2ನೇ ದಿನ ಜಿ ಆರ್ ವಿಶ್ವನಾಥ್ ಮತ್ತು ಏರಪಲ್ಲಿ ಪ್ರಸನ್ನ ತಂಡಗಳ ಮಧ್ಯೆ ಪಂಧ್ಯ
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ರಾಯಚೂರು ವಲಯ ವತಿಯಿಂದ ಆಯೋಜಿಸಲಾಗಿರುವ ಪಂದ್ಯಾವಳಿ 2ನೇ ದಿನವಾದ ಇಂದು ನಗರದ ನೆಹರು ಸ್ಟೇಡಿಯಂನಲ್ಲಿ ಜಿ ಆರ್ ವಿಶ್ವನಾಥ್ ಮತ್ತು ಏರಪಲ್ಲಿ ಪ್ರಸನ್ನ ತಂಡಗಳ ಮಧ್ಯೆ ಪಂದ್ಯ ನಡೆಯಿತು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿ ಆರ್ ವಿಶ್ವನಾಥ್ ತಂಡ ನಿಗದಿತ 50 ಓವರಗಳಲ್ಲಿ ಕೇವಲ 129 ರನ್ ಗಳಿಸಲವಷ್ಟೇ ಶಕ್ತವಾಯಿತು ಇದರಲ್ಲಿ ಸುನಿಲ್ ಟಿ ಎಸ್ ಮತ್ತು ಆಕಾಶ್ ಬಿ ವೈಯಕ್ತಿಕವಾಗಿ 20 ಹಾಗೂ 21ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟ್ಸ್ಮನ್ಗಳು ಗಮನಾರ್ಹ ಪ್ರದರ್ಶನ ತೋರಲಿಲ್ಲ ತಂಡವು 41.5 ಓವರ್ ಗಳಲ್ಲಿ 129 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಅತ್ತ ಎದುರಾಳಿ ತಂಡದ ಬೌಲರ್ ಗಳಾದ ಓಂಕಾರ್ 4 ವಿಕೆಟ್ ಗಳು ಕಬಳಿಸಿದರೆ ಅವರಿಗೆ ಉತ್ತಮ ಸಾಥ ನೀಡಿದ ಕಾರ್ತಿಕ್ ಎರಡು ವಿಕೆಟ್ ಕಬಳಿಸಿದರು ನಂತರ ಬ್ಯಾಟಿಂಗ ಗೆ ಇಳಿದ ಎರಪಲ್ಲಿ ಪ್ರಸನ್ನ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳಾದ ಶ್ಲೋಕ್ ರಾಗಾ ಮತ್ತು ಬಸವಚೇತನ ತಂಡಕ್ಕೆ ಉತ್ತಮ ಹಾಗೂ ಭರವಸೆಯ ಅಡಿಪಾಯ ಹಾಕಿಕೊಟ್ಟರು ಇವರಿಬ್ಬರು ವಯಕ್ತಿಕವಾಗಿ 33 ರನ್ ಹಾಗೂ 50 ರನ್ ಗಳಿಸಿದರು ಮೊದಲನೇ ವಿಕೆಟ್ ಪತನದ ನಂತರ ಬಂದ ಸೂರಜ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 33 ರನ್ ಗಳಿಸಿದರು ಕೇವಲ 24.3 ಓವರ್ ಗಳಲ್ಲಿ130 ರನ್ ಗಳ ಗುರಿ ತಲುಪಿ ನಗೆ ಬೀರಿದರು ಎದುರಾಳಿ ತಂಡದ ಬೌಲರ್ ಸಮರ್ಥ ಕುಲಕರ್ಣಿ 02 ವಿಕೆಟ್ ಕಬಳಿಸಿದ್ದು ಬಿಟ್ಟರೆ ಬೇರೆಯಾವ ಬೌಲರ್ಗಳು ವಿಕೆಟ್ಗಳು ಕಬಳಿಸುವಲ್ಲಿ ವಿಫಲರಾದರು.