164ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಮತ್ತು ವಿಶ್ವಪರಿಸರ ದಿನಾಚರಣೆ.
ಬೀದರ ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ದಿನಾಂಕ:11/06/2024ರAದು ಮಂಗಳವಾರ ಸಂಜೆ: 6.30ಗಂಟೆಗೆ 164ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಮತ್ತು ವಿಶ್ವಪರಿಸರ ದಿನಾಚರಣೆ ಜರುಗಿತು.
ಸಾನಿದ್ಯ ವಹಿಸಿರುವ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಆಶೀರ್ವಚನ ನೀಡುತ್ತಾ ಶರಣರ ಲಿಂಗಾAಗ ಸಿದ್ದಾಂತವು ವೈಯಕ್ತಿಕ ಶಾಂತಿ, ಸಮಾದಾನಕ್ಕೆ ಅಷ್ಟೆ ಸಿಮೀತವಾಗಲಾರದೆ ಬೇರೆಯವರು ಕೂಡಾ ಲಿಂಗಾAಗ ಸಾಮರಸ್ಯದ ಸುಖ ಶಾಂತಿ ಉಣಬಡಿಸುವ ಕಾರ್ಯವಾಗಬೇಕಾಗಿದೆ. ಭಕ್ತನು ಐಕ್ಯ ಸ್ಥಳ ಅಥವಾ ಶರಣ ಸ್ಥಳದಲ್ಲಿದಲ್ಲಿದರೂ ಸ್ತುತಿ ನಿಂದೆಗಳು ಬಂದರು ಸಮಾಧಾನದಿಂದ ಬಸವ ತತ್ವ ಪ್ರಚಾರಕ್ಕಾಗಿ ಜೀವನ ತ್ಯಾಗ ಮಾಡಬೇಕು. 12ನೇ ಶತಮಾನದಲ್ಲಿ 1ಲಕ್ಷ 96ಸಾವಿರ ಜಂಗಮರು ಬಸವ ಧರ್ಮ ಪ್ರಸಾರ ಮಾಡುತ್ತಿದ್ದರು. ಮುಂದುವರೆದು ಮಾತನಾಡುತ್ತಾ ಶರಣರ ಸತ್ಸಂಗದಿAದ ವ್ಯಕ್ತಿಯ ಮನಸ್ಸು, ಸಮಚಿತ್ತ ಶಾಂತಿ, ಮತ್ತು ನೆಮ್ಮದಿ ಲಭಿಸುತ್ತದೆ. ಲಿಂಗಪೂಜೆ, ಕಾಯಕ, ದಾಸೋಹ ತತ್ವಗಳು ನಿರಂತರ ನಡೆಯಬೇಕು. ಶರಣರ ಸಂಘ ಮಾಡುವುದರಿಂದ ಮನದ ಮಲಿನತೆ ದೂರವಾಗಿ ವ್ಯಕ್ತಿಯಲ್ಲಿ ಮಹಾಶಕ್ತಿ ಉದಯವಾಗುತ್ತದೆ. ಮತ್ತು ಬದುಕು ಸಂತೃಪ್ತಿಯಿAದ ಸಾಗುತ್ತದೆ ಎಂದು ನುಡಿದರು.
ಬೀದರದ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರಾದ ಚಂದ್ರಕಾAತ ಮಿರ್ಚೆಯವರು ಸಸಿಗೆ ನೀರು ಎರೆವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಭಾವದಲ್ಲಿ ಒಬ್ಬ ದೇವರು’ ಎಂಬ ಪ್ರಭುದೇವರ ವಚನವನ್ನು ಉಲ್ಲೇಖಿಸುತ್ತಾ ಹಾಡಿನ ಮುಖಾಂತರ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.
ಬಸವಕಲ್ಯಾಣದ ಬಂದವರ ಓಣಿಯ ಪರಮ ಪೂಜ್ಯ ಸತ್ಯಕ್ಕನವರು ಅನುಭಾವ ನುಡಿ ಮಂಡಿಸುತ್ತಾ ಜೀವನದಲ್ಲಿ ನಾನು ಯಾರು? ಎಂಬ ಪ್ರಶ್ನೆಯನ್ನು ಅರಿತು ಜೀವನ ಮಾಡಬೇಕು. ಜೀವನದ ಪರಮ ಗುರಿಯು ಪರಮ ಸತ್ಯ, ಪರಮ ಶಾಂತಿ, ಮತ್ತು ಪರವಸ್ತುವಿನ ಸಾಕಾರಗೊಳ್ಳಲು ಇಷ್ಟಲಿಂಗ ಶಿವಯೋಗ, ಕಾಯಕ ದಾಸೋಹ ತತ್ವಗಳನ್ನು ಅರಿತು ಜೀವನದಲ್ಲಿ ದೇವರ ದಿವ್ಯದರ್ಶನ ಪಡೆಯುವಂತಾಗಬೇಕು. ಇಷ್ಟಲಿಂಗ ಶಿವಯೋಗ ಮಾಡುವುದರಿಂದ ಅಂಗವು, ಲಿಂಗಮಯವಾಗುತ್ತದೆ. ವ್ಯಕ್ತಿಯು, ಸರ್ವಾಂಗಲಿAಗಿಯಾಗುತ್ತಾನೆ. ಅಂತರAಗ ಬಹಿರಂಗ ಶುದ್ದಿವಾಗುತ್ತದೆ. ಶಿವಯೋಗಿ ಸಿದ್ದರಾಮೇಶ್ವರವರು ಕರ್ಮಯೋಗಿಯಾಗಿದ್ದರು, ಅಲ್ಲಮ ಪ್ರಭುದೇವರ ಉಪದೇಶದಿಂದ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ ಪಡೆದುಕೊಂಡು ಲಿಂಗಾAಗ ಸಾಮ್ಯರಸ್ಯದ ಪರಮಾನಂದ ಪಡೆದಿದ್ದಾರೆ.
