ಬೀದರ್

ಸಾಗರ ಖಂಡ್ರೆ ಅವರು ತಿಪ್ಪಣ್ಣ ಬಂಬುಳಗಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ

ಬೀದರ ಜಿಲ್ಲೆಯ ಬಂಬುಳಗಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಶಾಮರಾವ ಬಂಬುಳಗಿ ಅವರ ತಂದೆ ತಿಪ್ಪಣ್ಣ ಬಂಬುಳಗಿ ಅವರು ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದು,ಈ ಹಿನ್ನೆಲೆ ಬೀದರ ಲೋಕಸಭಾ ಕ್ಷೇತ್ರದ ಸಂಸದರಾದ ಸಾಗರ ಖಂಡ್ರೆ ಅವರು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ಜೊತೆಗೆ ತಿಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಮ ಅರ್ಪಿಸಿ ಗೌರವ ನಮನ ಸಲ್ಲಿಸಿದರು
ಈ ಕುರಿತಾಗಿ ಸಾಗರ ಖಂಡ್ರೆ ಅವರು ಮಾತನಾಡಿ ಶಾಮಣ್ಣ ಬಂಬುಳಗಿ ಅವರು ಕಾಂಗ್ರೆಸ್ ಪಕ್ಷದ ಮುಖಂಡರು ಹಲವು ವರ್ಷಗಳಿಂದ ಹೊರಾಟಗಾರರಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾರೆ,ಎಲ್ಲೆ ಏನೆ ಸಮಸ್ಯೆ ಇದ್ದರು ಫೊನ್ ಮೂಲಕ ಕರೆ ಮಾಡಿ ಅಧಿಕಾರಿಗಳ ಜನಪ್ರತಿನಿಧಿಗಳ ಗಮನಕ್ಕೆ ತಂದು ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಾರೆ ಇವತ್ತು ಅವರ ತಂದೆ ಅಗಲಿದ ಹಿನ್ನೆಲೆ ನಿವಾಸಕ್ಕೆ ಭೇಟಿ ನೀಡಿ ಗೌರನ ನಮನ ಸಲ್ಲಿಸಿ, ತಿಪ್ಪಣ್ಣ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಕುಟುಂಬದವರಿಗೆ ದೇವರು ನೀಡಲಿ ಎಂದರು ಇದೆ ವೇಳೆ ಶಾಮಣ್ಣ ಬಂಬುಳಗಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಕುಮಾರ ಮೇತ್ರೆ,ಸಂಜು ಲಂಜವಾಡಕರ್,ಬಸವರಾಜ,ಬಕ್ಕಪ್ಪ ಬಸರೆಡ್ಡಿ,ಶಿವಕುಮಾರ ವನಾಲಿ ಪಾಟೀಲ್,ನೂರೊದ್ದಿನ್ ಮನ್ನಾಖೇಳಿ,ಶೈಲೆಂದ್ರ ಕವಾಡಿ,ನಾಗೆಂದ್ರಪ್ಪಾ ಮನ್ನಾಖೇಳಿ,ಸಲಾಂ ಪಾಶ್ಯಾ, ಪುಟ್ಟರಾಜ,ಕ್ರಿಸ್ಟೋಫರ್,ಅಶೋಕ ಅರ್ಕಿ,ಅಶೋಕ ಗುಪ್ತಾ ಸೇರಿದಂತೆ ಇನ್ನಿತರರು ಇದ್ದರು

Ghantepatrike kannada daily news Paper

Leave a Reply

error: Content is protected !!