ಮಾಣಿಕ್ ನಗರದಲ್ಲಿ ನಡೆದ ಪಂದ್ಯದಲ್ಲಿ ಇಂದು ಬ್ರಿಜೇಶ್ ಪಟೇಲ್ ತಂಡ ಮತ್ತು ಬಿಎಸ್ ಚಂದ್ರಶೇಖರ ತಂಡಗಳ ಮಧ್ಯೆ ಉತ್ತಮ ಪಂದ್ಯ ನಡೆಯಿತು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬ್ರಿಜೇಶ್ ಪಟೇಲ್ ತಂಡ ನಿಗದಿತ ಐವತ್ತು ಓವರ್ ಗಳಲ್ಲಿ 169 ರನ್ ಗಳು ಗಳಿಸಿ ತನ್ನೆಲ್ಲ ವಿಕೆಟ್ಗಳು ಕಳೆದುಕೊಂಡಿತು. ಇದರಲ್ಲಿ ಮಾಧ್ಯಮ ಕ್ರಮಾಂಕ ದಲ್ಲಿ ಆಡಿದ ಆದಿತ್ಯ ರಾಥೋಡ್ 46 ರನ್ ಗಳಿಸಿ ಕೊನೆವರೆಗೂ ಔಟ್ ಆಗದೆ ಉಳಿದರು. ಇವರಿಗೆ ಬೇರೆಯಾವ ಬ್ಯಾಟ್ಸ್ಮನ್ಗಳು ಕೂಡ ಸಾತ್ ನೀಡದೆ ಇರುವುದು ಕೊಂಚ ನಿರಾಸೆ ಮೂಡಿಸಿತು. ಎದುರಾಳಿ ತಂಡದ ಬೌಲರ್ ಗಳಾದ ಶ್ರೇಯಸ್ ಪಾಟೀಲ ಮತ್ತ ಶ್ರೀನಿವಾಸ್ ತಲಾ ನಾಲ್ಕು ವಿಕೆಟ್ ಕಬಳಿಸಿದರು ನಂತರ ಬ್ಯಾಟಿಂಗಗೆ ಇಳಿದ ಬಿಎಸ್ ಚಂದ್ರಶೇಖರ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳಾದ ಸಮರ್ಥ್ ಜೆ ಗಮನಾರ್ಹ ಪ್ರದರ್ಶನ ನೀಡಿ ಔಟ್ ಆಗದೆ 87 ರನ್ ಗಳಿಸಿ ತನ್ನ ತಂಡಕ್ಕೆ ಗೆಲುವಿನ ದಡ ಸೇರಿಸಿದರು ಇವರಿಗೆ ಉತ್ತಮ ಸಾಥ ನೀಡಿದ ರೋಹನ್ ಪವರ್ ಮತ್ತು ಎಂ.ಡಿ ಮೋಹಿಬ್ ತಲಾ 27 ಮತ್ತು 34 ರನ್ ಗಳಿಸಿದರು. ಎದುರಾಳಿ ಬ್ರಿಜೇಶ್ ಪಟೇಲ್ ತಂಡದ ಬೌಲರ್ ಗಳಾದ ಚೇತನ್ ಚೌಹಾಣ್ ಮತ್ತು ಜ ಇವರಿಬ್ಬರೂ ಒಂದೊAದು ವಿಕೆಟ್ ಗಳಿಸಿದರು…
ಬಿದರ್ನಲ್ಲಿ ನಡೆದ ಪಂದ್ಯಕ್ಕೆ ಅತಿಥಿಗಳಾಗಿ ಡಾಕ್ಟರ್ ವಿ ವಿ ನಾಗರಾಜ್ ಬೀದರ್ ನ ಸಂಯೋಜಕರಾದ ಕುಶಾಲ್ ಪಾಟೀಲ್ ಗಾದಗಿ ಹಿರಿಯ ಕ್ರೀಡಾಪಟುಗಳಾದ ಸುನಿಲ್ ಮೊಟ್ಟಿ, ರೋಷನ್ ವರ್ಮಾ. ಮತ್ತು ಮಹೇಶ್ ರಾಗಾ ಸಂಜಯ್ ಜಾಧವ್ ಅನಿಲಕುಮಾರ ದೇಶಮುಖ್. ಎಲ್ಲ ಕ್ರೀಡಾಪಟು ಗಳಿಗೆ ಹುರಿದುಂಬಿಸಿದರು ಉತ್ತಮ ಆಟ ಪ್ರದರ್ಶನ ನೀಡುವಂತೆ ಹೇಳಿದರು. ಅoಪೈರ್ ಗಳಾಗಿ ಬಸವರಾಜ್ ಬಿರಾದಾರ್, ವಸಂತ್ ಕುಲಕರ್ಣಿ ಕಾರ್ಯನಿರ್ವಹಿಸಿದರೆ ಸ್ಕೋರರ್ ಆಗಿ ವಿನಾಯಕ್ ಕುಲಕರ್ಣಿ ಕಾರ್ಯ ನಿರ್ವಹಿಸಿದರು