ಎಲ್ಲ-ಎಲ್ಲವನರಿದು ಫಲವೇನು? ತನ್ನ ತಾನರಿಯಬೇಕಲ್ಲವೇ, ಎಂದು ವೀರವೈರಾಗ್ಯನಿಧಿ ಅಕ್ಕಮಹಾದೇವಿಯವರು, ತಮ್ಮ ವಚನಗಳ ಮುಖಾಂತರ ಸಂದೇಶ ನೀಡಿದ್ದಾರೆ. ಎಂದು ವಿಷಯ ಪ್ರತಿಪಾದಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿಯಾದ ಸಂಜನಾರವರು ಪಂಚಾಚಾರದಲ್ಲಿಯ ಭೃತ್ಯಾಚಾರ ಕುರಿತು ಮಾತನಾಡಿದರು.
ನಿವೃತ್ತ ಚಿತ್ರಕಲಾ ಶಿಕ್ಷಕರಾದ ಶ್ರೀಕಾಂತ ಶೋಭಾ ಬಿರಾದಾರ ಮತ್ತು ನಿವೃತ್ತ ದೈಹಿಕ ಶಿಕ್ಷಕರಾದ ಶಿವಾನಂದ ಮಠಮತಿಯವರನ್ನು ಪೂಜ್ಯ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಡಾ. ಚನ್ನಬಸವ ಪಟ್ಟದೇವರ ಕಾರ್ಯದರ್ಶಿಗಳಾದ ಪ್ರೋ. ಎಸ್.ಬಿ ಬಿರಾದಾರ ಅಧ್ಯಕ್ಷತೆ ವಹಿಸಿದರು.
ಇದೇ ಸಂದರ್ಭದಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ, ಪರಿಸರ ಪ್ರಜ್ಞೆಯ ಕುರಿತು ಶಿವಲೀಲಾ ರವರ ನಿರ್ದೇಶನದಲ್ಲಿ ಕಿರುನಾಟಕ ಸಾದರಪಡಿಸಲಾಗಿತ್ತು. ದಾಸೋಹಿಗಳಾದ ಮಹಾನಂದಾ ರಘುನಾಥ ಕೋಟೆ, ಆಕಾಶ ಕೋಟೆ, ಮತ್ತು ಕವಿತಾ ಭೀಮರಾವ ಪಾಟೀಲ್ ರವರು ಗುರುಬಸವ ಪೂಜೆಯನ್ನು ನೆರವೇರಿಸಿದರು.
ಆಕಾಶ ಕೋಟೆಯವರು ಸ್ವಾಗತ ಕೋರಿದರೆ ಉಮಾಕಾಂತ ಮೀಸೆ, ನಿರೂಪಿಸಿ ವಂದಿಸಿದರು. ಶಾಲಿವಾನ ಬೋಗಾರ ಮತ್ತು ಚನ್ನಬಸಪ್ಪಾ ನೌಬಾದೆ ವಚನಗಾಯನ ನಡೆಸಿಕೊಟ್ಟರು. ಪ್ರಮುಖರಾದ ರಾಜಕುಮಾರ ಜುಬರೆ, ಪ್ರೋ.ಸಂಗ್ರಾಮ ಎಂಗಳೆ, ಸುವರ್ಣಾ ಶರಣಪ್ಪಾ ಚೀಮಕೊಡೆ, ಗುರುನಾಥ ಬಿರಾದಾರ ಮಹೇಶ ಮಜ್ಜಿಗೆ, ಮೀನಾಕ್ಷಿ ಪಾಟೀಲ್. ಲಕ್ಷಿö್ಮ ಬಿರಾದರ, ಕಸ್ತೂರಬಾಯಿ ಬಿರಾದಾರ, ಮಹಾನಂದ ಸ್ವಾಮಿ, ಪ್ರೇಮಾ, ಶಕುಂತಲಾ ಬೆಲ್ದಾಳೆ, ಉಷಾ ಮಿರ್ಚೆ, ತೀರ್ಥಮ್ಮಾ, ಮಾಲಾಶ್ರೀ ಮತ್ತು ನೀಲಕಂಠ ಬಿರಾದಾರ, ಭೀಮಶಂಕರ ಬಿರಾದಾರ ಉಪಸ್ಥೀತರಿದ್ದರು.