ಬೀದರ್

ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಹಾಗೂ ಜಾತಿ ಪ್ರಮಾಣ ಪತ್ರ ನೀಡಿದವರ ಮೇಲೆ ಕಾನೂನಿನ ಕ್ರಮಕೈಗೊಳ್ಳಲು ಒತ್ತಾಯ.

 ಬೀದರ: ಶತ ಶತಮಾನಗಳಿಂದ ಶೋಷಣೆಗೊಳಗಾದ ಅಸ್ಪೃಶ್ಯ ಸಮುದಾಯಕ್ಕೆ ಮೀಸಲಾತಿಯನ್ನು ಭಾರತ ಸಂವಿಧಾನಬದ್ಧವಾಗಿ ಕಲ್ಪಸಿರುವುದರಿಂದ ಈ ಜನಾಂಗವು ಸ್ವಲ್ಪ ಮಟ್ಟಿಗೆ ಉನ್ನತ ಶಿಕ್ಷಣ, ವಿವಿಧ ಸರ್ಕಾರಿ ಹುದ್ದೆಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸ್ವಲ್ಪ ನಿಟ್ಟಿಸುರ ಸಿಕ್ಕಿದಂತಾಗಿದ್ದು, ಇಂತಹ ಸಂದರ್ಭದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಇವುಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಅಸ್ಪೃಶ್ಯರ ಜಾತಿಯ ಮೀಸಲಾತಿಯನ್ನು ನಶಿಸಿ ಹೋಗಲು ಜಿಲ್ಲೆಯಲ್ಲಿ ಬಹಳ ಪ್ರಯತ್ನ ನಡೆಯುತ್ತಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ರಾಜಾರೋಷವಾಗಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ ಕ್ರಮ ಸಂಖ್ಯೆ: 19ರ ಬೇಡಜಂಗಮ, ಕ್ರಮ ಸಂಖ್ಯೆ: 23ರ ಭೋವಿ ಮತ್ತು ಕ್ರಮ ಸಂಖ್ಯೆ: 68 ರಲ್ಲಿ ಮಾಲಜಂಗಮ ಇವುಗಳ ಪದವನ್ನು ದುರುಪಯೋಗ ಪಡಿಸಿಕೊಂಡು ಇವುಗಳ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳು ನೀಡುವಲ್ಲಿ ಸಂಬAಧಪಟ್ಟ ಕಂದಾಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು, ಕರ್ತವ್ಯದ ಅಧಿಕಾರ ದುರ್ಬಳಕೆ ಮಾಡಿಕೊಂಡು ಮೇಲ್ಜಾತಿ ಜನಾಂಗಕ್ಕೆ ಸೇರಿದರೂ ಸಹ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದೇ ಉದ್ದೇಶಪೂರ್ವಕವಾಗಿ ಸುಳ್ಳು ಜಾತಿ ಪ್ರಮಾಣ ಪತ್ರಗಳು ರಾಜಾರೋಷವಾಗಿ ನೀಡಿರುತ್ತಾರೆ. ಈ ಗಂಭೀರ ವಿಷಯವನ್ನು ಪುನಃ ತಮ್ಮ ಗಮನಕ್ಕೆ ಈ ಕೆಳಕಂಡ ವ್ಯಕ್ತಿಗಳ ಮೇಲೆ ಹಾಗೂ ಇವರಿಗೆ ಜಾತಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಈ ಕೂಡಲೇ ಕಾನೂನಿನ ಸೂಕ್ತ ಕ್ರಮಕ್ಕೆ ಕೈಗೋಳ್ಳುವಂತೆ ಆಗ್ರಹಿಸಿ ಇಂದು ಪರಿಶಿಸ್ಟ ಜಾತಿ/ ಪರಿಶಿಷ್ಟ ಪಂಗಡ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೊಧಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆÀ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಉಮೇಶಕುಮಾರ ಸೋರಳ್ಳಿಕರ,ಜಿಲ್ಲಾಧ್ಯಕ್ಷರಾದ ಅಭಿ ಕಾಳೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಜಕುಮಾರ ಮೂಲಭಾರತಿ, ಮಹೇಶ ಗೋರನಾಳ್, ರಾಜಕುಮಾರ ಗುನಳ್ಳಿ, ಸಂತೋಷ ಎಣಕೂರೆ, ಚಂದ್ರಕಾAತ ಆರ್. ನಿರಾಟೆ ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!