ಬೀದರ್

2023-24ನೇ ಸಾಲಿನ ಜ್ಞಾನ ವಿಜ್ಞಾನ ಹಾಗೂ ಸಂಸ್ಕøತಿ ಉತ್ಸವ

 ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಬೀದರ ಜಿಲ್ಲೆಯ ಜ್ಞಾನ-ವಿಜ್ಞಾನ ಹಾಗೂ ಸಂಸ್ಕøತಿ ಉತ್ಸವವು ನಗರದ ಸರಸ್ವತಿ ಶಾಲೆಯಲ್ಲಿ ನಡೆದಿದ್ದು, ಬೀದರಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಎನ್. ಅಖಿಲಾಂಡೇಶ್ವರಿ ಅವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳು ಸೃಜನಾತ್ಮಕತೆಯನ್ನು ಬೆಳಸಿಕೊಳ್ಳಬೇಕು. ಇಂದಿನ ಕಾಲಕ್ಕೆ ತಕ್ಕಂತೆ ಜ್ಞಾನಾರ್ಜನೆಯಲ್ಲಿ ತೊಡಗಬೇಕೆಂದು ಹೇಳಿದ ಅವರು ಶಿಕ್ಷಕರು ಕೇವಲ ಪಠ್ಯಪುಸ್ತಕದಲ್ಲಿರುವುದನ್ನೇ ಬೋಧಿಸದೆ ನಾವಿನ್ಯತೆಯನ್ನು ಸೃಷ್ಠಿಸುವರಾಗಬೇಕು ಅಲ್ಲದೆ ಶಿಕ್ಷಕರು ಕೇವಲ ಮಾರ್ಗದರ್ಶಕರಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಅಥಿಗಳಾಗಿ ಆಗಮಿಸಿದ ಇಂಜಿನಿರಿಂಗ್ ಕಾಲೇಜಿನ ಉಪನ್ಯಾಸಕರಾದ ಶ್ರೀ ಗುರುರಾಜ ಸೂರಂಪಳ್ಳಿಯವರು ಮಾತನಾಡುತ್ತ ಇಂದು ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ವಿದ್ಯಾರ್ಜನೆ ಆಗಬೇಕಾಗಿದೆ. ಅದಕ್ಕಾಗಿ ಮಕ್ಕಳು, ಶಿಕ್ಷಕರು ಸಜ್ಜಾಗಬೇಕು ಎಂದು ನುಡಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಶ್ರೀ ಮೈಪಾಲ್‍ರೆಡ್ಡಿಯವರು ಪ್ರಸ್ತಾವಿಕ ನುಡಿಯಲ್ಲಿ ವಿದ್ಯಾಭಾರತೀಯ ಧ್ಯೇಯೋದ್ದೇಶಗಳು ಹಾಗೂ ಪಂಚಮುಖಿ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಘನಾಧ್ಯಕ್ಷತೆಯನ್ನು ವಹಿಸಿದ ವಿದ್ಯಾಭಾರತಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರಾದ ಪ್ರೊ|| ಎಸ್.ಬಿ. ಸಜ್ಜನಶೆಟ್ಟಿ ಅವರು ವಿದ್ಯಾರ್ಥಿಗಳಗೆ ಮಾತೃ ಭಾಷೆಯಲ್ಲಿ ನೀಡುವ ಶಿಕ್ಷಣ ಅಂತರಾಳವನ್ನು ಪ್ರವೇಶಿಸಿ ವಿಷಯ ಮನನವಾಗುತ್ತದೆ ಎಂದು ಹೇಳಿದ ಅವರು ಪ್ರತಿ ವರ್ಷ ವಿದ್ಯಾಭಾರತಿ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕತೆಯನ್ನು ಹೊರ ತೆಗೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದ ನಂತರ ಮಕ್ಕಳು ಮಾಡಿರುವ ವಿವಿಧ ಪ್ರಯೋಗಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತ ಪಡಿಸಿದರು.
ಸಾಯಂಕಾಲ 4:00 ಗಂಟೆಗೆ ಸಮಾರೋಪ ಕಾರ್ಯಕ್ರಮ ಜರುಗಿದ್ದು; ಒಟ್ಟು 410 ಸ್ಪರ್ಧಾಳುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿಜೇತರಾದ ಒಟ್ಟು 180 ಸ್ಪರ್ಧಾಳುಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಡಾ|| ಪ್ರಶಾಂತ ಭೂರೆ ಹಾಗೂ ಶ್ರೀ ಶ್ರೀಕಾಂತ ಕುಲಕರ್ಣಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು ಆಗಮಿಸಿದ್ದು ವಿಶೇಷ. ಇವರಿರ್ವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ಪ್ರದಾನ ಮಾಡಿ ಪ್ರಾಂತ ಮಟ್ಟದ ಸ್ಪರ್ಧೆಗೆ ಶುಭಹಾರೈಸಿದರು.
ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಭಗುಸಿಂಗ ಜಾಧವ ಅವರು ಸ್ವಾಗತವನ್ನು ಕೋರಿದರೆ ಶ್ರೀಯುತ ಶಿವಶರಣಪ್ಪ ಪಾಟೀಲರು ಕಾರ್ಯಕ್ರಮವನ್ನು ನಿರೂಪಿಸಿದರು.

Ghantepatrike kannada daily news Paper

Leave a Reply

error: Content is protected !!