ಬೀದರ್

ಸ್ವಾಭಿಮಾನದಿಂದ ಬದುಕಲು ಕಲಿಸಿಕೊಟ್ಟ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ- ಅನೀಲ ಕುಮಾರ ಬೇಲ್ದಾರ

ನಗರದ ಮೈಲೂರ ಕ್ರಾಸ್ ಹತ್ತಿರ ಇರುವ ಡಾ|| ಬಿ.ಆರ್ ಅಂಬೇಡ್ಕರ ಕಲ್ಚರಲ್ ಐಂಡ ವೇಲಫೇರ ಸೋಸೈಟಿ ಅಡಿಯಲ್ಲಿ ನಡೆಯುತ್ತಿರುವ ನವಜೀವನ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅತಿ ವಿಜ್ರಂಮಣೆಯಿAದ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಪ್ರಪ್ರಥಮವಾಗಿ ಅಕ್ಷರದ ತಾಯಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅದೇರೀತಿ ಡಾ|| ಸರ್ವಪಲ್ಲಿ ರಾಧಕೃಷ್ಣ ಹಾಗೂ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಮಕ್ಕಳ ಶಾಲೆಯಲ್ಲಿ ಹಲವಾರು ವರ್ಷಗಳಿಂದ ವಿಶೇಷ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು ಮತ್ತು ನಾಡಿನ ಹಾಗೂ ದೇಶದ ಸಮಸ್ತ ಮಹಿಳೆಯರಿಗೆ ಮೊಟ್ಟ ಮೊದಲ ಶಾಲೆ ಪ್ರಾರಂಭಿಸಿದ  ಕೀರ್ತಿ ಯಾರಿಗಾದರೂ ಸಲ್ಲುತ್ತದೆ ಅಂದರೆ ಅದು ಶ್ರೀಮತಿ ಸಾವಿತ್ರಿಬಾಯಿ ಪುಲೆ ದಂಪತಿಗಳಿಗೆ. ಇಂದು ದೇಶದಾದ್ಯಂತ ಹೇಣ್ಣು ಮಕ್ಕಳು ಶಿಕ್ಷಣವನ್ನು ಪಡೆದು ಸ್ವಾಭಿಮಾನದಿಂದ ಬದುಕಲು ಕಲಿಸಿಕೊಟ್ಟ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ ಕುರಿತು ಸಂಸ್ಥೆಯ ನಿರ್ದೆಶಕರಾದ ಅನೀಲ ಕುಮಾರ ಬೇಲ್ದಾರ ಅವರು ಪುಲೆ ದಂಪತಿಗಳ ಕುರಿತು ಹಲವಾರು ವಿಷಯಗಳನ್ನು ಶಿಕ್ಷಕರಿಗೆ ಹಾಗೂ ನೆರದಿದ್ದ ಎಲ್ಲಾ ಸದಸ್ಯರಿಗೆ ಮತ್ತು ಮಕ್ಕಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ನವಜೀವನ ವಿಶೇಷ ಮಕ್ಕಳ ವಸತಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಪ್ರವಿಣ ಪಾಟಿಲ ಹಾಗೂ ಇನ್ನುಳಿದ ಎಲ್ಲಾ ಶಿಕ್ಷಕರು ಸಹ ಸಾವಿತ್ರಿಬಾಯಿ ಪುಲೆ ಮತ್ತು ಶಿಕ್ಷಕರ ದಿನಾಚರಣೆ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ವಿಶೇಷವಾಗಿ ಸಂತೊಷ ಸುವರ್ಣಕರ್ ಅವರು ಮಹಾರಾಷ್ಟçದಲ್ಲಿ ಜನಿಸಿದ ಸಾವಿತ್ರಿಬಾಯಿ ಪುಲೆರವರ ಕುರಿತು ಅವರ ಹೊರಾಟ ಹಾಗೂ ಅಲ್ಲಿನ ರಾಜ್ಯ ಸರ್ಕಾರದ ಎಲ್ಲಾ ಸವಲತ್ತುಗಳು ಹಾಗೂ ಸಾವಿತ್ರಿಬಾಯಿ ಅವರ ಕಾರ್ಯಕ್ರಮಗಳು ಕುರಿತು ಸವಿಸ್ತಾರವಾಗಿ ಸಭೆಗೆ ತಿಳಿಸಿದರು. ಅಲ್ಲಿನ ಹೊರಾಟದ ಕುರಿತು ಎಲ್ಲಾ ಶಿಕ್ಷಕರಿಗೆ ತಿಳಿಸಿದರು. ಇದೇ ಸಂಧರ್ಭದಲ್ಲಿ ವಿಶೇ಼ಷ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲನೆಯನ್ನು ಶ್ರೀಮತಿ ವಿಜಯಲಕ್ಷಿö್ಮ ನಾಗರಿ ಅವರು ನೆರವೆರಿಸಿದರು. ಹಾಗೂ ವಸತಿ ನಿಲಯದ ವಾರ್ಡನರಾದ ಸುಭಾಷ ರೆಡ್ಡಿ ಅವರು ಕೊನೆಯಲ್ಲಿ ವಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳ್ಳಿಸಲಾಯಿತು

Ghantepatrike kannada daily news Paper

Leave a Reply

error: Content is protected !!