12 ಗಂಟೆಯ ಒಳಗಾಗಿ ಮಹಿಳೆ ಕೊಲೆ ಆರೋಪಿತರು ಬಂಧನ : SP ಚನ್ನಬಸವಣ್ಣ ಎಸ್.ಎಲ್
ಬೀದರ. ಆಗಸ್ಟ್.23 – ಬೀದರ್ ನ್ಯೂ ಹೌಸಿಂಗ್ ಕಾಲೋನಿಯಲ್ಲಿ ಆಗಸ್ಟ್ 21 ರಂದು ನಡೆದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿತರನ್ನು ಬಂಧಿಸಲಾಗಿದ್ದು, ಆರೋಪಿತರು ಕೊಲೆಯ ಮಹಿಳೆಯ ಮಾವ ಹಾಗೂ ಮೈದುನರಾಗಿದ್ದಾರೆಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹೇಳಿದರು.
ಅವರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಕರೆದ ಸುದ್ಧಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕೊಲೆಯಾದ ಮಹಿಳೆ ಲಕ್ಷಿö್ಮÃ ಬೀದರ ತಾಲ್ಲೂಕಿನ ಮಾಳೆಗಾಂವ ಗ್ರಾಮದ ನಿವಾಸಿಯಾಗಿದ್ದು, ಅದೇ ಗ್ರಾಮದ ಓರ್ವ ವ್ಯಕ್ತಿಯ ಜೊತೆಗೆ ಅಕ್ರಮ ಸಂಬAಧ ಹೊಂದಿದ ಶಂಕೆಯ ಮೇರೆಗೆ ಆರೋಪಿಗಳಾದ ಶಿವಕುಮಾರ ಮಾರುತಿ ರೆವಣಗೆ, ಮಾರುತಿ ಯಲ್ಲಪ್ಪ ರೆವಣಗೆ ಇರ್ವರು ಸೇರಿಕೊಂಡು ಮಹಿಳೆಯ ಹಿಂದೆ ಸಹಚರರನ್ನು ಬಿಟ್ಟು, ಸಹಚರರ ನೀಡಿದ ಮಾಹಿತಿ ಮೇರೆಗೆ ಆರೋಪಿತರು ಸ್ಥಳಕ್ಕೆ ತೆರಳಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬAದಿದೆ ಇನ್ನು ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದರು.