11 ದಿನಗಳ ಮೌನ ಅನುಷ್ಠಾನ ಮುಗಿಸಿದ ಗುರುಬಸವ ಪಟ್ಟದೇವರನ್ನು ಸತ್ಕರಿಸಿ ಆರ್ಶಿವಾದ ಸ್ವೀಕಾರ
ಬೀದರ: ಪರಮ ಪೂಜ್ಯ ಶ್ರೀ ಗುರುಬಸವಲಿಂಗ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಇವರು 11 ದಿನಗಳ ಕಾಲ ಮೌನ ಅನುಷ್ಠಾನ ನೇರವೇರಿಸಿ ಇಂದು ಅವರ ಅನುಷ್ಠಾನ ಮುಗಿಸಿ ಮಂಗಲ ಸಮಾರಂಭದಲ್ಲಿ ಭಾಗವಹಿಸಿ ಪೂಜ್ಯರಿಗೆ ಸತ್ಕರಿಸಿ ಆರ್ಶಿವಾದ ಪಡೆದುಕೊಂಡು ರಾಜ್ಯದ್ಯಂತ ಭಾರತೀಯ ಬಸವಬಳಗ ಸಂಘಟನೆ ಮಾಡುವ ಕುರಿತು ಸುಧೀರ್ಘ ಚರ್ಚೆ ನಡೆಸಲಾಯಿತು.
ರಾಜ್ಯದ್ಯಂತ ಪ್ರವಾಸ ಮಾಡಿ ಲಿಂಗಾಯತ ಸಮಾಜದ ಗಣ್ಯರನ್ನು, ಮಠದ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಬಸವ ಪರ ಸಂಘಟನೆಯನ್ನು ತತ್ವ ನಿಷ್ಠರನ್ನು ಭೇಟಿ ಮಾಡಿ, ನವೆಂಬರ್‍ನಲ್ಲಿ ನಡೆಯುವ ಅನುಭವ ಮಂಟಪ ಉತ್ಸವಕ್ಕಿಂತ ಪೂರ್ವದಲ್ಲಿ ರಾಜ್ಯದ ಪದಾಧಿಕಾರಿಗಳನ್ನು ನೇಮಿಸುವ ಬಗ್ಗೆ ಭಾರತೀಯ ಬಸವ ಬಳಗ ರಾಜ್ಯ ಅಧ್ಯಕ್ಷರಾದ ಬಾಬು ವಾಲಿಯವರು ಸಮಾಲೋಚಿಸಿದರು. ಈ ಸಂಧರ್ಭದಲ್ಲಿ ಲಿಂಗಾಯತ ಒಕ್ಕೂಟದ ಅಧ್ಯಕ್ಷರಾದ ಆನಂದ ದೇವಪ್ಪನವರು ಶಶಿಧರ್ ಕೊಸಂಬೆ ಉಪಸ್ಥಿತರಿದ್ದು ಚರ್ಚಿಸಿದರು.