24ರಂದು ಅಹಿಲ್ಯಾಬಾಯಿ ಹೋಳ್ಕರ್‌ರ ತ್ರಿ ಶತಾಬ್ದಿ ಕಾರ್ಯಕ್ರಮ: ಸೋಮನಾಥ ಪಾಟೀಲ
ಬೀದರ್: ಈ ತಿಂಗಳ 31ರಂದು ಭಾರತಾದ್ಯಂತ ಹಿಂದು ದೇವಾಲಯಗಳನ್ನು ನಿರ್ಮಿಸಿ, ಅವನ್ನು ಸಂರಕ್ಷಿಸಿದ ಜಗನ್ಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ ತ್ರಿ ಶತಾಬ್ದಿ(೩೦೦ನೇ ಜಯಂತ್ತೋತ್ಸವ) ಆಚರಿಸಲಾಗುತ್ತಿದ್ದು, ಈ ತಿಂಗಳ 24ರಂದು ಬಸವಕಲ್ಯಾಣದಲ್ಲಿ ಪಕ್ಷದ ವತಿಯಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹೇಳಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಜಿಲ್ಲೆಯ ಬಸವಕಲ್ಯಾಣ ನಗರದ ಸಸ್ತಾಪುರ ಬಂಗ್ಲಾ ಬಳಿ ಇರುವ ಶಿವಸೃಷ್ಟಿ ಪ್ರದೇಶದಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಗೆ ಈ ಕಾರ್ಯಕ್ರಮ ಜರುಗಲಿದೆ. ಕುಷ್ಟಗಿ ಶಾಸಕರು ಹಾಗೂ ವಿಧಾನ ಸಭೆಯ ಸಚೇತಕರಾದ ದೊಡ್ಡಣ್ಣಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಅದಕ್ಕೂ ಮುನ್ನ ಅಲ್ಲಿಯ ಕೋಟೆ ಅವರಣದಿಂದ ಶಿವಾಜಿ ಪಾರ್ಕ್ ವರೆಗೆ ಬೆಳಿಗ್ಗೆ ೮ ಗಂಟೆಯಿAದ ೧೦ ಗಂಟೆ ವರೆಗೆ ತಿರಂಗಾ ಯಾತ್ರೆ ಜರುಗಲಿದೆ. ಈ ತಿಂಗಳ ೨೧ರಂದು ಭಾಲ್ಕಿ ಹಾಗೂ ೨೬ರಂದು ಔರಾದ್‌ನಲ್ಲಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಈ ತಿಂಗಳ ೨೮ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಬೀದರ್‌ಗೆ ಆಗಮಿಸುವ ನಿರಿಕ್ಷೆ ಇದ್ದು, ಬೀದರ್‌ನಲ್ಲಿಯೆ ಒನ್ ನೆಶನ್, ವನ್ ಎಲೆಕ್ಷನ್ ಬಗ್ಗೆ ಮಾಹಿತಿ ನೀಡುವರು. ಈ ತಿಂಗಳ ೩೧ರಂದು ಪಕ್ಷದ ಜಿಲ್ಲಾ ಕಚೇರಿಯಲ್ಲೂ ಸಹ ಅಹಿಲ್ಯಾಬಾಯಿ ಹೋಳ್ಕರ್ ಅವರ ತ್ರಿ ಶತಾಬ್ದಿ ಕಾರ್ಯಕ್ರಮ ಜರುಗಲಿದೆ. ಒಟ್ಟಾರೆ ಈ ಮೇಲಿನ ಎಲ್ಲ ಕಾರ್ಯಕ್ರಮಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪಾಟೀಲ ಕರೆ ನೀಡಿದರು.
ಪಕ್ಷದ ರಾಜ್ಯ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಕಾಂಗ್ರೆಸ್‌ನವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಇಂದು ಹೊಸಪೇಟೆಯಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸರ್ಕಾರದ ಬೊಕ್ಕಸ ಖಾಲಿ ಮಾಡಿ, ಕಾರ್ಯಕ್ರಮ ಮಾಡಲು ಮುಂದಾಗಿದ್ದು, ಇದು ಜನ ಸಾಮಾನ್ಯರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕಲು ಹೊರಟಿದ್ದಾರೆ. ಎಲ್ಲ ನಿಗಮಗಳ ಅದರಲ್ಲೂ ಎಸ್.ಇ.ಪಿ, ಟಿ.ಎಸ್.ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿ ಅಭಿವೃದ್ಧಿ ಶುನ್ಯ ಸರ್ಕಾರವನ್ನಾಗಿಸಿದ್ದಾರೆ. ತುಷ್ಟಿ ರಾಜಕಾರಣ ಮಾಡಲು ಪರಿಶಿಷ್ಟರ ಹಣ ಮುಸಲ್ಮಾನರಿಗೆ ನೀಡಲು ಈ ಸರ್ಕಾರ ಮುಂದಾಗಿದೆ. ಕೋಮುವಾದ, ಭ್ರಷ್ಟಾಚಾರ, ದುರಾಡಳಿತ, ಜನವಿರೋಧಿ, ರಾಷ್ಟç ವಿರೋಧಿ ಸರ್ಕಾರವಾಗಿ ಹೊರ ಹೊಮ್ಮಿದೆ. ದಿನನಿತ್ಯದ ವಸ್ತುಗಳು, ಅಗತ್ಯ ಸಾಮಗ್ರಿಗಳ ಬೆಲೆ ಗಗನ ಚುಂಬಿಸುತ್ತಿವೆ, ರಾಜ್ಯದಲ್ಲಿ ಎರಡು ವರ್ಷದಲ್ಲಿ ೫೦೦ ದರೋಡೆ ಹಾಗೂ ೨ ಸಾವಿರ ಹತ್ಯೆ ಇದೇ ಈ ಸರ್ಕಾರದ ದೊಡ್ಡ ಸಾಧನೆ ಎಂದು ಲೇವಡಿ ಮಾಡಿದರು.
