ಬೀದರ್

ಹೈನುತ್ಪಾದನೆಯಲ್ಲಿ ರಾಷ್ಟ್ರದಲ್ಲಿಯೇ ಬೀದರ್ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ಗುರಿ: ಡಾ.ಹಿರೇಮಠ

ಬೀದರ್: ಹೈನುತ್ಪಾದನೆಯಲ್ಲಿ ಬೀದರ್ ಜಿಲ್ಲೆಯನ್ನು ಇಡೀ ರಾಷ್ಟ್ರ ಮಟ್ಟದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪಣ ತೊಟ್ಟಿದೆ ಎಂದು ಟ್ರಸ್ಟ್‍ನ ಹೈನುಗಾರಿಕೆ ಕಾರ್ಯಕ್ರಮದ ನಿರ್ದೇಶಕರಾದ ಡಾ.ಎಸ್.ಎಸ್ ಹಿರೇಮಠ ತಿಳಿಸಿದರು.
ರವಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರಾಜ್ಯಸಭಾ ಸದಸ್ಯರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ.ವಿರೇಂದ್ರ ಹೆಗ್ಗಡೆಯವರು ಬೀದರ್ ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಮಾಡಲು ತೆಗೆದುಕೊಂಡ ತಿರ್ಮಾನಗಳ ಹಾಗೂ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ವಿವರಿಸಿದಾಗ ಮೋದಿಜಿಯವರು ಡಾ.ಹೆಗ್ಗಡೆಯವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ ಲಭ್ಯವಿರುವ ದೇವಣಿ ತಳಿಯನ್ನು ಸದುಪಯೋಗಪಡಿಸಿಕೊಂಡು ಇಲ್ಲಿಯ ಹೈನುತ್ಪಾದಕರ ಸಂಘಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ರಾಜ್ಯ ಸಭಾ ಸಂಸದರ ನಿಧಿಯಲ್ಲಿ 2022-23 ನೇ ಸಾಲಿನ ಮೊದಲ ಹಂತದ ರೂ. 250 ಕೋಟಿಗಳ ವೆಚ್ಚದಲ್ಲಿ ಬೀದರ ಜಿಲ್ಲೆಯಲ್ಲಿ ನೂತನವಾಗಿ 07 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗಿದೆ, 42 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪಾರದರ್ಶಕತೆ ಮೂಡಿಸಲು ಪರೀಕ್ಷೆ ಉಪಕರಣಗಳನ್ನು ಎ.ಎಮ್.ಸಿ.ಯು ಮಷಿನ್‍ಗಳನ್ನು ವಿತರಿಸಲಾಗಿದೆ. 34 ಸಂಘಗಳಿಗೆ ನಿಖರವಾಗಿ ತೂಕ ಕಂಡು ಹಿಡಿಯಲು ಅಳತೆಯ ಇ.ಡಬ್ಲ್ಯು.ಎಸ್ ಯಂತ್ರ, 49 ಸಂಘಗಳಿಗೆ ಹಾಲಿನಲ್ಲಿರುವ ಜಿಡ್ಡು ಪರೀಕ್ಷೆ ಮಾಡುವ ಯಂತ್ರಗಳು ನೀಡಲಾಗಿದೆ. 29 ಸಂಘಗಳಿಗೆ ಹಾಲು ಸಂಗ್ರಹಣೆ ಉಪಕರಣಗಳಾದ ಕ್ಯಾನ್, ಟ್ರೇ, ಲೀಟರ್ ಸೇಟ್ ನೀಡಲಾಗಿದೆ. 38 ಸಂಘಗಳಿಗೆ ಸಭೆ ನಡೆಸಲು ಎಕ್ಷಿಕೆಟಿವ್ ಕುರ್ಚಿಗಳು, ಕಪಾಟುಗಳು, ಇತರೆ ಕುರ್ಚಿಗಳು ಹಾಗೂ ಕಚೇರಿ ಟೇ¨ಲ್‍ಗಳನ್ನು ವಿತರಿಸಲಾಗಿದೆ. ಒಟ್ಟಾರೆ ಮೊದಲನೇ ಹಂತದಲ್ಲಿ ಒಟ್ಟು ಬೀದರ ಜಿಲ್ಲೆಯ 136 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮೂಲಭೂತ ಸೌಕಾರ್ಯಗಳನ್ನು ಒದಗಿಸಲಾಗಿದೆ. ಎರಡನೇ ಹಂತದ 2023-24ನೇ ಸಾಲಿನ ರೂ.2.50/- ಕೋಟಿಗಳ ವೆಚ್ಚದಲ್ಲಿ 10 ಸಂಘಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು, ಪಾರದರ್ಶಕತೆ ಮೂಡಿಸಲು 109 ಸಂಘಗಳಿಗೆ ಪರೀಕ್ಷೆ ಉಪಕರಣಗಳು ಮಂಜುರಾತಿಯಾಗಿರುತ್ತದೆ. 