ಬೀದರ್

ಹೊಸ ಟವರಗಳಿಂದ ತಾಂಡಾಗಳ ಅಭಿವೃದ್ದಿ: ಭಗವಂತ ಖೂಬಾ

ಬೀದರ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಒಟ್ಟು 19 ಗ್ರಾಮ ಮತ್ತು ತಾಂಡಾಗಳಲ್ಲಿ ಬಿ.ಎಸ್.ಎನ್.ಎಲ್. 4-ಜಿ ಮೋಬೈಲ್ ಟವರ್ ಅಳವಡಿಸಿ, ಜನತೆಗೆ ದೂರವಾಣಿ ಸಂಪರ್ಕ ವ್ಯವಸ್ಥೆಯ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರದ ದೂರಸಂಪರ್ಕ ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.

ಅಭಿವೃದ್ದಿ ವಿಷಯದಲ್ಲಿ ಕಳೆದ 10 ವರ್ಷಗಳಲ್ಲಿ ನಾನು ತಾಂಡಾ ಮತ್ತು ಗ್ರಾಮಗಳ ಅಭಿವೃದ್ದಿಗೆ ಕಾಳಜಿ ವಹಿಸಿದ್ದೇನೆ, ವಿಶೇಷವಾಗಿ ತಾಂಡಾಗಳಲ್ಲಿ ನೆಲೆಸಿರುವ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಹೊಸ ಟವರಗಳು ಸಹಾಯವಾಗಲಿವೆ ಅವುಗಳಿಗೆ ಎಂದು ತಿಳಿಸಿದ್ದಾರೆ. ತದನಂತರ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ, ವರದಿಗಳು ಸರ್ಕಾರಕ್ಕೆ ಸಲ್ಲಿಸಿ, ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಈ 19 ಟಾವರ್‍ಗಳು ಮಂಜೂರಿ ಮಾಡಿಸಿಕೊಂಡಿದ್ದೇನೆ.

ಬೀದರ ಜಿಲ್ಲೆಯೂ ಮಹಾರಾಷ್ಟ್ರ, ತೆಲಂಗಾಣ ಬಾರ್ಡರಗೆ ಹೊಂದಿಕೊಂಡಿದ್ದು, ಈ ಗಡಿ ಭಾಗದಲ್ಲಿ ನಮ್ಮ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಮತ್ತು ತಾಂಡಾಗಳಲ್ಲಿ ಯಾವೂದೇ ನೇಟವರ್ಕ ಇಲ್ಲದೆ ಇರುವುದರಿಂದ ಜಿಲ್ಲೆಯ ಔರಾದ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ, ಹುಲಸೂರ, ಕಮಲನಗರ ಮತ್ತು ಬೀದರ ತಾಲೂಕಿನ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು, ಈ ವಿಷಯಗಳು ನನ್ನ ಗಮನಕ್ಕೆ ಬಂದಿತ್ತು, ಆದ್ದರಿಂದ ಕಳೆದ ಬಾರಿ ಸರ್ಕಾರಕ್ಕೆ ಪತ್ರ ಬರೆದು ಈ ವಿಷಯ ಕುರಿತು ಮನವರಿಕೆ ಮಾಡಿ, ಬಿ.ಎಸ್.ಎನ್.ಎಲ್ ಟವರ್ ಅಳವಡಿಸಿ ಅನುಕೂಲ ಮಾಡಿಕೊಡುವಂತೆ ಕೋರಿಕೊಂಡಿದ್ದೆ.

ಔರಾದ ತಾಲೂಕಿನ ಗುಡಪಳ್ಳಿ ಪಂಚಾಯತ ಚಿಂತಾಮಣಿ ತಾಂಡಾ, ಚಿಮೆಗಾಂವ ಪಂಚಾಯತನ ಕಿರಗಣವಾಡಿ ಮತ್ತು ಮಾಣಿಕ ತಾಂಡಾ, ಭಂಡಾರಕುಮಟಾ ಪಂಚಾಯತಿಯ ಮಹಾದೇವ ವಾಡಿ ತಾಂಡಾ, ನಾಗಮಾರಪಳ್ಳಿ ಪಂಚಾಯತಿಯ ಮಾಣೂರ (ಕೆ) ಗ್ರಾಮ, ಜೋಜನಾ ಪಂಚಾಯತಿಯ ನಾಗೂರಾ (ಬಿ), ಚೌದ್ರಿ ಬೆಳಕೋಣಿ ಪಂಚಾಯತಿಯ ರಾಮಸಿಂಗ್ ಥಾಂಡಾ, ಮುರ್ಕಿ ಪಂಚಾಯತಿಯ ವಾಗನಗೀರ ವಾಡಿಗಳಲ್ಲಿ ಅಳವಡಿಸಲಾಗುತ್ತಿದೆ.

