ್ನೂರ್
ಬೀದರ್: ಈ ತಿಂಗಳ 24 ಹಾಗೂ 25ರಂದು ರೋಟ್ರಿ ಕಲ್ಯಾಣ ಜೋನ್ ವತಿಯಿಂದ ವೃಕ್ಸೋಥಾನ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಗಳು ಜರುಗಲಿವೆ ಎಂದು ವೃಕ್ಸೋಥಾನ ಕಾರ್ಯಕ್ರಮದ ಅಧ್ಯಕ್ಷರಾದ ಬಸವರಾಜ ಧನ್ನೂರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 24ರಂದು ಬೆಳಿಗ್ಗೆ 7 ಗಂಟೆಗೆ ನಗರದ ಬರೀದ್ ಶಾಹಿ ಉದ್ಯಾನವನದ ಮುಂಭಾಗದ ವಾಕಿಂಗ್ ಪಾಯಿಂಟ್ನಿಂದ ರೋಟ್ರಿ ಸರ್ಕಲ್ ವರೆಗೆ ಪರಿಸರ ಜಾಗೃತಿ ಕುರಿತು ವಸ್ತು ಪ್ರದರ್ಶನ ಹಮ್ಮಿಕೊಳ್ಲಲಾಗಿದೆ. ಅದರಲ್ಲಿ ಜೀವಂತ ಮರವೊಂದನ್ನು ಇರಿಸಿ ಅದರ ಮಹತ್ವ ಕುರಿತು ಬೀದಿ ನಾಟಕದ ಮುಖೇನ ಜಾಗೃತಿ ಮೂಡಿಸಲಾಗುವುದು. ಹಾಗೇ ಸಾರ್ವಜನಿಕರಿಗೆ 1 ಸಾವಿರ ಸಸಿಗಳನ್ನು ವಿತರಿಸಲಾಗುವುದು. ರಾಜ್ಯದ ಅರಣ್ಯ ಮತ್ತು ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಸಚಿವರು ಜೊತೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹಿಮ್ ಖಾನ್, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬೂಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರ ಸಭೆ ಅಧ್ಯಕ್ಷ ಗೌಸೋದ್ದಿನ್, ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಡಾ.ಬಲಬೇರ ಸಿಂಗ್, ಡಾ.ಅಬ್ದುಲ್ ಖದೀರ್, ಡಾ.ರಜನೀಶ ವಾಲಿ, ಪೋರ್ಣಿಮಾ ಜಾರ್ಜ್, ಗುರುಬಸವ ಪಟ್ಟದ್ದೇವರು ಸೇರಿದಂತೆ ಇತರರು ಭಾಗವಹಿಸುವರು ಎಂದು ಹೇಳಿದರು.
ಈಲ್ಲೆಯಲ್ಲಿ ರೋಟ್ರಿ ಕ್ಲಬ್ ಮೇನ್, ರೋಟ್ರಿ ಕ್ಲಬ್ ಫೋರ್ಟ್, ರೋಟ್ರಿ ಕ್ಲಬ್ ಬೀದರ್ ನ್ಯು ಸೆಂಚ್ಯುರಿ, ರೋಟ್ರಿ ಕ್ಲಬ್ ಸಿಲ್ವರ್ ಸ್ಟಾರ್, ರೋಟ್ರಿ ಕ್ಲಬ್ ಕ್ವಿನ್, ಇನ್ನರ್ ವಿಲ್ ಕ್ಲಬ್ ಸೇರಿದಂತೆ ಬೀದರ್ನಲ್ಲಿ 6, ಭಾಲ್ಕಿಯಲ್ಲಿ 2, ಬಸವಕಲ್ಯಾಣ ಹಾಗೂ ಹುಮನಾಬಾದ್ನಲ್ಲಿ ತಲಾ ಒಂದು ಸೇರಿದಂತೆ ಒಟ್ಟು 9 ರೋಟ್ರಿ ಕ್ಲಬ್ಗಳಿವೆ. ಈ ಎಲ್ಲ ರೋಟ್ರಿ ಕ್ಲಬ್ಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿ ಜಿಲ್ಲೆಯ ಅಭಿವೃದ್ಧಿಗೂ ಕೈ ಜೋಡಿಸಿವೆ ಎಂದರು.
ರೋಟ್ರಿ ಕ್ಲಬ್ ಸಿಲ್ವರ್ ಸ್ಟಾರ್ ಉಪಾಧ್ಯಕ್ಷ ಆಧೀಶ ವಾಲಿ ಮಾತನಾಡಿ, ಅಂದು ನಡೆಯಲಿರುವ ಈ ವೃಕ್ಯೋಥಾನzಲ್ಲಿ ಸಸಿಗಳು ಪಡೆಯುವ ಸಾರ್ವಜನಿಕರು ತಮ್ಮ ಮನೆಯಲ್ಲಿ, ಜಮಿನಿನಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಲಲ್ಲಿ ಸಸಿ ನೆಟ್ಟು ಬೀz್ಪರ್ #ಖಔಖಿಂಖಙಃIಆಂಖಗಿಖUಏSಊಂಖಿಊಔಓ ಹ್ಯಾಶ್ ಟ್ಯಾಗ್ಗೆ ಫೋಟೊ ಅಪಲೋಡ್ ಮಾಡಿದಲ್ಲಿ ಅದನ್ನು ಸ್ಪರ್ಧೆಯಾಗಿ ಗುರುತಿಸಿ ಮೂರು ಜನರಿಗೆ ಬಹುಮಾನ ವಿತರಿಸಲಾಗುವುದು. ಈ ಹಿಂದೆ ಪೆಂಟಿಂಗ್ ಸ್ಪರ್ಧೆ ಎರ್ಪಡಿಸಲಾಗಿದ್ದು, ಅದರ ಬಹುಮಾನ ಸಹ ಇದೇ ವೇಳೆ ನೀಡಲ;ಆಗುವುದೆಂದು ಹೇಳಿದರು.
ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಮಾತನಾಡಿ, ಈ ತಿಂಗಳ 25ರಂದು ಲಾವಣ್ಯ ಫಂಕ್ಷನ್ ಹಾಲ್ನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, ಜಿಲ್ಲೆಯ ಸಾರ್ವಜನಿಕರು, ರೋಟ್ರಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಎರಡು ಕಾರ್ಯಕ್ರಮಗಳು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ನಾಗರಾಜ ಕರ್ಪೂರ್ ಹಾಗೂ ಡಾ.ರಘು ಕೃಷ್ಣಮೂರ್ತಿ ಮಾತನಾಡಿದರು. ಸೆಮಿನಾರ್ ಸೆಕ್ರೆಟರಿ ಡಾ.ಕಪಿಲ ಪಾಟೀಲ, ರೋಟ್ರಿ ಕ್ಲಬ್ ಮೇನ್ ಅಧ್ಯಕ್ಷ ಸೋಮಶೇಖರ ಪಾಟೀಲ, ಕಾರ್ಯದರ್ಶಿ ಕೃಪಾಶಿಂಧು ಪಟೀಲ, ರೋಟ್ರಿ ಕ್ಲಬ್ ಪೋರ್ಟ್ ಅಧ್ಯಕ್ಷ ಗುಂಡಪ್ಪ ಗೋಧೆ, ಕಾರ್ಯದರ್ಶಿ ವಿಶಾಲ ಕಟ್ಟಿಮನಿ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.