ಬೀದರ್

16 ವರ್ಷದೊಳಗಿನ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ಪಟೇಲ್-ಬಿನ್ನಿ ತಂಡ ಶುಭಾರಂಭ

ಬೀದರ್: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ರಾಯಚೂರ ವಲಯದ ವತಿಯಿಂದ 16 ವರ್ಷದೊಳಗಿನ ಕ್ರಿಕೆಟ್ ಪಂದ್ಯಕ್ಕೆ ಸೋಮವಾರ ಚಾಲನೆ ನೀಡಲಿದೆ.
ಆ.25 ರವರೆಗೆ ನಗರದ ನೆಹರು ಮತ್ತು ಹುಮನಾಬಾದ್ ಬಳಿಯ ಮಾಣಿಕನಗರ ಕ್ರೀಡಾಣಗಳದಲ್ಲಿ ಪಂದ್ಯ ನಡೆಯಲಿವೆ. ಜಿ.ಆರ್. ವಿಶ್ವನಾಥ, ಬಿಜ್ರೇಶ್ ಪಟೇಲ್, ಬಿ.ಎಸ್. ಚಂದ್ರಶೇಖರ, ರೋಜರ್ ಬಿನ್ನಿ, ಇರಪಲ್ಲಿ ಪ್ರಶನ್ನ ಸೇರಿ ಐದು ತಂಡಗಳು ಪಾಲ್ಗೊಂಡಿವೆ. 50 ಓವರ್ ಪಂದ್ಯಗಳು ಇದಾಗಿವೆ.
ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಜಿ.ಆರ್. ವಿಶ್ವನಾಥ ಮತ್ತು ಬಿಜ್ರೇಶ್ ಪಟೇಲ್ ತಂಡಗಳ ನಡುವೆ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಬಿಜ್ರೇಶ್ ಪಟೇಲ್ ತಂಡ 50 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 178 ರನ್‌ಗಳಿಸಿತು. ಆದಿತ್ಯ ರಾಠೋಡ್ 54 ರನ್‌ಗಳಿಸಿ ಗಮನ ಸೆಳೆದರೆ, ವಿಶ್ವನಾಥ ತಂಡದ ಬಾಲರ್ ರೋಹಿತ್ 13 ರನ್ ನೀಡಿ, 5 ವಿಕೆಟ್ ಪಡೆದರು. ನಂತರ ಬ್ಯಾಂಟಿAಗ್‌ಗೆ ಇಳಿದ ವಿಶ್ವನಾಥ ತಂಡ 42.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 159 ರನ್‌ಗಳಿಸಿ ಪರಾಭವಗೊಂಡಿತು. 19 ರನ್‌ಗಳಿಂದ ಪಟೇಲ್ ತಂಡ ಜಯಗಳಿಸಿತು.
ಮಾಣಿಕನಗರ ಕ್ರೀಡಾಣಗಳದಲ್ಲಿ ಬಿ.ಎಸ್. ಚಂದ್ರಶೇಖರ ಹಾಗೂ ರೋಜರ್ ಬಿನ್ನಿ ತಂಡಗಳ ನಡುವೆ ಪಂದ್ಯ ನಡೆಯಿತು. ಚಂದ್ರಶೇಖರ ತಂಡ ಮೊದಲು ಬ್ಯಾಂಟಿAಗ್ ಮಾಡಿ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತು. ಬಿನ್ನಿ ತಂಡ 33.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 142 ರನ್‌ಗಳಿಸಿ ಜಯಗಳಿಸಿತು. ಅಂಕಿತರಡ್ಡಿ 52, ವಿರೂಪಾಕ್ಷ 47 ರನ್‌ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
ಉದ್ಘಾಟನೆ: ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಮೊದಲ ಪಂದ್ಯಕ್ಕೆ ಯುವಜನ ಮತ್ತು ಸಬಲೀಕರಣ ಇಲಾಖೆ ಉಪ ನಿರ್ದೇಶಕ ಡಾ.ಗೌತಮ ಅರಳಿ ಚಾಲನೆ ನೀಡಿದರು. ಕೆಎಸ್‌ಸಿಎ ರಾಯಚೂರು ವಲಯದ ಕಲಬುರಗಿ ಜಿಲ್ಲಾ ಸಂಯೋಜಕ ಅರ್ಷದ್ ಹುಸೇನ್, ಪ್ರಮುಖರಾದ ಡಾ.ನಿಲೇಶ್ ಕುಲಕರ್ಣಿ, ಸಂಜಯ ಜಾಧವ್, ವಿನಾಯಕ ಕುಲಕರ್ಣಿ, ತೀರ್ಪುಗಾರರಾದ ಬಸವರಾಜ ಬಿರಾದಾರ್, ವಸಂತ ಕುಲಕರ್ಣಿ  ಇತರರಿದ್ದರು. ಅನೀಲಕುಮಾರ ದೇಶಮುಖ ನಿರೂಪಣೆ ಮಾಡಿದರು.
ಆ.22ರಂದು (ಮಂಗಳವಾರ) ನಗರದ ನೆಹರು ಕ್ರೀಡಾಂಗಣದಲ್ಲಿ ಇರಪಲ್ಲಿ ಪ್ರಶನ್ನ-ಜಿ.ಆರ್. ವಿಶ್ವನಾಥ ತಂಡದ ನಡುವೆ ಹಾಗೂ ಮಾಣಿಕನಗರ ಕ್ರೀಡಾಂಗಣದಲ್ಲಿ ಬಿಜ್ರೇಶ್ ಪಟೇಲ್-ಬಿ.ಎಲ್. ಚಂದ್ರಶೇಖರ ತಂಡಗಳ ನಡುವೆ ಪಂದ್ಯ ನಡೆಯಲಿವೆ.

Ghantepatrike kannada daily news Paper

Leave a Reply

error: Content is protected !!