ಕಮಲನಗರ ತಾಲೂಕಿನ ಚಿಕ್ಲಿ (ಯು) ಪಂಚಾಯತಿಯ ವಾಸಂ ತಾಂಡಾ, ಕಮಲನಗರ ಪಂಚಾಯತಿಯ ಮುಖೇಡ್ ಮತ್ತು ದಾಬಕಾ (ಸಿಎಚ್) ಪಂಚಾಯತಿಯ ರಾಮಸಿಂಗ್ ಥಾಂಡಾಗಳಲ್ಲಿ ಹೊಸ ಟಾವರ್ ಅಳವಡಿಸಲಾಗುತ್ತಿದೆ.

ಬಸವಕಲ್ಯಾಣ ತಾಲೂಕಿನ ಕಲಖೋರ ಪಂಚಾಯತಿಯ ದೇವಿ ತಾಂಡಾ, ಉಜಳಂಬ ಪಂಚಾಯತಿಯ ನವಚಂದವಾಡಿ, ಹುಲಸೂರ ಪಂಚಾಯತಿಯ ಅಂತರಭಾರತಿ ತಾಂಡಾ, ಭಾಲ್ಕಿ ತಾಲೂಕಿನ ಮೋರಂಬಿ ಪಂಚಾಯತಿಯ ಫುಲದರವಾಡಿ ಮತ್ತು ಮದಕಟ್ಟಿ ಪಂಚಾಯತಿಯ ಬಾಜೋಳಗಾ ಗ್ರಾಮಗಳಲ್ಲಿ ಹೊಸ ಟಾವರ್ ಅಳವಡಿಸಲಾಗುತ್ತದೆ.

ಹುಮನಾಬಾದ ತಾಲೂಕಿನ ಘಾಟಬೊರಾಳ ಪಂಚಾಯತಿಯ ಝರಲ ತಾಂಡಾ, ಬೀದರ ತಾಲೂಕಿನ ಅಲಿಯಾಬಾದ ಪಂಚಾಯತನ ಅಲಿಯಾಬಾದ ಏರಪೋರ್ಸ ಏರಿಯಾ ಬಳಿ, ಚಿದ್ರಿಯ ಏರಫೋರ್ಸ ಏರಿಯಾ ಬಳಿ ಹೊಸ ಟಾವರಗಳು ಅಳವಡಿಸಲಾಗುತ್ತಿದೆ.

ಈ ಎಲ್ಲಾ ಹೊಸ ಟಾವರಗಳ ಅಳವಡಿಕೆಯ ಕೆಲಸವು ಶೀಘ್ರದಲ್ಲಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ಇಲಾಖೆಯಿಂದ ಬಂದಿರುತ್ತದೆ, ಕೆಲವೆ ದಿನಗಳಲ್ಲಿ ಈ ಗ್ರಾಮಗಳ, ತಾಂಡಾಗಳ ಜನರಿಗೆ ಮೋಬೈಲ್ ಟಾವರ್ ವ್ಯವಸ್ಥೆಯಾಗಲಿದೆ ಎಂದು ಮಾಜಿ ಸಚಿವ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿ, ನನ್ನ ಮನವಿಗೆ ಸ್ಪಂದಿಸಿ, ನಮ್ಮ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿರುವ ಮಾನ್ಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ಮತ್ತು ದೂರ ಸಂಪರ್ಕ ಸಚಿವರಾದ ಶ್ರೀ ಜ್ಯೋತಿರಾಧಿತ್ಯ ಸಿಂಧಿಯಾರವರಿಗೆ ಜನತೆಯ ಪರವಾಗಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!