192 ಸಂಘಗಳಿಗೆ 1500 ಸ್ಟೀಲ್ ಕ್ಯಾನ್‍ಗಳನ್ನು ನೀಡುವ ಮೂಲಕ ಬೀದರ್ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಹೈನುದ್ಯಮ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಎರಡನೇ ಹಂತದಲ್ಲಿ ಒಟ್ಟು ಬೀದರ ಜಿಲ್ಲೆಯ 311 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮೂಲಭೂತ ಸೌಕಾರ್ಯಗಳನ್ನು ಮಂಜೂರಾತಿಗೊಂಡಿರುತ್ತದೆ. ಜಿಲ್ಲೆಯಲ್ಲಿ ಹಾಲು ಸಂಗ್ರಹಣೆ ಹೆಚ್ಚಿಸಲು ಸಮತೋಲನ ಪಶು ಆಹಾರದ ಬಳಕೆ 180 ಟನ್ ರಿಂದ 550 ಟನ್ ಹೆಚ್ಚಿಸಲಾಗಿದೆ, ಹಸಿರು ಮೇವಿನ ಬೆಳೆ ಬೆಳೆಯಲು ಪೆÇ್ರೀತ್ಸಹ ರೂಪವಾಗಿ ಹಸಿರು ಮೇವಿನ ಬೀಜಗಳ ಮತ್ತು ಬೇರುಗಳು ಉಚಿತವಾಗಿ ನೀಡಲಾಗಿರುತ್ತದೆ, ಶುದ್ಧ ಹಾಲಿನ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಲು ಹಾಲು ಉತ್ಪಾದಕರಿಗೆ ಮತ್ತು ಸಂಘಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ಪರೀಶೀಲನೆ ಮಾಡಲಾಗುತ್ತದೆ. ಇದರಿಂದ ಹಾಲಿನ ಗುಣಮಟ್ಟ ಹೆಚ್ಚಿಲು ಉತ್ತಮ ಹಾಲು ಹಾಗೂ ಹಾಲಿನ ಉತ್ಪನಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು, ವೈಜ್ಞಾನಿಕವಾಗಿ ಹೈನು ರಾಸುಗಳ ನಿರ್ವಹಣೆ ಮಾಡಲು 4050 ಜನ ಹಾಲು ಉತ್ಪಾದಕರಿಗೆ ತರಬೇತಿ ನೀಡಲಾಗಿದೆ, 35 ರೈತರಿಗೆ ಹೈನುಗಾರಿಕೆ ಅಧ್ಯಾಯನ ಪ್ರವಾಸ ಮಾಡಿಸುವುದರ ಮುಲಕ ಉತ್ಪಾದಕರಿಗೆ ಹೆಚ್ಚಿನ ಅರಿವು ಮೂಡಿಸಲಾಗಿದೆ, ರಾಸುಗಳ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಕಾಲು ಬಾಯಿ ರೋಗದ ವಿರುದ್ಧ ಲಸಿಕೆ, ಬರಡು ದನಗಳ ಚಿಕಿತ್ಸೆ ನೀಡಲಾಗಿದೆ, ಕೃತಕ ಗರ್ಭಧಾರಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ, ಜಂತು ನಿವಾರಕ ಔಷಧಿಗಳ ವಿತರಣೆ ಮಾಡಲಾಗಿದೆ, ಖನಿಜ ಮಿಶ್ರಣ ಹಾಗೂ ಸಂಮೃದ್ಧಿ ಪೂರಕ ಆಹಾರ ಬಳಕೆ ಬಗ್ಗೆ ತಿಳುವಳಿಕೆ ನೀಡಲಾಗಿದೆ, ವಿವಿಧ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಉತ್ಪಾದಕರಿಗೆ 614 ರಾಸುಗಳನ್ನು ಖರೀದಿಸಿ ಅವನ್ನು ವಿತರಿಸಲಾಗಿದೆ ಎಂದು ಹಿರೇಮಠ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕರಾದ ಪ್ರವೀಣಕುಮಾರ, ಟ್ರಸ್ಟ್‍ನ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ವೀರುಪಾಕ್ಷ ಗಾದಗಿ, ಬೀದರ್ ಉತ್ತರ ಕ್ಷೇತ್ರದ ನಿರ್ದೇಶಕ ಧರ್ಮೇಂದ್ರ, ಬೀದರ್ ದಕ್ಷಿಣ ಕ್ಷೇತ್ರದ ನಿರ್ದೇಶಕ ಸಂಜಯ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.

Ghantepatrike kannada daily news Paper

Leave a Reply

error: Content is protected !!