ಸಾಗರ್ ಖಂಡ್ರೆಗೆ ಚಂದ್ರಾಸಿಂಗ್ ಸನ್ಮಾನ
ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಭಾರಿ ಬಹುಮತದಿಂದ ಆಯ್ಕೆಯಾದ ಸಾಗರ್ ಈಶ್ವರ ಖಂಡ್ರೆ ಅವರನ್ನು ಬೀದರ್ ದಕ್ಷಿಣ ಕ್ಷೇತ್ರದ ಮುಖಂಡ ಚಂದ್ರಾಸಿಂಗ್ ಬೀದರ್ನಲ್ಲಿ ಸನ್ಮಾನಿಸಿದರು.
ಸಾಗರ್ ಖಂಡ್ರೆ ಅವರು ಜನಪರ ಕಾಳಜಿಯುಳ್ಳ ಯುವ ನಾಯಕರಾಗಿದ್ದಾರೆ. ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದೆಲ್ಲೆಡೆ ಸಾಗರ್ ಖಂಡ್ರೆ ಅವರಿಗೆ ಮುನ್ನಡೆ ಸಿಕ್ಕಿದೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮುನ್ನಡೆ ದೊರೆತಿದೆ. ತಮ್ಮ ಬೆಂಬಲಿಗರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪ್ರಮುಖರಾದ ಮಾರುತಿ ಮಾಸ್ಟರ್, ತಿಪ್ಪಣ್ಣ ಪಾಟೀಲ, ನಾರಾಯಣರಾವ್ ಮತ್ತಿತರರು ಇದ್ದರು.