ಸಿಡಿಲು ಬಡಿದು ಎಮ್ಮೆ ಸಾವು ಪರಿಹಾರ ಚೆಕ್ ವಿತರಿಸಿದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ
ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಹಲವು ಅನಾಹುತಗಳು ಸಂಭವಿಸಿದವು ಅದರಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ವಿಠ್ಠಲಪುರ ಹಾಗೂ ಕಾರಕಪಳ್ಳಿ ಗ್ರಾಮದ ರೈತರ ಆಸರೆಯಾಗಿರುವ ಎಮ್ಮೆ, ಮತ್ತು ಆಕಳು ಸಿಡುಲು ಬಡಿದು ಮೃತಪಟ್ಟ ಹಿನ್ನಲೆಯಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಶೀಘ್ರವೇ ಸರಕಾರದಿಂದ ಪರಿಹಾರ ಒದಗಿಸುವದಾಗಿ ಭರವಸೆ ನೀಡಿದ್ದರು ಅಂತೆಯೇ ರೈತರಿಗೆ ತಲಾ ಪರಿಹಾರಧನದ ೩೭,೫೦೦ ಚೆಕ್ ವಿತರಿಸಿ ಮುಂದಿನ ಉಪಜೀವನಕ್ಕೆ ಆಸರೆ ಮಾಡಿಕೊಟ್ಟಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೇರಾ ಗ್ರಾಮದಲ್ಲಿ ನಡೆದ ಚಿಟ್ಟಗುಪ್ಪ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಸಂತ್ರಸ್ತ ಇಬ್ಬರು ರೈತರಿಗೆ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಪರಿಹಾರ ಚೆಕ್ ವಿತರಿಸಿ ರೈತರಿಗೆ ದೈರ್ಯ ತುಂಬಿದರು.
ಬೀದರ್ ದಕ್ಷಿಣ ಕ್ಷೇತ್ರದ ವಿಠ್ಠಲಪುರ ಗ್ರಾಮದ ರೈತ ಸಾಯಪ್ಪ ತಂದೆ ತಿಪ್ಪಾರೆಡ್ಡಿ ಅವರಿಗೆ ಸೇರಿದ ಎಮ್ಮೆ ಮರದ ಕೆಳಗೆ ಕಟ್ಟಿದ್ದರು ಸಿಡುಲು ಬಡಿದು ಅನಾಹುತ ಸಂಭವಿಸಿ ಎಮ್ಮೆ ಮೃತಪಟ್ಟಿತ್ತು, ಈ ವಿಷಯ ತಿಳಿದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮತ್ತು ಪಶುವೈಧ್ಯಕೀಯ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ತನಿಖೆ ನಡೆದು ದಾಖಲೆ ಸಲ್ಲಿಸಿದ ಮೂರು ದಿನದಲ್ಲಿ ರೈತರಿಗೆ ಪರಿಹಾರ ಧನದ ಚೆಕ್ ತಲುಪುವಂತೆ ಮಾಡಿದ್ದಾರೆ ಮತ್ತು ಕಾರಕಪಳ್ಳಿ ಗ್ರಾಮದ ಬಸವರಾಜ ತಂದೆ ವೀರಪ್ಪ ಎಂಬ ರೈತನ ಆಕಳು ಸಿಡಿಲು ಬಡಿದು ಮೃತಪಪಟ್ಟಿತ್ತು ಅವರಿಗು ಸಹ ಪರಿಹಾರಧನದ ೩೭,೫೦೦ ಚೆಕ್ ವಿತರಿಸಿ ದೈರ್ಯ ತುಂಬಿದ್ದಾರೆ. ಇದೆ ವೇಳೆ ಉತ್ತಮ ಸ್ಪಂದನೆ ಮುಂದುವರೆಯಲಿ ಎಂದು ಎಲ್ಲಾ ಅಧಿಕಾರಿಗಳಿ ಶಾಸಕರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಿಟ್ಟಗುಪ್ಪಾ ತಾಪಂ ಇಒ ಅಕ್ರಮ ಪಾಷಾ, ಆಡಳಿತ ಅಧಿಕಾರಿ ಶರಣಯ್ಯಾ ಮಠಪತಿ, ಉಪ ತಹಶೀಲ್ದಾರ ನಸೀರ ಅಹ್ಮದ, ಕಂದಾಯ ನೀರಿಕ್ಷಕರಾದ ಮಹೇಶ್ ಅನಂತವಾಡಕರ್, ಕರಕನಳ್ಳಿ ಪಶುವೈದ್ಯಾಧಿಕಾರಿ ಬಸವರಾಜ, ಬೆಮಳಖೇಡಾ ಪಶುವೈದ್ಯಾಧಿಕಾರಿ ಕಾಶಿನಾಥ ಚಟ್ಟಳ್ಳಿ, ಗ್ರಾಮ ಆಡಳಿತ ಅಧಿಕಾರಿ ನಿಂಗಪ್ಪ, ಗ್ರಾಮ ಆಡಳಿತ ಅಧಿಕಾರಿ ಕೆರೆ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.