ಬೀದರ್

ಹಳ್ಳಿಖೇಡ(ಬಿ) ಪುರಸಭೆ: ವ್ಯಕ್ತಿ ಸಂಬAಧಿತ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೀದರ, ಜುಲೈ 27 – ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ 4ರ ಅನುದಾನದಡಿ ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ(ಬಿ) ಪುರಸಭೆಯ ಮೂಲ ಕ್ರಿಯಾಯೋಜನೆಯಲ್ಲಿ ಬಾಕಿ ಉಳಿದಿರುವ ವ್ಯಕ್ತಿ ಸಂಬAಧಿತ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯ ಪಡೆದುಕೊಳ್ಳಲು ಶೇ. 24.10%, ಶೇ.7.25% ಮತ್ತು ಶೇ.5% ನಗರೋತ್ಥಾನ 4 ಯೋಜನೆ ಅಡಿಯಲ್ಲಿ ಹಳ್ಳಿಖೇಡ(ಬಿ) ಪಟ್ಟಣದ ನಿವಾಸಿಯಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಬಡ ಜನರು ಹಾಗೂ ವಿಕಲಚೇತನ ಅಂಗವಿಕಲರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಶೇ.24.10 ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಮೀಟಸಲಿಟ್ಟಿರುವ ಕಾಮಗಾರಿಗಳ ವಿವರ: ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕದ ವೆಚ್ಚವನ್ನು ಭರಿಸುವುದು. ಪರಿಶಿಷ್ಟ ಜಾತಿ, ಮಹಿಳಾ ಫಲಾನುಭವಿಗಳಿಗೆ ಬ್ಯೂಟಿ ಪಾರ್ಲರ ಟ್ರೇನಿಂಗ. ಬಿ.ಇ., ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಲ್ಯಾಪಟಾಪ ವಿತರಣೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ. ವಿದ್ಯಾರ್ಥಿಗಳಿಗೆ ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಫಲಾನುಭವಿಗಳಿಗೆ ಪ್ರೋತ್ಸಾಹಧನ ಹಾಗೂ ಮಹಿಳಾ ಫಲಾನುಭವಿಗಳಿಗೆ ಹೋಲಿಗೆಯಂತ್ರ.
ಶೇ.7.25 ಯೋಜನೆಯಡಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಮೀಸಲಿಟ್ಟಿರುವ ಕಾಮಗಾರಿಗಳ ವಿವರ: ಇತರೆ ಬಡಜನರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಸಹಾಯಧನ (ಈ ಹಿಂದೆ 1&2ನೇ ಕಂತು ಪಡೆದವರಿಗೆ ಮಾತ್ರ). ಬಿ.ಇ/ಎಂ.ಬಿ.ಬಿ.ಎಸ್ ವಿಧ್ಯಾರ್ಥಿಗಳಿಗೆ ಲ್ಯಾಪಟಾಪ ವಿತರಣೆ. ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ಹಾಗೂ ಕ್ರೀಡೆ,ಕಲೆ,ಸೌಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಫಲಾನುಭವಿಗಳಿಗೆ ಪ್ರೋತ್ಸಾಹಧನ ಮತ್ತು ಮಹಿಳಾ ಫಲಾನುಭವಿಗಳಿಗೆ ಹೋಲಿಗೆಯಂತ್ರ.
ಶೇ.5 ಯೋಜನೆಯಡಿಯಲ್ಲಿ ಅಂಗವಿಕಲ ಚೇತನ ಫಲಾನುಭವಿಗಳಿಗೆ ಮೀಸಲಿಟ್ಟಿರುವ ಕಾಮಗಾರಿಗಳ ವಿವರ: ಅಂಗವಿಕಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ನಿವೇಶನ, ಕೃತಕ ಅಂಗ ಜೋಡಣೆ ಹಾಗೂ ಸಲಕರಣೆ ವಿತರಣೆ.
ಸಲ್ಲಿಸಬೇಕಾದ ದಾಖಲಾತಿಗಳ ವಿವರ: ಜಾತಿ ಮತ್ತು ಆದಾಯ ಪ್ರಮಾಣ, ಆಧಾರ ಕಾರ್ಡ, ಬಿ.ಪಿ.ಎಲ್. ರೇಷನ್ ಕಾರ್ಡ, ಚುನಾವಣಾ ಗುರುತಿನ ಪ್ರತಿ, ಇತ್ತೀಚಿನ 2 ಭಾವಚಿತ್ರ, ಆಸ್ತಿಯ ಮಾಲೀಕತ್ವದ ದಾಖಲಾತಿಗಳ ಪ್ರತಿ, 20 ರೂ. ಛಾಪಾಕಾಗದದ ಕರಾರು ಪತ್ರ.
ಪ್ರಯುಕ್ತ ಅರ್ಹ ಅಭ್ಯರ್ಥಿಗಳು ಆಗಸ್ಟ್ 2 ರೊಳಗಾಗಿ ಸ್ವ-ಲಿಖಿತ ಅರ್ಜಿಯ ಜೊತೆಗೆ ಎಲ್ಲಾ ದಾಖಲಾತಿ ನಕಲು ಪ್ರತಿಗಳನ್ನು ಲಗತ್ತಿಸಿ ಮುಖ್ಯಾಧಿಕಾರಿಗಳು ಪುರಸಭೆ ಹಳ್ಳಿಖೇಡ(ಬಿ) ವಿಳಾಸ್ಕಕೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಗರೋತ್ಥಾನ-4 ಶೇ. 24.10%, ಶೇ.7.25% ಮತ್ತು ಶೇ.5% ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಹಳ್ಳಿಖೇಡ(ಬಿ) ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!