ಹುಮನಾಬಾದ್ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ಮಾತನಾಡಿ, ಇಂದು ನಡೆಯುತ್ತಿರುವ ಸಾಧನಾ ಸಮಾವೇಶ ಇದು ಸರ್ಕಾರದ ಸಮಾವೇಶ ಆಗಿರದೆ ರಾಹುಲ ಗಾಂಧಿ ಹಾಗೂ ಪ್ರಿಯಂಕಾ ಗಾಂಧಿಯವರ ಸ್ವಾಗತ ಸಮಾರಂಭ ಆಗಿದೆ. ಸರ್ಕಾರದ ಹಣ ಖರ್ಚು ಮಾಡಿ, ಕಾಂಗ್ರೆಸ್ ಸಮಾವೇಶ ಮಾಡಲು ಈ ಸರ್ಕರ ಹೊರಟಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಶಿಶೀಲ.ಜಿ.ನಮೋಷಿ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿದಿದೆ. ದಕ್ಷಿಣ ಕರ್ನಾಟಕದಲ್ಲಿ ೧೩ ಮಕ್ಕಳಿಗೆ ಒಬ್ಬ ಶಿಕ್ಷಕ ಇದ್ದರೆ ನಮ್ಮ ಭಾಗದಲ್ಲಿ ೩೨ರಿಂದ ೪೦ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಪಠ ಮಾಡುವ ಸ್ಥಿತಿ ಬಂದಿದೆ. ಕೇಂದ್ರ ಸರ್ಕಾರದ ಎನ್.ಇ.ಪಿ ಮಾದರಿ ಕೈಬಿಟ್ಟು ೨೦೦೬ರ ಹಳೆಯ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲಾಗಿದೆ. ೫೦೦೦ ಶಿಕ್ಷಕರ ಹುದ್ದೆ ಖಾಲಿ ಇದ್ದು ಕೂಡಲೇ ಭರ್ತಿ ಮಾಡುವಂತೆ ಕರೆ ಕೊಟ್ಟರು.
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಕುರುಬ ಸಮಾಜದ ಅಪ್ರಾಪ್ತ ಬಾಲಕಿಯನ್ನು ಅಲ್ಲಿಯ ಮುಸ್ಲಿಮ್ ಹುಡುಗ ಅಪಹರಿಸಿಕೊಂಡು ಹೋಗಿದ್ದು, ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಆಪ್ತನ ಕೈವಾಡ ಇದೆ ಎಂಬುದು ಗೊತ್ತಾಗಿದೆ. ಆತನ ಬಂಧನವಾಗಬೇಕು. ಆದರೆ ಸಚಿವರು ನೊಂದ ಕುಟುಂಬಕ್ಕೆ ೨ ಲಕ್ಷ ಪರಿಹಾರ ಕೊಡಿಸುವುದಾಗಿ ಹೇಳಿ ಹಣದ ಆಮಿಷ ಒಡ್ಡಿದ್ದಾರೆ. ಈ ಕುಟುಂಬಕ್ಕೆ ತನ್ನ ಮಗಳು ಮನೆಗೆ ಬರಬೇಕೆ ಹೊರತು ಹಣ ಅಲ್ಲ ಅನ್ನುವುದು ಸಚಿವರಿಗೆ ಏಕೆ ಗೊತ್ತಾಗಲಿಲ್ಲ. ಕೂಡಲೇ ಆ ಅಪ್ರಾಪ್ತ ಬಾಲಕಿಯನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಅವರ ಮನೆಗೆ ಮಟ್ಟಿಸುವ ಜವಾಬ್ದಾರಿ ಸರ್ಕರದ್ದು ಎಂದರು.
ಬಿಜೆಪಿ ಹಿರಿಯ ಮುಖಂಡ ಈಶ್ವರಸಿಂಗ್ ಠಾಕೂರ್, ಮಾಜಿ ಬೂಡಾ ಅಧ್ಯಕ್ಷ ಬಾಬು ವಾಲಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಬಸವರಾಜ ಪವಾರ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.