ಹಿರಿಯ ನಾಗರಿಕರಿಂದ ನಮ್ಮ ಮಣ್ಣು, ನಮ್ಮ ದೇಶ, ನಮ್ಮ ಸ್ವಾಭಿಮಾನ ಕಾರ್ಯಕ್ರಮ- ವಿಜಯ ಕುಮಾರ್
ಬೀದರ್ ನಗರದ ಗುರು ನಾನಕ್ ಕಾಲೋನಿಯಲ್ಲಿ ರುವ ವೈಷ್ಣವಿ ಕನ್ವೆನ್ಷನ ಹಾಲ್ ನಲ್ಲಿ, ಜೈಹಿಂದ್ ಹಿರಿಯ ನಾಗರಿಕರಿಂದ ವಿಶ್ವ ಜೀವ ವೈವಿಧ್ಯ ದಿನ ವನ್ನು ಆಚರಿಸಲಾಯಿತು. ಸಿ.ಬಿ. ಕಾಲೇಜ್ ಭಾಲ್ಕಿಯಲ್ಲಿ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ವಿಜಯ ಕುಮಾರ್ ಸೂರ್ಯಾನ್ ರವರು ವಿಶ್ವ ಜೀವ ವೈವಿಧ್ಯ ದಿನವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರಕೃತಿಯು ನಮಗೆ ನೆಲ, ಜಲ, ಹಾಗೂ ಅರಣ್ಯವನ್ನು ಉಚಿತವಾಗಿ ನೀಡಿದೆ. ಅವು ಗಳನ್ನು ಪೋಲು ಮಾಡದೆ ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದರು. ಅವರು ಇಂದು ಜೈಹಿಂದ್ ಹಿರಿಯ ನಾಗರಿಕರ ಸಂಘದಲ್ಲಿ ವಿಶ್ವ ಜೀವ ವೈವಿದ್ಯ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿ ದ್ದರು. ಪ್ರಕೃತಿಯಿಂದ ನಮಗೆ ಉಚಿತವಾಗಿ ದೊರೆತಿರುವ ನೀರು,ಮಣ್ಣು ಹಾಗೂ ಗಿಡ ಮರಗಳು ಅಮೂಲ್ಯವಾದವು. ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡರೆ ಮುಂದಿನ ಪೀಳಿಗೆಗಾಗಿ ಇವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗು ತ್ತದೆ. ಆದ್ದರಿಂದ ಇವುಗಳ ಬಗ್ಗೆ ಜನರು ಕಾಳಜಿ ವಹಿಸಬೇಕೆಂದು ಕರೆ ನೀಡಿ ದರು. ಸಂಘದ ಕಾರ್ಯದರ್ಶಿ ಹಾಗೂ ಪರಿಸರ ತಜ್ಞ ವೀರ ಭದ್ರಪ್ಪ ಉಪ್ಪಿನರವರು ಪ್ರಾರ್ಥನಾ ಗೀತೆಯನ್ನು ಹಾಡಿದರು, ಹಾಗೂ ನಿರೂಪ ಣೆಯನ್ನು ಮಾಡಿದರು. ಗಿಡಗಳು ಹಾಗೂ ಮಣ್ಣಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾ ಟಿಸಲಾಯಿತು. ರಾಮಕೃಷ್ಣ ಸಾಳೆಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮಚ್ಚೆಂದ್ರ ಗೋರಖನಾಥ- ಗುಂಡಮ್ಮ, ಶಂಕರ್ ಚಿದರಿ- ಕಲಾವತಿ ಹಾಗೂ ವಿಜಯ್ ಕುಮಾರ ಸೂರ್ಯಾನ್- ತಾರಾರವರ ಹುಟ್ಟು ಹಬ್ಬವನ್ನು ಆಚರಿಸ ಲಾಯಿತು. ದೇವೇಂದ್ರ ಕಮಲ್, ರಾಮಕೃಷ್ಣ ಮುನಿಗ್ಯಾಲ್, ರಾಜೇಂದ್ರ ಸಿಂಗ್ ಪವಾರ, ಬಸವರಾಜ್ ಘುಳೆ, ಡಾಕ್ಟರ್ ಸುಭಾಷ ಪೋಲಾ, ವಿಜಯಕುಮಾರ್ ಆತನೂ ರ್, ಅರವಿಂದ್ ಕುಲಕರ್ಣಿ, ರಾಮಚಂದ್ರ ಗಜರೆ, ಶಿವ ರಾಯ, ಎಂ.ಏನ್. ಕುಲಕರ್ಣಿ, ಸೋಮೇಶ್ವರ್, ಸೂರ್ಯ ಪ್ರಕಾಶ್, ಸೋಮೇಶ್, ಮಹಾಲಿಂಗಪ್ಪ ಬೆಳದಾಳೇ, ಮೋಹನ್ ಎಲನೂರ್, ಸಂಜು ಪಾಟೀಲ್,ಅಶೋಕ ಶೀಲ ವಂತ್,ಮಲ್ಲಿಕಾರ್ಜುನ ಪಾಟೀಲ್, ಸುಧಾಕರ್ ಗಾದಗಿ, ವಿಜಯಲಕ್ಷ್ಮಿ, ಸಿಮರಾನ್ ಮುಂತಾದವರು ಹಾಜರಿದ್ದರು. ನಾರಾಯಣರಾವ್ ಕಾಂಬಳೆಯವರು ಸ್ವಾಗತಿಸಿದರು. ಕೊನೆಯಲ್ಲಿ ಕೋಶಾಧ್ಯಕ್ಷರಾದ ಗಂಗಪ್ಪ ಸಾವಳೆಯವರು ವಂದಿಸಿದರು. ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ಕಾ ರ್ಯಕ್ರಮವು ಮುಕ್ತಾಯ ಗೊಂಡಿತು.