ಹೊಮಿಯೊಪತಿ ಡಾ.ಶಿವಾನಂದ ಹೂಗಾರಗೆ ಅತ್ಯುನ್ನತ ಗೌರವ ಸಮಾಜ ಸೇವೆ ಸಾಧನಾ ಪ್ರಶಸ್ತಿ ಪ್ರದಾನ
ಬೀದರ್: ತಾಲೂಕಿನ ಆಣದೂರ ಗ್ರಾಮದವರಾದ ಶಿವಾನಂದ್ ಹೂಗಾರ್ ಅವರಿಗೆ ಪ್ರತಿಷ್ಠಿತ ಏಷಿಯಾ ಟುಡೇ ಮೀಡಿಯಾ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಅತ್ಯುನ್ನತ ಗೌರವದ
ಸಮಾಜ ಸೇವೆ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ನಂದಿ ಹೋಮಿಯೋಪತಿ ಕೇಂದ್ರಗಳ ಸಮೂಹಗಳ ಅಧ್ಯಕ್ಷರಾದ ಶಿವಾನಂದ್ ಹೂಗಾರ್ ಅವರಿಗೆ ಪ್ರತಿಷ್ಠಿತ ಏಷಿಯಾ ಟುಡೇ ಮೀಡಿಯಾ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಅತ್ಯುನ್ನತ ಗೌರವದ
“ಸಮಾಜ ಸೇವೆ ಸಾಧನೆ ಪ್ರಶಸ್ತಿಯನ್ನು ” ನೀಡಿ ಪುರಸ್ಕರಿಸಿದೆ .
ಆರೋಗ್ಯ ಕ್ಷೇತ್ರಕ್ಕೆ ಶಿವಾನಂದ್ ಎಸ್ ಹೂಗಾರ್ ಕುಟುಂಬ ಹಲವು ದಶಕಗಳಿಂದ ಮಹತ್ವದ ಸೇವೆ ಸಲ್ಲಿಸುತ್ತಿದ್ದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ ಜಿಲ್ಲೆಯ ಜನರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೋಮಿಯೋಪತಿ ಕ್ಷೇತ್ರದಲ್ಲಿ ಅವರ ಹೆಜ್ಜೆ ಗುರುತುಗಳು ಅನುಕರಣೀಯ. ಅವರ ಈ ಸಾಧನೆಗಾಗಿ pride of nation award – 2024 ವರ್ಣರಂಜಿತ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಲೋಕಸಭಾ ಸದಸ್ಯರು ಮತ್ತು ಖ್ಯಾತ ಹೃದ್ರೋಗ ತಜ್ಞರಾದ ಡಾಕ್ಟರ್ ಸಿ.ಎನ್ ಮಂಜುನಾಥ್ ಅವರು ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದಾರೆ.
ಏಷಿಯಾ ಟುಡೇ ಮೀಡಿಯಾ ಅಧ್ಯಕ್ಷ ಪಿ.ಕೆ.ಚೌದರಿ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.